ಮಲಯಾಳಂ ಮೂಲದ ನಟಿ ಕೀರ್ತಿ ಸುರೇಶ್ ಅನೇಕ ಸಿನೆಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡ ನಟಿಯಾಗಿದ್ದಾರೆ. ಸಿನಿರಂಗದಲ್ಲಿ ಸಾಕಷ್ಟು ಸೋಲುಗಳನ್ನು ಕಂಡರೂ ಸಹ ಎದೆಗುಂದದೇ ತಮ್ಮ ಪ್ರಯತ್ನವನ್ನು ಮುಂದುವರೆಸಿ ಸಾಧನೆ ಮಾಡಿದ ನಟಿ ಕೀರ್ತಿ ಸುರೇಶ್. ಮಳಯಾಳಂ ಮೂಲದ ಈಕೆ ಸಾಕಷ್ಟು ಸಿನೆಮಾಗಳಲ್ಲಿ ಫೇಲ್ ಆಗಿದ್ದರು. ತಾನು ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಮಹಾನಟಿ ಸಿನೆಮಾ ಬ್ಲಾಕ್ ಬಸ್ಟರ್ ಹಿಟ್ ಹೊಡೆದರೂ ಸಹ ಆಕೆಗೆ ಅಷ್ಟೊಂದು ಸಕ್ಸಸ್ ಕೊಡಲಿಲ್ಲ. ನಟಿ ಕೀರ್ತಿ ಸೋಲುಗಳನ್ನು ಕಂಡರೂ ಸಹ ಎದೆಗುಂದದೇ ಮುನ್ನುಗ್ಗುತ್ತಿದ್ದು, ಇದೀಗ ತಮ್ಮ ಇನ್ಸ್ಟಾ ಖಾತೆಯಲ್ಲಿ ಎಮೊಷನಲ್ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಇದೀಗ ಈ ಪತ್ರ ಸಖತ್ ವೈರಲ್ ಆಗುತ್ತಿದೆ.
ನಟಿ ಕೀರ್ತಿ ಸುಮಾರು ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸಿದ್ದರೂ ಸಹ ದೊಡ್ಡ ಸಕ್ಸಸ್ ಕಾಣುವಲ್ಲಿ ವಿಫಲರಾಗಿದ್ದರು. ಆಕೆ ಅಭಿನಯದ ಪವನ್ ಕಲ್ಯಾಣ್ ರವರ ಅಜ್ಞಾತವಾಸಿ ಸಿನೆಮಾ ಸಹ ಅಂದುಕೊಂಡಷ್ಟು ಹಿಟ್ ಆಗಲಿಲ್ಲ. ತಾನೊಂದು ಅಂದುಕೊಂಡರೇ ದೇವರು ಒಂದು ಕೊಟ್ಟ ಎಂದಂಗಾಗಿತ್ತು ನಟಿ ಕೀರ್ತಿ ಪರಿಸ್ಥಿತಿ. ಆದರೂ ಸಹ ಸಹನೆಯಿಂದ ಇದೀಗ ಆಕೆ ಅಂದುಕೊಂಡಂತೆ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಕೆ ಎಮೋಷನಲ್ ಆಗಿ ಸುದೀರ್ಘ ನೋಟ್ ಬರೆದು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿ ಕೀರ್ತಿ ಅಭಿನಯದ ಸಾನಿ ಕಾಯದಂ ಹಾಗೂ ಸರ್ಕಾರುವಾರಿ ಪಾಟ ಸಿನೆಮಾಗಳೆರಡು ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದಿದ್ದು ಈ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಸಕ್ಸಸ್ ಗೆ ಎಮೋಷನಲ್ ಆಗಿ ಸುದೀರ್ಘ ನೋಟ್ ಬರೆದು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಕೀರ್ತಿ ಹಂಚಿಕೊಂಡ ನೋಟ್ ನಲ್ಲಿರುವಂತೆ ನನ್ನ ಪ್ರೀತಿಯ ಎಲ್ಲರಿಗೂ ಹೇಳುತ್ತಿರುವ ಮಾತುಗಳು, ನಟಿಯಾಗಿ ಇರುವುದು ತುಂಬಾ ಹಾನಿಕರವಾದ ಏರುಪೇರುಗಳಿಂದ ಕೂಡಿದ ಪ್ರಯಾಣವಾಗಿದೆ. ಈ ಹಾದಿ ತುಂಬಾ ಏರುಪೇರುಗಳಿಂದ ಕೂಡಿರುತ್ತದೆ. ಈ ಪಯಣವೇ ನಮ್ಮ ಗುರಿಯನ್ನು ನಿರ್ಧಾರ ಮಾಡುತ್ತದೆ. ಇತ್ತೀಚಿನ ದಿನಗಳು ನನಗೆ ಪರೀಕ್ಷಾ ಸಮಯವಿದ್ದಂತೆ. ಇದೊಂದು ಪ್ರಮುಖ ಹೆಜ್ಜೆಯಾಗಿದೆ. ನಾನು ನನ್ನ ನಟನೆಯನ್ನು ಪ್ರಸ್ತುತಪಡಿಸಲು ನಿರಂತರವಾಗಿ ಶ್ರಮಿಸುತ್ತೇನೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಸಿನೆಮಾ ಸಾನಿ ಕಾಯದಂ ಹಾಗೂ ಸರ್ಕಾರು ವಾರಿ ಪಾಟ ಒಳ್ಳೆಯ ರೀತಿಯಲ್ಲಿ ಹಿಟ್ ಆಗಿದ್ದು, ಎರಡೂ ಚಿತ್ರತಂಡಗಳಿಗೆ ಕೀರ್ತಿ ಕೃತಜ್ಞತೆಗಳನ್ನು ಹೇಳಿದ್ದಾರೆ. ಜೊತೆಗೆ ತನ್ನ ಸಿನಿರಂಗದಲ್ಲಿನ ತನ್ನ ಮೇಲೆ ನಂಬಿಕೆಯಿಟ್ಟಂತಹ ಎಲ್ಲಾ ನಿರ್ದೇಶಕರಿಗೂ ಕೀರ್ತಿ ಸುರೇಶ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಕೀರ್ತಿ ಸುರೇಶ್ ಅಭಿನಯದ ಸಾನಿ ಕಾಯದಂ ಹಾಗೂ ಸರ್ಕಾರು ವಾರಿ ಪಾಟ ಈ ಎರಡೂ ಸಿನೆಮಾಗಳಲ್ಲೂ ಕೀರ್ತಿ ಒಳ್ಳೆಯ ಹೆಸರನ್ನು ಗಳಿಸಿಕೊಂಡರು. ಈ ಎರಡೂ ಸಿನೆಮಾದಲ್ಲಿನ ಪಾತ್ರಗಳು ಕೀರ್ತಿಗೆ ತುಂಬಾ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಅದರಲ್ಲೂ ಸರ್ಕಾರು ವಾರಿ ಪಾಟ ಸಿನೆಮಾ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು, ಈ ಸಂತೋಷದಲ್ಲಿ ಎಮೋಷನಲ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸುದೀರ್ಘ ಪತ್ರವನ್ನು ಬರೆದು ಶೇರ್ ಮಾಡಿದ್ದಾರೆ.