Film News

ಪೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಖ್ಯಾತ ಕೀರ್ತಿ ಸುರೇಶ್!

ಹೈದರಾಬಾದ್: ದೇಶದ ಕ್ರೀಡೆ, ಸಿನೆಮಾ, ಉದ್ಯಮಿ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆ ಮಾಡಿದ 30 ವರ್ಷದೊಳಗಿನ ಸಾಧಕರನ್ನು ಪೋರ್ಬ್ಸ್ ಇಂಡಿಯಾ ಗುರ್ತಿಸುವ ಕೆಲಸ ಮಾಡುತ್ತಿರುತ್ತದೆ. ಇದರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಸಹ ಸ್ಥಾನ ಗಳಿಸಿದ್ದಾರೆ.

ನಟಿ ಕೀರ್ತಿ ಸುರೇಶ್ ಸಿನಿರಂಗಕ್ಕೆ ಕಾಲಿಟ್ಟ ಕಡಿಮೆ ಅವಧಿಯಲ್ಲಿಯೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅವರ ಮುಗ್ದತೆಯಿಂದ ಕೂಡಿದ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಅವರ ಸಾಧನೆಯನ್ನು ಗುರ್ತಿಸಿದ ಪೋರ್ಬ್ಸ್ ಇಂಡಿಯಾ ಸಾಧಕರ ಪಟ್ಟಿಯಲ್ಲಿ ಅವರನ್ನು ಸಹ ಸೇರ್ಪಡೆಗೊಳಿಸಿದ್ದಾರೆ.

ಇನ್ನೂ ಈ ಕುರಿತು ಪೋರ್ಬ್ಸ್ ಇಂಡಿಯಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಗೊಳಿಸಿದ್ದು, ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಮತ್ತು ತೃಪ್ತಿ ದಿಮ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಯೂಟೂಬ್ ಆಶಿಶ್ ಚಂಚಾಲನಿ ಸಹ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ವಿಭಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಕ್ಕೆ ಕೀರ್ತಿ ಸುರೇಶ್ ಸಂತಸ ವ್ಯಕ್ತಪಡಿಸಿದ್ದು, ಪೋರ್ಬ್ಸ್ ಇಂಡಿಯಾ ೩೦ ವಿಭಾಗದ ೩೦ ಸಾಧಕರಲ್ಲಿ ನನ್ನನ್ನು ಗುರ್ತಿಸಿದ್ದಕ್ಕೆ ಧನ್ಯವಾದಗಳು ಪೋರ್ಬ್ಸ್ ಇಂಡಿಯಾ ಎಂದಿದ್ದಾರೆ.

ಇನ್ನೂ ನಟಿ ಕೀರ್ತಿ ಸುರೇಶ್ ಮಲಯಾಳಂ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಬಾಲ ನಟಿಯಾಗಿ, ನಂತರ ನೇನು ಶೈಲಜಾ ಚಿತ್ರ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ತಮ್ಮ ಸಾಧನೆ ತೊರಿದ್ದಾರೆ. ಅಷ್ಟೇಅಲ್ಲದೇ ಮಹಾನಟಿ ಸಿನೆಮಾದಲ್ಲಿ ಅವರ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರುವಾರಿ ಪಾಟ ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ಬಣ್ಣ ಹಚ್ಚಿದ್ದಾರೆ.

Trending

To Top