Film News

ಪಾರ್ಲಿಮೆಂಟ್ ನಲ್ಲಿ ಎಮರ್ಜೆನ್ಸಿ ಸಿನೆಮಾ ಶೂಟಿಂಗ್ ಮಾಡಲು ಅನುಮತಿ ಕೋರಿದ್ದಾರಂತೆ ಕಾಂಟ್ರವರ್ಸಿ ಕ್ವೀನ್ ಕಂಗನಾ……..!

ಸಿನಿರಂಗದಲ್ಲಿ ವಿವಾದಾತ್ಮಕ ನಟಿ ಎಂದಾಕ್ಷಣ ನೆನೆಪಿಗೆ ಬರುವುದು ಕಂಗನಾ ರಾಣವತ್. ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ದೊಡ್ಡ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಡುವಂತಹ ಕಾಮೆಂಟ್ ಗಳು, ದೊಡ್ಡ ದೊಡ್ಡ ಸ್ಟಾರ್‍ ನಟರ ಬಗ್ಗೆ ಓಪೆನ್ ಆಗಿಯೇ ಸ್ಟೇಟ್ ಮೆಂಟ್ ಕೊಡುತ್ತಾರೆ. ಇದರ ಜೊತೆಗೆ ನಟಿ ಕಂಗನಾ ಸಿನೆಮಾಗಳಲ್ಲೂ ಸಹ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಎಮರ್ಜೆನ್ಸಿ ಸಿನೆಮಾದಲ್ಲಿ ನಟಿಸುತ್ತಿದ್ದು, ಪಾರ್ಲಿಮೆಂಟ್  ನಲ್ಲಿ ಈ ಸಿನೆಮಾ ಶೂಟಿಂಗ್ ಗಾಗಿ ಅನುಮತಿ ನೀಡಲು ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಖ್ಯಾತ ಬಾಲಿವುಡ್ ನಟಿ ಕಂಗನಾ ಪ್ರಮುಖ ಪಾತ್ರದಲ್ಲಿ ಅಂದರೇ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪಾತ್ರದಲ್ಲಿ ಎಮರ್ಜೆನ್ಸಿ ಸಿನೆಮಾದದಲ್ಲಿ ನಟಿಸುತ್ತಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ನಡೆದ ಕೆಲವೊಂದು ಯದಾರ್ಥ ಸಂಘಟನೆಗಳನ್ನು ಆಧರಿಸಿ ಸಿನೆಮಾ ಸೆಟ್ಟೆರಲಿದೆ. ಆ ಸಮಯದಲ್ಲಿ ದೇಶದಲ್ಲಿ ಹೇರಲಾಗಿದ್ದ ಎಮರ್ಜೆನ್ಸಿಯಲ್ಲಿನ ಕೆಲವೊಂದು ವಿಚಾರಗಳನ್ನು ಸಿನೆಮಾದಲ್ಲಿ ತೆರೆದಿಡಲಾಗುತ್ತಿದೆ. ಈಗಾಗಲೇ ಈ ಸಿನೆಮಾದ ಪೋಸ್ಟರ್‍,  ಟೀಸರ್‍ ಬಿಡುಗಡೆಯಾಗಿದ್ದು ಸಿನೆಮಾ ಮೇಲಿನ ನಿರೀಕ್ಷೆ ದುಪ್ಟಟ್ಟು ಮಾಡಿದೆ. ಟೀಸರ್‍ ನಲ್ಲೂ ಇಂದಿರಾ ರವರ ವಾಯ್ಸ್ ನಂತೆ ಬಂದಿದ್ದು, ಕೆಲವೊಂದು ಡೈಲಾಗ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಸಿನೆಮಾದ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಸುವ ನಿಟ್ಟಿನಲ್ಲಿ ಪಾರ್ಲಿಮೆಂಟ್ ಗೆ ಪತ್ರ ಬರೆದಿದ್ದಾರಂತೆ. ಪಾರ್ಲಿಮೆಂಟ್ ಆವರಣದಲ್ಲಿ ಈ ಸಿನೆಮಾದ ಶೂಟಿಂಗ್ ನಡೆಸಲು ಲೋಕಸಭೆಯ ಸೆಕ್ರೆಟ್ರಿಯೇಟ್ ಗೆ ಪತ್ರ ಬರೆದಿದ್ದಾರಂತೆ ಕಂಗನಾ. ಇನ್ನೂ ಆಕೆಗೆ ಪಾರ್ಲಿಮೆಂಟ್ ನಲ್ಲಿ ಶೂಟಿಂಗ್ ನಡೆಸಲು ಅನುಮತಿ ಸಹ ದೊರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ಪಾರ್ಲಿಮೆಂಟ್ ಆವರಣದಲ್ಲಿ ಖಾಸಗಿ ಸಂಸ್ಥೆಗಳಿಗೆ ವಿಡಿಯೋ ಮಾಡಲು ಅವಕಾಶವಿಲ್ಲ. ಸರ್ಕಾರದ ಕಾರ್ಯಕ್ರಮಗಳ ನಿಮಿತ್ತ ಆದರೆ ಅದು ಬೇರೆಯದ್ದೆ ವಿಚಾರ. ಇನ್ನೂ ದೂರದರ್ಶನ್, ಸಂಸದ್ ಟಿ.ವಿ. ಗಳಿಗೆ ಮಾತ್ರ ಪಾರ್ಲಿಮೆಂಟ್ ಒಳಗಿನ ಕಾರ್ಯಕ್ರಮಗಳನ್ನು ಚಿತ್ರೀಕರಿಸಲು ಅವಕಾಶವಿದೆ. ಖಾಸಗಿ ಸಂಸ್ಥೆಗಳಿಗೆ ಅವಕಾಶ ಇಲ್ಲ ಎಂಬುದು ತಿಳಿದ ವಿಚಾರವಾಗಿದೆ. ಇನ್ನೂ ಕಂಗಾನ ರವರಿಗೆ ಶೂಟಿಂಗ್ ನೀಡಲು ಸರ್ಕಾರ ಅವಕಾಶ ಕೊಡುತ್ತಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಈ ಸಿನೆಮಾದ ಶೂಟಿಂಗ್ ಸಹ ಪ್ರಸಕ್ತ ವರ್ಷದ ಜೂನ್ ಮಾಹೆಯಲ್ಲಿ ಪ್ರಾರಂಭವಾಗಿತ್ತು.  ದಿವಂಗತ ಪ್ರಧಾನಿ ಇಂದಿರಾಗಾಂಧಿ ಯವರ ಜೀವನ, ಅವರು ವಿಧಿಸಿದ್ದ ಎಮರ್ಜೆನ್ಸಿ ಸಮಯದಲ್ಲಿ ಉಂಟಾದ ಕೆಲವೊಂದು ಸಂಘಟನೆಗಳ ಬಗ್ಗೆ ಈ ಸಿನೆಮಾದಲ್ಲಿ ಚಿತ್ರೀಕರಸಿಲಾಗಿದೆ ಎಂದು ಹೇಳಲಾಗುತ್ತಿದೆ. ಎಮರ್ಜೆನ್ಸಿ ಎಂಬುದು ಭಾರತದ ರಾಜಕೀಯ ಚರಿತ್ರೆಯಲ್ಲೇ ಮರೆಯಲಾಗದಂತಹ ಘಟನೆ ಎನ್ನಬಹುದಾಗಿದೆ. ಇನ್ನೂ ಸದಾ ವಿಭಿನ್ನ ಪಾತ್ರಗಳ ಮೂಲಕ ಸದ್ದು ಮಾಡುವಂತಹ ಕಂಗನಾ ಇದೀಗ ಇಂದಿರಾಗಾಂಧಿಯವರಂತೆ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Trending

To Top