ನಟಿ ಕಂಗನಾ ಪಾರ್ಟಿಯಲ್ಲಿ ಕಿಸ್ ಮಾಡಿದ್ದು ಯಾರಿಗೆ? ಅಭಿಮಾನಿಗಳಲ್ಲಿ ಮೂಡಿದೆ ಯಕ್ಷ ಪ್ರಶ್ನೆ…

ಬಾಲಿವುಡ್ ನಟಿ ಕಂಗನಾ ರಾಣಾವತ್ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಅವರ ನಡೆಗೆ ಅನೇಕರು ಬೇಸರಗೊಂಡು ಆಕೆಯನ್ನು ಟ್ರೋಲ್ ಸಹ ಮಾಡುತ್ತಾರೆ. ಇದೀಗ ನಟಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಪಾರ್ಟಿಯೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಪದೇ ಪದೇ ಕಿಸ್ ಮಾಡುವ ಮೂಲಕ ಸುದ್ದಿಯಾಗಿದ್ದು, ಕಂಗನಾ ಕಿಸ್ ಮಾಡಿದ ವ್ಯಕ್ತಿಯಾದರೂ ಯಾರು ಎಂಬ ಗೊಂದಲಕ್ಕೆ ಅಭಿಮಾನಿಗಳು ಸಿಲುಕಿದ್ದಾರೆ.

ನಟಿ ಕಂಗನಾ ಅಭಿನಯದ “ಧಾಕಡ್” ಸಿನೆಮಾದ ಬಿಡುಗಡೆಗೆ ಮುನ್ನಾ ಗ್ರಾಂಡ್ ಪಾರ್ಟಿಯೊಂದನ್ನು ಆಯೋಜನೆ ಮಾಡಲಾಗಿತ್ತು. ಆ ಪಾರ್ಟಿಯಲ್ಲಿ ಕಂಗನಾ ವ್ಯಕ್ತಿಯೊಬ್ಬರಿಗೆ ಕಿಸ್ ಮಾಡುತ್ತಿದ್ದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದು, ಮತ್ತೆ ಕೆಲವರು ಕಂಗನಾರವರ ಈ ಕೆಲಸಕ್ಕೆ ಕೀಳಾಗಿ ಮಾತನಾಡಿಕೊಳ್ಳುತ್ತಾ ಕಾಮೆಂಟ್ಸ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಧಾಕಡ್ ಸಿನೆಮಾ ಇದೇ ಮೇ.20 ರಂದು ತೆರೆ ಮೇಲೆ ಅಬ್ಬರಿಸಲಿದೆ. ಈ ಸಿನೆಮಾ ತೆರೆಗೆ ಬರುವುದಕ್ಕೂ ಮುಂಚೆ ದೊಡ್ಡ ಪಾರ್ಟಿಯನ್ನು ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಅನೇಕರು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಕಂಗನಾ ಪದೇ ಒದೇ ಒಬ್ಬ ವ್ಯಕ್ತಿಗೆ ಕಿಸ್ ಮಾಡಿದ್ದಾರೆ.

ಸದ್ಯ ಕಂಗನಾ ಕಿಸ್ ಮಾಡಿದ ವ್ಯಕ್ತಿ ಯಾರು ಎಂಬ ಸಂದೇಹದೊಂದಿಗೆ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಕಂಗನಾ ಕಿಸ್ ಮಾಡಿದ್ದು, ಶಿವಂ ಸಿಂಗ್ ಎಂಬ ವ್ಯಕ್ತಿಗೆ, ಈತ ಇತ್ತೀಚಿಗೆ ಪೂರ್ಣಗೊಂಡಂತಹ ಲಾಕಪ್ ಎಂಬ ಶೋನಲ್ಲಿ ಸ್ಪರ್ಧಾಳು ಆಗಿ ಕಾಣಿಸಿಕೊಂಡಿದ್ದರು. ಈ ಶೋ ಅನ್ನು ನಡೆಸಿಕೊಟ್ಟಿದ್ದು ಕಂಗನಾರವರೇ. ಈ ಶೋ ನಡೆದಂತಹ ಸಮಯದಲ್ಲಿ ಶಿವಂ ಹಾಗೂ ಕಂಗನಾ ರವರ ನಡುವೆ ಒಳ್ಳೆಯ ಬಾಂಧವ್ಯ ಏರ್ಪಟಿತ್ತು. ಶೋ ಬಳಿಕವೂ ಸಹ ಇವರಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಮುಂದುವರೆದಿದ್ದಾರೆ. ಸದ್ಯ ಕಂಗನಾ ಶಿವಂಗೆ ಕಿಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.

ಇನ್ನೂ ನಟಿ ಕಂಗನಾ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ತನಗೆ ಯಾರೂ ಬಾಯ್ ಫ್ರೇಂಡ್ ಇಲ್ಲ ಎಂಬುದಾಗಿ ಹೇಳಿದ್ದರು. ಇದೀಗ ಕಂಗನಾ ಶಿವಂ ಗೆ ಕಿಸ್ ಮಾಡಿದ್ದು, ಸಾಕಷ್ಟು ಸುದ್ದಿಯಾಗುತ್ತಿದೆ. ವಿವಿಧ ರೀತಿಯಲ್ಲಿ ಕಾಮೆಂಟ್ ಗಳು ಹರಿದು ಬರುತ್ತಿವೆ. ಕಂಗನಾ ಗೆ ಒಂಟಿ ಜೀವನ ಸಾಕಾಗಿದೆ, ಅದಕ್ಕಾಗಿಯೇ ಈ ರೀತಿಯಲ್ಲಿ ಆಡುತ್ತಿದ್ದಾರೆ ಎಂದು ಕೆಲವರು, ಮತ್ತೆ ಕೆಲವರು ಒಂದು ಮದುವೆ ಆದರೆ ಎಲ್ಲ ಸರಿ ಹೋಗುತ್ತೆ ಎಂದು ಹೇಳಿದ್ದಾರೆ ಅದರಲ್ಲೂ ಇನ್ನೂ ಕೆಲವರು ಕಂಗನಾ ಉಳಿದವರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ, ಅವರೇ ಈ ರೀತಿ ಮಾಡುತ್ತಾರೆ. ಮೊದಲು ಅವರು ಸರಿಯಾಗಿ ನಡೆದುಕೊಳ್ಳಲಿ ಎಂದು ಕಾಮೆಂಟ್ಸ್ ಹಾಕುತ್ತಿದ್ದಾರೆ.

Previous articleನಟಿ ಸಿರತ್ ಕಪೂರ್ ಸಂಪೂರ್ಣವಾಗಿ ಬದಲಾಗಿದ್ದಾರೆ.. ಎಲ್ಲರಿಗೂ ಶಾಕ್ ಕೊಟ್ಟ ಸಿರತ್ ಕಪೂರ್…
Next articleಮದುವೆ ದಿನಾಂಕ ಫಿಕ್ಸ್ ಮಾಡಿಕೊಂಡು, ವಿಹಾರಕ್ಕೆ ಹೊರಟ ನಯನತಾರಾ-ವಿಘ್ನೇಶ್…