Saturday, May 21, 2022
HomeFilm Newsನಿರೀಕ್ಷಿಸದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್….

ನಿರೀಕ್ಷಿಸದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್….

ಬಾಲಿವುಡ್ ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಎಲ್ಲರಿಗೂ ಪರಿಚಿತವಾದ ಹೆಸರು. ಅನೇಕ ಸಿನೆಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ತಮ್ಮ ಚಾರ್ಮ್ ಹೆಚ್ಚಿಸಿಕೊಂಡಿದ್ದರು. ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಈ ನಟಿ ಕಿರುತೆರೆಯಲ್ಲೂ ಸಹ ನಟಿಸುತ್ತಿದ್ದರು. ಜೊತೆಗೆ ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸಹ ಕೆಲಸ ಮಾಡಿದ್ದಾರೆ. ಇದೀಗ ಅವರ ಅಭಿಮಾನಿಗಳು ನಿರೀಕ್ಷಿಸದಂತಹ ಪಾತ್ರವೊಂದರಲ್ಲಿ ಮಾಧುರಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಮಾಧುರಿ ದೀಕ್ಷಿತ್ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಇತ್ತೀಚಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಹೊಸ ಹೊಸ ವೆಬ್ ಸಿರೀಸ್ ಗಳಲ್ಲೂ ಸಹ ನಟಿಸುವ ಮೂಲಕ ಮತಷ್ಟು ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಇದೀಗ ಮಾಧುರಿ ಅವರ ಹೊಸ ಪಾತ್ರ ಅವರ ಅಭಿಮಾನಿಗಳಿಗೆ ಆಶ್ವರ್ಯಕರವಾದ ಸುದ್ದಿಯಾಗಿದೆ. ಹೌದು ನಟಿ ಮಾಧುರಿ ಅಮೇಜಾನ್ ಪ್ರೈಂ ಒಟಿಟಿಯಲ್ಲಿ ನಿರ್ಮಾಣ ವಾಗಲಿರುವ ಹೊಸ ಸಿನೆಮಾದಲ್ಲಿ ಅವರು ನಟಿಸಲಿದ್ದಾರೆ. ಅದರಲ್ಲಿ ಸಲಿಂಗಕಾಮಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಈ ಚಿತ್ರಕ್ಕೆ “ಮಜಾ ಮಾ” ಎಂದು ಹೆಸರನ್ನು ಸಹ ಇಡಲಾಗಿದೆ ಎಂದು ಸುದ್ದಿವಾಹಿನಿಯೊಂದು ಪ್ರಕಟಿಸಿದೆ ಎನ್ನಲಾಗಿದೆ.

ಇತ್ತೀಚಿಗೆ ಒಟಿಟಿ ಯಲ್ಲಿ ಬಿಡುಗಡೆಯಾಗುವ ಸಿನೆಮಾಗಳೂ ಸಹ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸುತ್ತಿವೆ. ವಿಭಿನ್ನ ರೀತಿಯ ಹೊಸ ಹೊಸ ಕಂಟೆಂಟ್ ಗಳನ್ನು ವೀಕ್ಷಕರಿಗೆ ನೀಡುತ್ತಿವೆ. ಇನ್ನೂ ಒಟಿಟಿ ದೈತ್ಯ ಸಂಸ್ಥೆಗಳಾದ ನೆಟ್ ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಂ  ನಡುವೆ ಸಹ ದೊಡ್ಡ ಪೈಪೋಟಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೆ ಅಮೇಜಾನ್ ಪ್ರೈಂ ನಲ್ಲಿ ಸುಮಾರು 41 ಹೊಸ ವೆಬ್ ಸಿರೀಸ್. ಸಿನೆಮಾ ಹಾಗೂ ಶೋಗಳನ್ನು ಘೋಷಣೆ ಮಾಡಲಾಗಿದೆ. ಈ 41 ರಲ್ಲಿ ಮಾಧುರಿ ದೀಕ್ಷಿತ್ ಅಭಿನಯಿಸಲಿರುವ ಸಿನೆಮಾ ಸಹ ಇರಲಿದ್ದು, ಈ ಕುರಿತು ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಇನ್ನೂ ಈ ಸಿನೆಮಾದಲ್ಲಿ ಮಾಧುರಿ ದೀಕ್ಷಿತ್ ರವರು ಸಲಿಂಗಕಾಮಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅನೇಕ ಟ್ವಿಸ್ಟ್ ಗಳು ಈ ಸಿನೆಮಾದಲ್ಲಿ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಕಥೆಯ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತವಾದ ಹೇಳಿಕೆ ಬಿಡುಗಡೆಯಾಗಿಲ್ಲ. ಈ ಕುರಿತು ಮಾಧುರಿ ಸಹ ಪ್ರತಿಕ್ರಿಯೆ ನೀಡಬಹುದು ಎನ್ನಲಾಗುತ್ತಿತ್ತು. ಮಾಧುರಿ ಈ ಪಾತ್ರವನ್ನು ಯಾವ ರೀತಿಯಲ್ಲಿ ಪೋಷಿಸಲಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

- Advertisement -

You May Like

More