ಸಿಕ್ಕಾಪಟ್ಟೆ ಟ್ರೋಲ್ ಆದ ಕರೀನಾ ಕಪೂರ್ ಆಕೆ ಧರಿಸಿದ್ದ ಟಿ ಶರ್ಟ್ 40 ಸಾವಿರನಂತೆ…!

ಸಿನಿರಂಗದಲ್ಲಿ ಸೆಲೆಬ್ರೆಟಿಗಳು ಟ್ರೋಲ್ ಆಗುವುದು ಸಾಮಾನ್ಯ. ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಟ್ರೋಲ್ ಆಗುತ್ತಿರುತ್ತಾರೆ. ಟ್ರೋಲ್ ಗೆ ಗುರಿಯಾಗುವುದು ಅವರಿಗೇನು ಹೊಸತಲ್ಲ. ಇದೀಗ ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಆಕೆ ಟ್ರೋಲ್ ಆಗಿದ್ದು, ಆಕೆ ಧರಿಸಿದಂತಹ ಟಿ ಶರ್ಟ್ ನಿಂದ ಎಂಬುದು ಗಮನಾರ್ಹವಾದ ವಿಚಾರವಾಗಿದೆ. ಅಷ್ಟಕ್ಕೂ ಆಕೆ ಧರಿಸಿದ್ದ ಟಿ ಶರ್ಟ್ ಬೆಲೆ ಬರೊಬ್ಬರಿ 40 ಸಾವಿರನಂತೆ. ಈ ಕಾರಣಕ್ಕಾಗಿ ನಟಿ ಕರೀನಾ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ಸಾಮಾನ್ಯವಾಗಿ ಸಿನಿರಂಗದ ಸೆಲೆಬ್ರೆಟಿಗಳು ದುಬಾರಿ ಬೆಲೆಯ ಡ್ರೆಸ್ ಗಳನ್ನು ಧರಿಸುತ್ತಿರುತ್ತಾರೆ. ನಟಿಯರು ತಮ್ಮ ವಿಭಿನ್ನ ಡ್ರೆಸ್ ಗಳ ಮೂಲಕವೇ ಸುದ್ದಿಯಾಗುತ್ತಿರುತ್ತಾರೆ. ದುಬಾರಿ ಬೆಲೆಯ ಡ್ರೆಸ್ ಗಳನ್ನು ಧರಿಸಿದರೂ ಸಹ ಅನೇಕ ನಟಿಯರು ಟ್ರೋಲ್ ಗೆ ಗುರಿಯಾಗುತ್ತಾರೆ. ಅವರು ಹಾಕಿಕೊಂಡ ಡ್ರೆಸ್ ಗಳು ನೋಡಲು ಚೆಂದ ಕಾಣದೇ ಇರುವ ಕಾರಣ ಟ್ರೋಲ್ ಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇದೀಗ ದುಬಾರಿ ಬೆಲೆಯ ಟಿ ಶರ್ಟ್ ಧರಿಸಿದ್ದು ಕರೀನಾ ಕಪೂರ್‍ ಸಿಕ್ಕಾಪಟ್ಟೆ ಟ್ರೋಲ್ ಗೆ ತುತ್ತಾಗಿದ್ದಾರೆ. ಸುಮಾರು ನಲವತ್ತು ಸಾವಿರ ಬೆಲೆಯ ಟಿ ಶರ್ಟ್ ಧರಿಸಿದ್ದ ನಟಿ ಕರೀನಾ ಕಪೂರ್‍  ಪೊಟೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ದುಬಾರಿ ವೆಚ್ಚದ ಎಲ್ಲೋ ಕಲರ್‍ ಟಿಶರ್ಟ್ ಧರಿಸಿದ್ದು, ಈ ಪೊಟೋಗಳು ವೈರಲ್ ಆಗುವುದರ ಜೊತೆಗೆ ಟ್ರೋಲ್ ಗಳಿಗೆ ಸಹ ಗುರಿಯಾಗುತ್ತಿವೆ.

ಇನ್ನೂ ಕರೀನಾ ಕಪೂರ್‍ ಧರಿಸಿದ್ದ ನಲವತ್ತು ಸಾವಿರದ ಟಿ ಶರ್ಟ್ ದುಬಾರಿಯಾದರೂ ಸಹ ಚೂರು ಚೆನ್ನಾಗಿಲ್ಲ. ಕರೀನಾ ಕಪೂರ್‍ ಹಾಕಿಕೊಂಡ ಡ್ರೆಸ್ ಮೇಲೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಕರೀನಾ ಧರಿಸಿದ್ದ ಎಲ್ಲೋ ಕಲರ್‍ ಟಿ ಶರ್ಟ್ ಏನು ಚೆನ್ನಾಗಿಲ್ಲ. ಅದೇ ತರಹದ ಟಿ ಶರ್ಟ್ ಗೆ ನಾವು ಕೇವಲ 150 ರೂಪಾಯಿಗಳಿಗೆ ಖರೀದಿಸುತ್ತೇವೆ. ಸ್ಟಾರ್‍ ಗಿರಿ ಬಂದ ಮೇಲೆ ಅಸಲು ಯಾವ ರೀತಿಯ ಬಟ್ಟೆ ಖರೀದಿಸಬೇಖು, ಎಷ್ಟು ರೇಟ್ ಗೆ ಖರೀದಿಸಬೇಕು ಎಂಬ ವಿಷಯ ಸಹ ತಿಳಿಯದೇ ಇರುವ ನಟಿಯ ಮೇಲೆ ವಿಭಿನ್ನವಾದ ರೀತಿಯಲ್ಲಿ ಟ್ರೋಲ್ಸ್ ಮಾಡುತ್ತಿದ್ದಾರೆ. ಇನ್ನೂ ನಟಿ ಕಪೂರ್‍ ರವರ ಬಳಿ ಇಂತಹ ಟಿ ಶರ್ಟ್‌ಗಳು ತುಂಬಾನೆ ಇವೆ ಎಂದು ಹೇಳಲಾಗುತ್ತಿದೆ.

ನಟಿ ಕರೀನಾ ಕಪೂರ್‍ ರವರನ್ನು ಬಾಲಿವುಡ್ ನಲ್ಲಿ ಆಲ್ ಟೈಮ್ ಬೆಸ್ಟ್ ನಟಿಯೆಂದು ಕರೆಯಲಾಗುತ್ತದೆ. ಬ್ಯೂಟಿಪುಲ್ ನಟಿಯರಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ. ಈಕೆಗೆ ಎದುರಾಗಿ ಅದೆಷ್ಟೋ ನಟಿಯರು ಬಂದರು ಈಕೆಯ ಕ್ರೇಜ್ ಮಾತ್ರ ಕಡಿಮೆಯಾಗಿರಲಿಲ್ಲ. ಸೈಫ್ ಆಲಿ ಖಾನ್ ಜೊತೆ ಮದುವೆಯಾದ ಬಳಿಕವೂ ಸಹ ಸಿನೆಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.

Previous articleಚಿರಂಜೀವಿ ಹಾಗೂ ರಾಮ್ ಚರಣ್ ಜೊತೆ ನಟಿಸೋಕೆ ನೋ ಎಂದ್ರಾ ರಶು..?
Next articleಅಧಿಕೃತವಾಗಿ ಒಂದಾದ ನಯನತಾರಾ ವಿಘ್ನೇಶ್, ಹಿಂದೂ ಸಂಪ್ರದಾಯದಂತೆ ನಡೆದ ಮದುವೆ…!