10 ಕೋಟಿ ಮೊತ್ತಕ್ಕೆ ತನ್ನ ಮನೆ ಮಾಡಿದ ಕರಿಷ್ಮಾ ಕಪೂರ್!

ಮುಂಬೈ: ಬಾಲಿವುಡ್ ಟಾಪ್ ಸ್ಟಾರ್ ನಟಿ ಕರಿಷ್ಮಾ ಕಪೂರ್ ತಮ್ಮ ಮನೆಯನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದು, ಸುಮಾರು ಸ್ಟಾಂಪ್ ಡ್ಯೂಟಿಗಾಗಿ ೨೨ ಲಕ್ಷ ಮೊತ್ತವನ್ನು ಕಟ್ಟಿದ್ದಾರೆ ಎನ್ನಲಾಗಿದೆ.

90 ರ ದಶಕದಲ್ಲಿ ಬಾಲಿವುಡ್ ನಲ್ಲಿ ಬಹುಬೇಡಿಕೆ ನಟಿಯಾಗಿದ್ದ ಕರಿಷ್ಮಾ ಕಪೂರ್ ತಮ್ಮ ವಿವಾಹದ ಬಳಿಕ ಚಿತ್ರರಂಗದಿಂದ ದೂರವಾಗೇ ಉಳಿದಿದ್ದರು. ೨೦೦೩ ರಲ್ಲಿ ಮದುವೆಯಾಗಿದ್ದು, ಅವರ ವಿವಾಹ ಜೀವನ ಸುಖಕರವಾಗಿಲ್ಲ. ನಂತರ ೨೦೧೬ ರಲ್ಲಿ ಪತಿಯೊಂದಿಗೆ ವಿಚ್ಚೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ ನಟಿ ಕರಿಷ್ಮಾ.

ನಟಿ ಕರಿಷ್ಮಾ ಶ್ರೀಮಂತ ಕಪೂರ್ ಎಂಬ ಕುಟುಂಬದಿಂದ ಬಂದಿದ್ದು, ಮುಂಬೈನಲ್ಲಿದ್ದ ತಮ್ಮ ಮನೆಯನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಮುಂಬೈನ ಖಾರ್ ವೆಸ್ಟ್ ನಲ್ಲಿರುವ ೧೬೧೦ ಚದರ ಅಡಿಯ ಫ್ಲಾಟ್ ಹಾಗೂ ಎರಡು ಪಾರ್ಕಿಂಗ್ ಸ್ಪೇಸ್ ಎರಡನ್ನೂ ಮಾರಾಟ ಮಾಡಿದ್ದಾರೆ. ಅಭಾ ದಮಾನಿ ಎಂಬುವರರಿಗೆ ೧೦.೧೧ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು, ಸ್ಟಾಂಪ್ ಡ್ಯೂಟಿಯಾಗಿ ೨೨ ಲಕ್ಷ ಕಟ್ಟಿದ್ದಾರಂತೆ.

ಇನ್ನೂ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕರಿಷ್ಮಾ ತಮ್ಮ ಫ್ಲಾಟ್ ಅನ್ನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಅವರ ಫ್ಲಾಟ್ ಇದ್ದ ಸ್ಥಳದಲ್ಲಿ ಒಂದು ಚದರ ಅಡಿಗೆ ೬೫ ಸಾವಿರದಿಂದ ಸುಮಾರು ೧ ಲಕ್ಷ ಬೆಲೆ ಇದೆ ಎಂದಿದ್ದಾರೆ. ಮತ್ತೋಂದು ವಿಚಾರ ಕರಿಷ್ಮಾ ಕಪೂರ್ ಬಾಂದ್ರಾ ಎಂಬಲ್ಲಿದ್ದ ಅವರ ಮನೆಯನ್ನೂ ೭ ಕೋಟಗೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದರು ಎನ್ನಲಾಗಿದೆ.

Previous article51ನೇ ಫಿಲಂ ಫೆಸ್ಟಿವಲ್ ಗೆ ಚಾಲನೆ ನೀಡಿದ ಸುದೀಪ್: ಕನ್ನಡದಲ್ಲೇ ಮಾತಾಡಿದ ಕಿಚ್ಚ
Next articleಬನ್ನಿ ತಂಗಿಯಾಗಿ ಸಾಯಿ ಪಲ್ಲವಿ ನಟನೆ!