ಆಕೆ ಹಾಕಿಕೊಳ್ಳುವ ಡ್ರೆಸ್ ಗಿಂತ ಆ ವಿಡಿಯೋ ಏನು ಅಸಭ್ಯವಾಗಿಲ್ಲ ಎಂದ ಮಾಧವಿಲತ, ರಶ್ಮಿಕಾ ಡೀಪ್ ಫೇಕ್ ವಿಡಿಯೋ ಬಗ್ಗೆ ಹಾಟ್ ಕಾಮೆಂಟ್…..!

ದೇಶದಲ್ಲಿ ಕೆಲವು ದಿನಗಳಿಂದ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈ ಡೀಪ್ ಫೇಕ್ ವಿಡಿಯೋ ಸಿನೆಮಾ ಸೆಲೆಬ್ರೆಟಿಗಳು, ರಾಜಕೀಯ ಪ್ರಮುಖರು, ಅಭಿಮಾನಿಗಳೂ ಸೇರಿದಂತೆ ಅನೇಕರು ರಶ್ಮಿಕಾ ಪರ ಮಾತನಾಡಿದ್ದಾರೆ.…

ದೇಶದಲ್ಲಿ ಕೆಲವು ದಿನಗಳಿಂದ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈ ಡೀಪ್ ಫೇಕ್ ವಿಡಿಯೋ ಸಿನೆಮಾ ಸೆಲೆಬ್ರೆಟಿಗಳು, ರಾಜಕೀಯ ಪ್ರಮುಖರು, ಅಭಿಮಾನಿಗಳೂ ಸೇರಿದಂತೆ ಅನೇಕರು ರಶ್ಮಿಕಾ ಪರ ಮಾತನಾಡಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ನಟಿ ಮಾಧವಿಲತಾ ಸಹ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಬಗ್ಗೆ ಹಾಟ್ ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಈವೆಂಟ್ಸ್, ಸಿನೆಮಾಗಳಲ್ಲಿ ಹಾಕಿಕೊಳ್ಳುವ ಡ್ರೆಸ್ ಗಳಿಗಿಂತ  ವಲ್ಗರ್‍ ಆಗಿ ಏನು ಇಲ್ಲ ಎಂದು ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

AI ತಂತ್ರಜ್ಞಾನ ಬಳಸಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿತ್ತು. ಈ ವಿಡಿಯೋ ದೊಡ್ಡ ಮಟ್ಟದಲ್ಲೇ ವೈರಲ್ ಆಗಿತ್ತು. ಇತ್ತೀಚಿಗೆ ಕೆಲ ಪುಂಡರು AI ಟೆಕ್ನಾಲಜಿಯನ್ನು ಬಳಸಿ ಸೆಲೆಬ್ರೆಟಿಗಳ ಮುಖಗಳನ್ನು ಮಾರ್ಫಿಂಗ್ ಮಾಡಿ ವಿಡಿಯೋ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ರವರ ಮುಖ ಬಳಸಿ ಬೇರೆ ಯುವತಿಯ ವಿಡಿಯೋ ಮಾರ್ಫಿಂಗ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಮುಂದೆ ಈ ರೀತಿಯ ಫೇಕ್ ವಿಡಿಯೋಗಳಿಗೆ ಕಡಿವಾಣ ಹಾಕಲು ಸರ್ಕಾರ ಸಹ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಫೇಕ್ ವಿಡಿಯೋಗೆ ಅಮಿತಾಬ್, ಕೀರ್ತಿ ಸುರೇಶ್, ಮೃಣಾಲ್ ಠಾಕೂರ್‍, ನಾಗಚೈತನ್ಯ, ರಾಜೀವ್ ಚಂದ್ರಶೇಖರ್‍, ಕೆಟಿಆರ್‍, ವಿಜಯ್ ದೇವರಕೊಂಡ ಸೇರಿದಂತೆ ಹಲವರು ಆಕ್ರೋಷ ಹೊರಹಾಕಿದ್ದಾರೆ. ಜೊತೆಗೆ ರಶ್ಮಿಕಾಗೆ ಬೆಂಬಲ ಸೂಚಿಸಿದ್ದಾರೆ.

ಸದಾ ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವಂತಹ ಮಾಧವಿಲತ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಎಲ್ಲರೂ ಒಂದು ಮಾದರಿಯಲ್ಲಿ ರಿಯಾಕ್ಟ್ ಆದ್ರೆ, ಮಾಧವಿಲತಾ ಕುರಿತು ಮತ್ತೊಂದು ರೀತಿಯಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿದಂತಹ ಮಾದವಿಲತಾ ಬೇರೆ ಯುವತಿಯ ದೇಹಕ್ಕೆ ರಶ್ಮಿಕಾ ಫೇಸ್ ಅಟಾಚ್ ಮಾಡಿದ್ದಾರೆ. ಆದರೆ ಆ ವಿಡಿಯೋದಲ್ಲಿ ಅಷ್ಟೊಂದು ಅಸಭ್ಯವಾಗಿ ಏನು ಇಲ್ಲ. ರಶ್ಮಿಕಾ ಸಿನೆಮಾಗಳಲ್ಲಿ, ಈವೆಂಟ್ ಗಳಲ್ಲಿ ಹಾಕುವ ಡ್ರೆಸ್ ಗಳಿಗಿಂತಾ ಏನು ವಲ್ಗರ್‍ ಆಗಿ ಇಲ್ಲ. ಆದರೆ ಸೈಜಿನಲ್ಲಿ ಕೊಂಚ ವ್ಯತ್ಯಾಸ ಇದೆ ಎಂದು ಹಸಿಬಿಸಿಯಾಗಿ ಕಾಮೆಂಟ್ ಮಾಡಿದ್ದಾರೆ. ಮುಂದುವರೆದು ಮಾತನಾಡಿದ ಮಾಧವಿಲತಾ ಓರ್ವ ಸ್ಟಾರ್‍ ಹಿರೋಯಿನ್ ಈ ಬಗ್ಗೆ ಧ್ವನಿ ಎತ್ತುತ್ತಾರೋ ಆಗ ಅದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುತ್ತದೆ. ಆದ್ದರಿಂದ ಆ ವಿಡಿಯೋ ಬಗ್ಗೆ ಎಲ್ಲರೂ ರಿಯಾಕ್ಟ್ ಆಗುತ್ತಿದ್ದಾರೆ. ಅದರಲ್ಲೂ ಪತ್ರಕರ್ತರೂ ಸಹ ರಶ್ಮಿಕಾಗೆ ಬೆಂಬಲ ನೀಡಿ ಪ್ರಕಟನೆ ಬಿಡುಗಡೆ ಮಾಡಿತ್ತು. ಅದನ್ನು ನೋಡಿ ನನಗೆ ನಗು ಬಂದಿದೆ. ಇದೀಗ ರಶ್ಮಿಕಾರನ್ನು ಬೆಂಬಲಿಸುವ ಮಾದರಿಯಲ್ಲಿ ಸಾಮಾನ್ಯ ಯುವತಿಯರಿಗೆ ಯಾವ ರೀತಿಯಲ್ಲಿ ಬೆಂಬಲ ನೀಡುತ್ತಾರೆ ಎಂಬ ಪ್ರಶ್ನೆ ಮೂಡಿದೆ ಎಂದಿದ್ದಾರೆ.

ಇನ್ನೂ ನೀವೆಲ್ಲಾ ಬೆಂಬಲವಾಗಿ ನಿಲ್ಲಬೇಕಾಗಿರುವುದು ರಶ್ಮಿಕಾ ರಂತಹವರಿಗಲ್ಲ. ಬದಲಿಗೆ ಸಾಮಾನ್ಯರಿಗೆ ನೀವು ಬೆಂಬಲ ನೀಡಬೇಕು. ಹಿಂದೆ ಸಾವಿತ್ರ ಯಂತವರು, ಇದೀಗ ಸಾಯಿ ಪಲ್ಲವಿಯಂತಹ ಹಿರೋಯಿನ್ ಗಳು ಅಲ್ಲ ಅವರೆಲ್ಲಾ. ಜೊತೆಗೆ ಆ ಯುವತಿ ಹಾಕಿಕೊಂಡ ಡ್ರೆಸ್ ಅಷ್ಟೊಂದು ಅಸಭ್ಯವಾಗಿಲ್ಲ. ಅದು ಸ್ವಿಮ್ ಸ್ಯೂಟ್ ಮಾದರಿಯಲ್ಲಿದೆ ಎಂದು ಮಾಧವಿಲತಾ ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.