ನಿರೀಕ್ಷೆ ಹುಸಿ ಮಾಡಿದ ಕಂಗನಾ ರಾಣಾವತ್ ರವರ ಧಾಕಡ್ ಸಿನೆಮಾ…..

ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣಾವತ್ ಅಭಿನಯದ ಧಾಕಡ್ ಸಿನೆಮಾ ಬಹುನಿರೀಕ್ಷೆಯನ್ನು ಹುಟ್ಟಿಸಿತ್ತು. ಸಿನೆಮಾ ಪೋಸ್ಟರ್‍, ಟ್ರೈಲರ್‍, ಶೀ ಇಸ್ ಆನ್ ಫೈರ್‍ ಎಂಬ ಹಾಡು ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಜೊತೆಗೆ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಸಹ ಮಾಡಿತ್ತು ಚಿತ್ರತಂಡ. ಆದರೆ ಧಾಕಡ್ ಸಿನೆಮಾ ಮೊದಲನೇ ದಿನ 50 ಲಕ್ಷ ಮಾತ್ರ ಗಳಿಸಿದೆ ಎಂದು ಹೇಳಲಾಗುತ್ತಿದೆ.

ಸದಾ ಒಂದಲ್ಲ ಒಂದು ವಿವಾದಗಳಿಗೆ ಗುರಿಯಾಗುವ ಈಕೆ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕಂಗನಾ ಜೊತೆ ಸ್ನೇಹಕ್ಕಿಂತ ವಿರೋಧ ಕಟ್ಟಿಕೊಂಡವರೇ ಬಹಳಷ್ಟು ಮಂದಿ ಇದ್ದಾರೆ. ದೊಡ್ಡ ತಾರಾಬಳಗವೇ ಇರುವಂತಹ ಧಾಕಡ್ ಸಿನೆಮಾ ಮಕಾಡೆ ಮಲಗಿದೆ. ಹೀನಾಯ ಸೋಲು ಕಂಡಿದೆ. ದೊಡ್ಡ ಸ್ಟಾರ್‍ ಬಳಗ ಇರುವ ಈ ಸಿನೆಮಾ ಮೊದಲನೇ ದಿನ ಕೋಟಿ ರೂಪಾಯಿಗೂ ಅಧಿಕ ಗಳಿಸುತ್ತದೆ ಎಂಬ ನಂಬಿಕೆಯಿತ್ತು. ಆದರೆ 50 ಲಕ್ಷ ಗಳಿಸಲು ಹರಸಾಹಸ ಪಟ್ಟಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಧಾಕಡ್ ಸಿನೆಮಾ ಮೇಲೆ ಎಲ್ಲರೂ ಇಟ್ಟುಕೊಂಡ ನಿರೀಕ್ಷೆ ಪೂರ್ಣ ಪ್ರಮಾಣದಲ್ಲಿ ಹುಸಿಯಾಗಿದೆ ಎಂದು ಹೇಳಲಾಗುತ್ತಿದೆ.

ಧಾಕಡ್ ಸಿನೆಮಾ ಟ್ರೈಲರ್‍ ಬಿಡುಗಡೆ, ಸಿನೆಮಾ ಪ್ರೀ ರಿಲೀಸ್ ಹೀಗೆ ಅದರ ಪ್ರಚಾರವನ್ನು ದೊಡ್ಡ ಮಟ್ಟದಲ್ಲೇ ಮಾಡಿತ್ತು. ಇತ್ತೀಚಿಗೆ ಬಾಲಿವುಡ್ ನ ಸಿನೆಮಾಗಳು ಸತತವಾಗಿ ಫೈಲೂರ್‍ ಆಗುತ್ತಿವೆ. ಇದರಿಂದ ಧಾಕಡ್ ಸಿನೆಮಾ ಆದರೂ ಗೆಲುವು ಸಾಧಿಸಲಿದೆ ಎಂಬ ದೊಡ್ಡ ಮಟ್ಟದ ನಿರೀಕ್ಷೆಯನ್ನು ಎಲ್ಲರೂ ಇಟ್ಟುಕೊಂಡಿದ್ದರು. ಆದರೆ ಧಾಕಡ್ ಎಲ್ಲಾ ನಿರೀಕ್ಷೆ ಹುಸಿ ಮಾಡಿ ಸಂಪೂರ್ಣವಾಗಿ ಸೋತಿದೆ.  ಇನ್ನೂ ಬಾಲಿವುಡ್ ನಲ್ಲಿ ಭೂಲ್ ಭೂಲಯ್ಯ 2 ಎಂಬ ಸಿನೆಮಾ ಸಹ ಮೇ.20 ರಂದು ಬಿಡುಗಡೆಯಾಗಿತ್ತು. ಅದೇ ದಿನ ಧಾಕಡ್ ಸಹ ಬಿಡುಗಡೆಯಾಗಿದೆ. ಭೂಲ್ ಭೂಲಯ್ಯ-2 ಸಿನೆಮಾ ಬಿಡುಗಡೆಯಾದ ದಿನ ಗಳಿಸಿದ್ದು ಹನ್ನೆರಡು ಕೋಟಿ, ಧಾಕಡ್ ಗಳಿಸಿದ್ದು ಕೇವಲ ಐವತ್ತು ಲಕ್ಷ ಮಾತ್ರ.

ಇನ್ನೂ ಸಿನೆಮಾ ಬಿಡುಗಡೆಗೂ ಮುನ್ನವೇ ಚಿತ್ರ ವಿಮರ್ಶಕರು ಧಾಕಡ್ ಬಗ್ಗೆ ನೆಗೆಟೀವ್ ಆಗಿ ಮಾತನಾಡಿದ್ದರು. ಇದರಿಂದಾಗಿ ಸಿನೆಮಾ ಕಲೆಕ್ಷನ ಕುಗ್ಗಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಸಿನೆಮಾ ಸ್ವಲ್ಪ ಮಟ್ಟಿಗೆ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಈ ಸಿನೆಮಾ ಫೇಲ್ ಆದ ಕಾರಣ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲೇ ಲಾಸ್ ಆಗಬಹುದು ಎನ್ನಲಾಗುತ್ತಿದೆ. ಇನ್ನೂ ಕಂಗನಾ ಭೂಲ್ ಭೂಲಯ್ಯ-2 ಸಿನೆಮಾ ಸಕ್ಸಸ್ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಾಷಯ ಸಹ ಕೋರಿದ್ದಾರೆ.

Previous articleಕಿರುತೆರೆ ನಟಿ ನಿಖಿತಾ ಶರ್ಮಾಳ ಬೋಲ್ಡ್ ಲುಕ್ ಗೆ ಫಿದಾ ಆದ ನೆಟ್ಟಿಗರು…
Next articleನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಅಭಿಮಾನಿಸುವ ನಟ ಯಾರು ಗೊತ್ತಾ?