ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಹಾಟ್ ಆದ ಶ್ರೀದೇವಿ ಎರಡನೇ ಪುತ್ರಿ, ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ರು..!

ದಶಕಗಳ ಕಾಲ ಸಿನಿರಂಗವನ್ನು ಆಳಿದಂತಹ ನಟಿ ಅತಿಲೋಕ ಸುಂದರಿ ಎಂತಲೇ ಖ್ಯಾತಿ ಪಡೆದುಕೊಂಡ ದಿವಂಗತ ಶ್ರೀದೇವಿಗೆ ಇಬ್ಬರು ಪುತ್ರಿಯರು. ಒಬ್ಬಳು ಜಾನ್ವಿ ಕಪೂರ್‍ ಮತ್ತೊಬ್ಬಳು ಖುಷಿ ಕಪೂರ್‍. ಈಗಾಗಲೇ ಜಾನ್ವಿ ಬಣ್ಣದ ಲೋಕಕ್ಕೆ ಕಾಲಿಟ್ಟು ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಖುಷಿ ಕಪೂರ್‍ ಮಾತ್ರ ಇನ್ನೂ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಸ್ಟಾರ್‍ ಕಿಡ್ ಆದ ಹಿನ್ನೆಲೆಯಲ್ಲಿ ಸಿನೆಮಾಗಳಿಗೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಜಾನ್ವಿ ಹಾಗೂ ಖುಷಿ ಪಾಪ್ಯುಲರ್‍ ಆಗಿದ್ದರು. ಇದೀಗ ಖುಷಿ ಕಪೂರ್‍ ಸಿನಿರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಶ್ರೀದೇವಿ ಪುತ್ರಿ ಜಾನ್ವಿ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಆದರೆ ಜಾನ್ವಿಗೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಇನ್ನೂ ಸಿಕ್ಕಿಲ್ಲ. ಆಕೆಯ ಅನೇಕ ಸಿನೆಮಾಗಳು ಸೋಲು ಕಂಡರೂ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಆಕೆ ಸಿನೆಮಾಗಳಲ್ಲಿ ಸಕ್ಸಸ್ ಆಗದೇ ಇದ್ದರೂ ಕೂಡ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್‍ ಆಗಿದ್ದಾರೆ. ಆಕೆ ನೀಡುವ ಹಾಟ್ ಟ್ರೀಟ್ ಗೆ ಆಕೆ ಫಾಲೋಯಿಂಗ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸೌಂದರ್ಯದಲ್ಲಿ ತಾಯಿಗಿಂತಲೂ ಏನು ಕಡಿಮೆಯಿಲ್ಲ ಎಂಬಂತೆ ಜಾನ್ವಿ ಸಹ ಸೌಂದರ್ಯವತಿ. ತಾಯಿಗೆ ತಕ್ಕ ಮಗಳಂತೆ ಮುಂದಿನ ದಿನಗಳಲ್ಲಿ ಆಕೆ ಸ್ಟಾರ್‍ ನಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.  ಇದೀಗ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್‍ ಸಹ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡಲು ಶುರು ಮಾಡಿದ್ದಾಳೆ. ಸಿನಿರಂಗಕ್ಕೆ ಇನ್ನೂ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಹಾಟ್ ಟ್ರೀಟ್ ಕೊಡುತ್ತಾ ಸಾಗುತ್ತಿದ್ದಾರೆ.

ಕೆಲವು ದಿನಗಳಿಂದ ಖುಷಿ ನಿರ್ದೇಶನದತ್ತ ಮುಖ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.  ಆದರೆ ಇದೀಗ ಕೆಲವೊಂದು ಸುದ್ದಿಗಳ ಪ್ರಕಾರ ಖುಷಿ ಸಹ ಸಿನಿರಂಗದಲ್ಲೇ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಯಾಗಿ ತನ್ನ ಕೆರಿಯರ್‍ ಪ್ರಾರಂಭಿಸಲು ಆಕೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಖುಷಿ ಹಂಚಿಕೊಂಡ ಪೊಟೋಗಳು ನಟಿಯಾಗಲು ಹಾಟ್ ಟ್ರೀಟ್ ಶುರು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತಿಚಿಗೆ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿವೆ. ಸೊಂಟದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಜನತೆಯನ್ನು ಫಿದಾ ಮಾಡುತ್ತಿದ್ದಾರೆ. ತನ್ನ ಅಕ್ಕನಿಗಿಂತ ತಾನು ಏನು ಕಡಿಮೆಯಿಲ್ಲ ಎಂಬಂತೆ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಈ ಪೊಟೋಗಳನ್ನು ನೋಡಿದರೇ ಆ ವಿಚಾರ ತಿಳಿಬಹುದಾಗಿದೆ. ಈ ಹಿಂದಿನ ಖುಷಿಗೂ ಇಂದಿನ ಖುಷಿಗೂ ತುಂಬಾನೆ ವ್ಯತ್ಯಾಸಗಳಿವೆ. ಖುಷಿ ತುಂಬಾನೆ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಅನೇಕರು ಭಾವಿಸುತ್ತಿದ್ದಾರೆ.

ಇನ್ನೂ ಖುಷಿ ಹಾಟ್ ಪೊಟೋಶೂಟ್ ಜೊತೆಗೆ ಕೆಲವೊಂದು ಸಿನೆಮಾಗಳೂ ಹಾಗೂ ವೆಬ್ ಸೀರಿಸ್ ಗಳಿಗೂ ಸಹ ಸಹಿ ಹಾಕಿದ್ದಾರಂತೆ. ಮುಂದಿನ ಎರಡು ವರ್ಷಗಳಲ್ಲಿ ಖುಷಿ ಅಭಿನಯದ ಸಿನೆಮಾ ಹಾಗೂ ವೆಬ್ ಸಿರೀಸ್ ಗಳನ್ನು ಸಹ ಕಾಣಬಹುದಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಖುಷಿಯ ತಂದೆ ಬೋನಿ ಕಪೂರ್‍ ರವರ ಬ್ಯಾನರ್‍ ನಡಿ ನಿರ್ಮಾಣ ಆಗಲಿರುವ ಸಿನೆಮಾದಲ್ಲಿ ಖುಷಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಖುಷಿ ಸಿನಿರಂಗದಲ್ಲಿ ಯಾವ ರೀತಿಯಲ್ಲಿ ಸದ್ದು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳಂತೂ ಅಂತರ್ಜಾಲದಲ್ಲಿ ಬಿಸಿಯೇರಿಸಿದೆ ಎನ್ನಲಾಗುತ್ತಿದೆ.

Previous articleಪ್ರತಿನಿತ್ಯ ಕತ್ರಿನಾ ವಿಕ್ಕಿ ಆ ವಿಚಾರಕ್ಕೆ ಕಿತ್ತಾಡುತ್ತಾರಂತೆ, ಅವರು ಕಿತ್ತಾಡೋದು ಯಾವ ವಿಚಾರಕ್ಕೆ ಗೊತ್ತಾ….!
Next articleವಿದೇಶದಲ್ಲಿನ ರೊಮ್ಯಾಂಟಿಕ್ ಪೊಟೋಗಳೊಂದಿಗೆ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿರುವ ನಯನ್ ಅಂಡ್ ವಿಕ್ಕಿ…!