ತಂದೆ ನೋಡಿದ ಹುಡುಗನನ್ನೇ ಮದುವೆಯಾಗಲಿದ್ದಾರಂತೆ ಸ್ಟಾರ್ ನಟಿ ಕೀರ್ತಿ ಸುರೇಶ್…!

ಸಿನಿರಂಗದ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಅವರ ವೈಯುಕ್ತಕ ವಿಚಾರಗಳಂತೂ ಬಿರುಗಾಳಿಯಂತೆ ಹಬ್ಬುತ್ತಿರುತ್ತದೆ. ಆ ಸುದ್ದಿ ಸತ್ಯವಿರುಬಹುದು ಅಥವಾ ಸುಳ್ಳಾಗಿರಬಹುದು ಸುದ್ದಿ ಮಾತ್ರ ಕ್ಷಣದಲ್ಲೇ ಹರಿದುಬಿಡುತ್ತದೆ. ಇದೀಗ ಸ್ಟಾರ್‍ ನಟಿ ಕೀರ್ತಿ ಸುರೇಶ್ ರವರ ಮದುವೆ ಬಗ್ಗೆ ಒಂದು ಸುದ್ದಿ ಸಖತ್ ವೈರಲ್ ಆಗುತ್ತಿದೆ. ಆಕೆ ಶೀಘ್ರದಲ್ಲೇ ಮದುವೆಯಾಗಲಿದ್ದು, ತಮ್ಮ ತಂದೆ ತಾಯಿ ನೋಡಿದ ಹುಡುಗನನ್ನೇ ಕೀರ್ತಿ ವರಿಸಲಿದ್ದಾರಂತೆ.

ಸದ್ಯ ನಟಿ ಕೀರ್ತಿ ಸುರೇಶ್ ರವರಿಗೆ 30 ವರ್ಷ ವಯಸ್ಸಾಗಿದೆ. ಇದರಿಂದಾಗಿ ಆಕೆಯ ಮನೆಯಲ್ಲಿ ಮದುವೆಯಾಗು ಎಂಬ ಒತ್ತಡ ಹೆಚ್ಚಾಗುತ್ತಿದೆಯಂತೆ. ಈ ಕಾರಣದಿಂದ ಆಕೆಯ ಪೋಷಕರೂ ಸಹ ಹುಡುಗನ್ನು ಹುಡುಕಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಇನ್ನೂ ಪೋಷಕರ ಒತ್ತಾಯಕ್ಕೆ ಕೀರ್ತಿ ಸಹ ಒಪ್ಪಿದ್ದು, ಶೀಘ್ರದಲ್ಲೇ ಆಕೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.  ಸುಮಾರು ದಿನಗಳಿಂದ ಕೀರ್ತಿ ಸುರೇಶ್ ಗೆ ಹುಡುಗನ್ನು ಹುಡುಕುವ ಕೆಲಸದಲ್ಲಿ ಆಕೆಯ ಪೋಷಕರು ನಿರತರರಾಗಿದ್ದಾರಂತೆ. ಎಲ್ಲಾ ರೀತಿಯಲ್ಲೂ ಕೀರ್ತಿಗೆ ಸೆಟ್ ಆಗುವಂತಹ ಹುಡುಗನ್ನು ಹುಡುಕಿದ್ದು, ಆತನನ್ನು ಕೀರ್ತಿ ಸುರೇಶ್ ಸಹ ಒಪ್ಪಿದ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಸಿನಿವಲಯ ಸೇರಿದಂತೆ ಟಾಲಿವುಡ್ ರಂಗದಲ್ಲೂ ಸಹ ಸಖತ್ ವೈರಲ್ ಆಗುತ್ತಿದೆ.

ಇದರೊಂದಿಗೆ ಮತ್ತೊಂದು ಸುದ್ದಿ ಸಹ ಹರಿದಾಡುತ್ತಿದೆ. ಮದುವೆಯಾದ ಬಳಿಕ ಕೀರ್ತಿ ಸುರೇಶ್ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಸದ್ಯ ಆಕೆ ಸೈನ್ ಮಾಡಿರುವಂತಹ ಸಿನೆಮಾಗಳನ್ನು ಪೂರ್ಣಗೊಳಿಸಿ ಸಿನೆಮಾಗಳಿಂದ ದೂರವುಳಿಯಲಿದ್ದಾರಂತೆ. ಸದ್ಯ ಈ ಸುದ್ದಿ ಕೇಳಿದ ಕೀರ್ತಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಅನೇಕ ನಟಿಯರು ಮದುವೆಯಾದರೂ ಸಹ ಸಿನೆಮಾಗಳಲ್ಲಿ ಅದೇ ಕ್ರೇಜ್ ನಲ್ಲಿ ಮುಂದುವರೆಯುತ್ತಿದ್ದಾರೆ. ಆದರೆ ಕೀರ್ತಿ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ನಿರಾಸೆ ಹಾಗೂ ಬೇಸರ ತಂದಿದೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳೋ ತಿಳಿಯದು. ಆದರೆ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಹಿಂದೆ ಸಹ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬಂದಿದ್ದವು. ಆದರೆ ಅವೆಲ್ಲವೂ ರೂಮರ್‍ ಗಳಿಗಾಗಿ ಉಳಿದುಕೊಂಡವು. ಇದೀಗ ಈ ಸುದ್ದಿಯೂ ಸಹ ರೂಮರ್‍ ಆಗಲಿದೆಯೇ ಅಥವಾ ನಿಜವೆ ಎಂಬುದನ್ನು ಕೀರ್ತಿ ಆಗಲಿ ಅಥವಾ ಅವರ ಕುಟುಂಸ್ಥರಾಗಲಿ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.  ಸದ್ಯ ಆಕೆ ಭೋಳಾ ಶಂಕರ್‍, ದಸರಾ ಎಂಬ ತೆಲುಗು ಸಿನೆಮಾಗಳಲ್ಲಿ ಹಾಗೂ ತಮಿಳಿನಲ್ಲೂ ಸಹ ಎರಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Previous articleಶ್ರುತಿ ಹಾಸನ್ ಸೆಲ್ಫಿ ನೋಡಿ ಶಾಕ್ ಆದ ಅಭಿಮಾನಿಗಳು, ಸ್ಟಾರ್ ನಟಿಯ ಮುಖಕ್ಕೆ ಏನಾಗಿದೆ?
Next articleಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಚಿರು ಇಂಟ್ರಸ್ಟಿಂಗ್ ಕಾಮೆಂಟ್ಸ್, ಸಿನಿರಂಗ ಬಿಟ್ಟು ಬಂದ ಬಳಿಕ ಅದರ ಬೆಲೆ ತಿಳಿಯಿತು ಎಂದ ನಟ…!