ಕುಡಿದು ಫ್ರೆಂಡ್ ಜೊತೆ ಒಂದು ರಾತ್ರಿ ಶಾರೀರಿಕ ಸಂಬಂಧ ಬೆಳೆಸಿದ್ದೆ, ಅದರಲ್ಲಿ ತಪ್ಪೇನಿಲ್ಲ ಎಂದ ನಟಿ..!

ಇತ್ತೀಚಿಗೆ ಸಿನಿರಂಗದ ಅನೇಕ ನಟಿಯರು ತಮ್ಮ ಬಗ್ಗೆ ಕೆಲವೊಂದು ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಅವರ ಪ್ರೀತಿ, ಡೇಟಿಂಗ್ ಮೊದಲಾದ ವಿಚಾರಗಳ ಬಗ್ಗೆ ಒಪೆನ್ ಆಗಿ ಮಾತನಾಡುತ್ತಿದ್ದಾರೆ. ಇದೇ ಹಾದಿಯಲ್ಲಿ ಇತ್ತೀಚಿಗೆ ತಾನು ಅಪ್ರಾಪ್ತೆಯಾಗಿದ್ದಾಗ ಲೈಂಗಿಕ ದಾಳಿಗೆ ತುತ್ತಾಗಿದ್ದೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ನಟಿ ಕುಬ್ರಾ ಸೇಠ್ ಇದೀಗ ವ್ಯಕ್ತಿಯೊಬ್ಬರ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದು, ಈ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಸಿನೆಮಾ ಸೆಲೆಬ್ರೆಟಿಗಳು ಪಬ್ಲಿಸಿಟಿ ಗಳಿಸಿಕೊಳ್ಳುವುದಕ್ಕಾಗಿಯೋ ಅಥವಾ ಸತ್ಯಾಂಶವನ್ನು ಹೊರಹಾಕುವ ಉದ್ದೇಶಕ್ಕೋ ತಮ್ಮ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಬಯೋಪಿಕ್ ಸಹ ಬರೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವೊಂದು ವಿಚಾರಗಳು ವಿವಾದಕ್ಕೆ ಗುರಿಯಾಗುತ್ತಿರುತ್ತವೆ. ಈ ವಿಚಾರಗಳ ಬಗ್ಗೆ ಜನರು, ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲರೂ ಅದೇ ವಿಚಾರಗಳ ಬಗ್ಗೆ ಚರ್ಚೆಗಳು ಶುರು ಮಾಡುತ್ತಿರುತ್ತಾರೆ. ಇನ್ನೂ ನಟಿ ಕುಬ್ರಾ ಸೇಠ್ ಸಹ ಓಪನ್ ಬುಕ್ ಎಂಬ ಹೆಸರಿನಲ್ಲಿ ಆತ್ಮಕಥನ ಪುಸ್ತಕದಲ್ಲಿ ತಮ್ಮ ಜೀವನದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ತಮ್ಮ ಜೀವನದ ಅನೇಕ ವಿಚಾರಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪುಸ್ತಕದಲ್ಲಿ ಹೇಳಿಕೊಂಡಿರುವ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಲ್ಲೂ ಆಕೆ ಒಬ್ಬ ವ್ಯಕ್ತಿಯೊಂದಿಗೆ  ಶಾರೀರಿಕ ಸಂಬಂಧ ಬೆಳೆಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಚರ್ಚೆಗೆ ಕಾರಣವಾಗಿದೆ.

ನಟಿ ಕುಬ್ರಾ ಸೇಠ್ ಈ ಹಿಂದೆ ಸ್ನೇಹಿತನೊಂದಿಗೆ ಟ್ರೆಕ್ಕಿಂಗ್ ಗೆ ಹೊರಟಿದ್ದರಂತೆ. ಅಲ್ಲಿ ಒಂದು ರಾತ್ರಿ ತಂಗಿದ್ದರಂತೆ. ಈ ವೇಳೆ ಆತನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ್ದು, ಗರ್ಭ ಸಹ ಧರಿಸಿದ್ದರಂತೆ. ಒಂದು ವಾರದ ಬಳಿಕ ಗರ್ಭಸ್ರಾವ ಸಹ ಆಗಿತ್ತು ಎಂದು ಸಂಚಲನಾತ್ಮಕ ವಿಚಾರಗಳನ್ನು ಹರಿಬಿಟ್ಟಿದ್ದಾರೆ. ಆಕೆಗೆ 30 ವರ್ಷ ವಯಸ್ಸಿನಲ್ಲಿರುವಾಗ ಅಂಡಮಾನ್ ಗೆ ಸ್ಕೂಬಾ ಡೈವಿಂಗ್ ಗೇ ಹೊರಟಿದ್ದರಂತೆ. ಬಳಿಕ ಆಕೆ ಡ್ರಿಂಕ್ಸ್ ತೆಗೆದುಕೊಂಡಿಂದ್ದು, ಒಬ್ಬ ಸ್ನೇಹಿತನೊಂದಿಗೆ ಬೆಡ್ ಶೇರ್‍ ಮಾಡಿಕೊಂಡಿದ್ದರಂತೆ. ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿದೆ ಎಂಬ ವಿಚಾರವನ್ನು ಹೇಳಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಫಿಕ್ ಆಗಿ ಹರಿದಾಡುತ್ತಿದೆ.

ಇನ್ನೂ ಆತನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ್ದು, ಗರ್ಭ ಸಹ ಧರಿಸಿದ್ದು ಯಾವುದೇ ತಪ್ಪು ಮಾಡಿದ್ದೇನೆ ಎಂಬ ಭಾವನೆ ನನಗಿಲ್ಲ. ಯಾವುದೇ ರೀತಿಯ ಪಶ್ಚಾತಪ ಪಡುವ ಅವಶ್ಯಕತೆ ಸಹ ಇಲ್ಲ. ನನ್ನ ಚಾಯ್ಸ್ ನನ್ನದು ಎಂದು ಹೇಳಿರುವ ಆಕೆ. ಇಂತಹ ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ. ಆದ್ದರಿಂದಲೇ ನಾನು ನನ್ನ ಬಯೋಪಿಕ್ ಬಗ್ಗೆ ಬರೆದಿದ್ದೇನೆ. ಇನ್ನೂ ಈ ಪುಸ್ತಕದಲ್ಲಿ 24 ಚಾಪ್ಟರ್‍ ಗಳಿದ್ದು, ಪ್ರತಿಯೊಂದು ಚಾಪ್ಟರ್‍ ಸಹ ತುಂಬಾ ಆಸಕ್ತಿಕರವಾಗಿರುತ್ತದೆ ಎಂದು ಹೇಳಿದ್ದಾರೆ.

Previous articleಶೂಟಿಂಗ್ ವೇಳೆ ಅಪಘಾತಕ್ಕೆ ಗುರಿಯಾದ ನಟ ವಿಶಾಲ್, ಸ್ಥಗಿತಗೊಂಡ ಶೂಟಿಂಗ್…!
Next articleಥೈಸ್ ಸೌಂದರ್ಯವನ್ನು ಬಚ್ಚಿಟ್ಟುಕೊಳ್ಳಲು ಇಕ್ಕಟ್ಟಿಗೆ ಸಿಲುಕಿದ ಬಾಲಿವುಡ್ ಹಾಟ್ ಬ್ಯೂಟಿ..!