ಸೋಪ್ ಮಾರುತ್ತಿದ್ದಾರೆ ಸ್ಟಾರ್ ನಟಿಯ ಮಗಳು.. ಟಾಯ್ಲೆಟ್ ತೊಳೆಯಲು ಸಿದ್ದ ಎಂದ ನಟಿ….

ಸಿನಿಮಾರಂಗದಲ್ಲಿ ಏಳು ಬೀಳುಗಳು ಸರ್ವೇ ಸಾಮಾನ್ಯ. ದೊಡ್ಡ ಹಿಟ್ ನೀಡಿದಂತಹ ಸ್ಟಾರ್‍ ಸೆಲೆಬ್ರೆಟಿಗಳೇ ಸೋಲಿನಿಂದ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ಅದೇ ಹಾದಿಯಲ್ಲಿ ಇದೀಗ ಸ್ಟಾರ್‍ ನಟಿಯೊಬ್ಬರ ಮಗಳು ಸೋಪ್ ಗಳನ್ನು ಮಾರಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಟಾಯ್ಲೆಟ್ ತೊಳೆಯಲೂ ಸಹ ಸಿದ್ದ ಎಂದು ಹೇಳುತ್ತಿದ್ದಾರಂತೆ. ಅಷ್ಟಕ್ಕೂ ಆ ನಟಿ ಯಾರ ಮಗಳು ಎನ್ನುವ ವಿಚಾರಕ್ಕೆ ಬಂದರೇ.

ಸೋಪ್ ಮಾರಿ ಜೀವನ ಸಾಗಿಸುತ್ತಿರುವ ನಟಿಯ ಮಗಳು ಬೇರೇ ಯಾರು ಅಲ್ಲ ದಶಕಗಳ ಹಿಂದಿನ ಸ್ಟಾರ್‍ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯಾ. ಲಕ್ಷ್ಮೀ ಕಳೆದ 1969ರಲ್ಲಿ ಭಾಸ್ಕರ್‍ ಎಂಬುವವರೊಂದಿಗೆ ಮದುವೆಯಾದರು ಈ ದಂಪತಿಯ ಮಗಳೇ ಐಶ್ವರ್ಯ ಭಾಸ್ಕರ್‍. ಅನೇಕ ಕಲಾವಿದರು ಸಿನೆಮಾರಂಗದಲ್ಲಿ ಸಕ್ಸಸ್ ಕಾಣದೇ ಜೀವನ ನಿರ್ವಹಣೆಗಾಗಿ ಅನೇಕ ಉದ್ಯೋಗಗಳತ್ತ ಮುಖ ಮಾಡುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಸಹ ಇದೆ. ಈ ಸಾಲಿಗೆ ಇದೀಗ ಲಕ್ಷ್ಮೀ ಮಗಳು ಐಶ್ವರ್ಯ ಸಹ ಸೇರಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಈಕೆ ಜೀವನ ಸಾಗಿಸಲು ಸೋಪ್ ಮಾರುವ ಕೆಲಸಕ್ಕೆ ಮುಂದಾಗಿದ್ದಾರೆ. ಐಶ್ವರ್ಯಾ ಸುಮಾರು ಇನ್ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇತ್ತೀಚಿಗೆ ಆಕೆಗೆ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿದೆ. ಆಕೆ ಜೀವನ ನಿರ್ವಹಣೆಗೆ ಬೇರೆ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಐಶ್ವರ್ಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಖಾಸಗಿ ಮಾದ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಐಶ್ವರ್ಯಾ ಸದ್ಯ ಚಿತ್ರರಂಗದಲ್ಲಿ ನನಗೆ ಮೊದಲಿನ ಹಾಗೆ ಆಫರ್‍ ಗಳು ಬರುತ್ತಿಲ್ಲ. ಆದ್ದರಿಂದ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದೇನೆ. ಸೋಪ್ ಮಾರಿ ಜೀವನ ಸಾಗಿಸುತ್ತಿದ್ದೇನೆ. ಶೂಟಿಂಗ್ ಇದ್ದರೇ ಹೋಗುತ್ತೇನೆ. ಸದ್ಯ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ನಾನು ಸೋಪ್ ಮಾರಿ ಜೀವನ ಸಾಗಿಸುತ್ತಿದ್ದೇನೆ. ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಟಾಯ್ಲೆಟ್ ಕ್ಲೀನ್ ಮಾಡುವ ಸ್ಥಿತಿ ಬಂದರೂ ಸಹ ಮಾಡುತ್ತೇನೆ. ಅದೂ ಸಹ ಗೌರವವಾದ ಕೆಲಸವೇ ಆಗಿದೆ. ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಅಷ್ಟೇಅಲ್ಲದೇ ನಮ್ಮ ಮನೆಯಲ್ಲಿ ಫರ್ನಿಚರ್‍ ಕಾಣಲ್ಲ, ಟಿವಿ ಇಲ್ಲ. ನಾನು ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದೇನೆ. ನನ್ನ ಲೈಫ್ ಬದಲಾಗಬೇಕು ಎಂದರೇ ದೊಡ್ಡ ಸಿರೀಯಲ್ ಅವಕಾಶ ಬೇಕಿದೆ. ನನಗೆ ತುಂಬಾ ನೋವಿದ್ದರೂ ಸಹ ಎಲ್ಲರ ಎದುರು ನಗುತ್ತಾ ಇರುತ್ತೇನೆ. ಬಳಿಕ ಮನೆಗೆ ಹೋಗಿ ಅಳುತ್ತೇನೆ ಎಂದು ನೋವು ತೋಡಿಕೊಂಡಿದ್ದಾರೆ. ಇನ್ನೂ ಐಶ್ವರ್ಯಾ 1994 ರಲ್ಲಿ ತನ್ವೀರ್‍ ಅಹ್ಮದ್ ಎಂಬುವವರ ಜೊತೆ ಮದುವೆಯಾಗಿದ್ದರು. ಮದುವೆಯಾದ ಮೂರು ವರ್ಷಗಳಲ್ಲೇ ಅವರು ಬೇರೆಯಾಗಿದ್ದರು. ಸದ್ಯ ಐಶ್ವರ್ಯಾ ಹಲವು ಭಾಷೆಗಳಲ್ಲಿ ಕೆಲವೊಂದು ಸಿರೀಯಲ್ ಗಳಲ್ಲಿ ನಟಿಸುತ್ತಿದ್ದಾರೆ.

Previous articleತೀಸ್ ಮಾರ್ ಖಾನ್ ಸಿನೆಮಾದಲ್ಲಿ ಯಂಗ್ ಹಿರೋ ಜೊತೆ ಪಾಯಲ್ ರೊಮ್ಯಾನ್ಸ್….!
Next articleಪಿಂಕ್ ಕಲರ್ ಡ್ರೆಸ್ ನಲ್ಲಿ ಕಿಕ್ ಕೊಡುವ ಪೋಸ್ ಕೊಟ್ಟ ನಟಿ ಅನಸೂಯ….!