Uncategorized

ಮಗನ ಮುಂದೆಯೇ ಪತಿಯ ತುಟಿಗೆ ಮುತ್ತಿಟ್ಟ ಕಾಜಲ್ ಅಗರ್ವಾಲ್, ನೆಟ್ಟಿಗರ ಆಕ್ರೋಷ…!

ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿ ಕಾಜಲ್ ಅಗರ್ವಾಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಕೆ ಇಂಡಿಯನ್-2 ಸಿನೆಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಈಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಹ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಒಂದರ ಕಾರಣಕ್ಕಾಗಿ ಆಕೆಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಅನೇಕ ವರ್ಷಗಳ ಕಾಲ ತೆಲುಗು ಸಿನಿರಂಗ ಸೇರಿದಂತೆ ತಮಿಳು ಸಿನೆಮಾಗಳಲ್ಲೂ ಸಹ ಬಹುಬೇಡಿಕೆ ಹೊಂದಿದ್ದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಗೌತಮ್ ಕಿಚ್ಲು ಎಂಬ ಉದ್ಯಮಿಯೊಂದಿಗೆ ವಿವಾಹವಾದರು. ಮದುವೆಯಾದ ಬಳಿಕ ಸಿನೆಮಾಗಳಿಂದ ಕೊಂಚ ದೂರವೇ ಉಳಿದರು. ಕಳೆದ 2020 ಅಕ್ಟೋಬರ್‍ ಮಾಹೆಯಲ್ಲಿ ಗೌತಮ್ ಕಿಚ್ಲು ಜೊತೆಗೆ ಸಪ್ತಪದಿ ತುಳಿದರು. ಬಳಿಕ ಕೆಲವು ತಿಂಗಳುಗಳ ಹಿಂದೆಯಷ್ಟೆ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟರು. ಮಗನಿಗೆ ನೀಲ್ ಕಿಚ್ಲು ಎಂಬ ಹೆಸರನ್ನು ಸಹ ಇಡಲಾಗಿದೆ. ಆಕೆ ಸಿನೆಮಾಗಳಿಂದ ದೂರವಾದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು.

ಇನ್ನೂ ಕಾಜಲ್ ಸದಾ ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಪೊಟೋಶೂಟ್ಸ್ ಗಳು, ಮಗನ ವಿಡಿಯೋ ಪೊಟೊಗಳನ್ನು ಸಹ ಶೇರ್‍ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಈ ಹಾದಿಯಲ್ಲೇ ಆಕೆ ಹೊಸ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಹೆಚ್ಚು ಸಮಯವನ್ನು ತನ್ನ ಪತಿ ಹಾಗೂ ಮಗನೊಂದಿಗೆ ಕಳೆಯುತ್ತಿರುವ ಕಾಜಲ್ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕ್ರಿಸ್ ಮಸ್ ಹಬ್ಬದ ಅಂಗವಾಗಿ ಅನೇಕ ಸೆಲೆಬ್ರೆಟಿಗಳು ಸೆಲೆಬ್ರೆಷನ್ ಗೆ ಸಂಬಂಧಿಸಿದ ಪೊಟೋಗಳನ್ನು ಹಂಚಿಕೊಂಡು ಶುಭ ಕೋರಿದ್ದರು. ಆದರೆ ಕಾಜಲ್ ಮಾತ್ರ ತನ್ನ ಪತಿ ತುಟಿಗೆ ಮುತ್ತಿಡುವ ಪೊಟೋ ಹಂಚಿಕೊಂಡಿದ್ದಾರೆ. ಅದೂ ಸಹ ಮಗ ಜೊತೆಯಲ್ಲಿದ್ದಾಗಲೇ ಮುತ್ತಿಟ್ಟಿದ್ದಾರೆ. ಇನ್ನೂ ಈ ಪೊಟೋ ಹೊರಬಂದ ಕೂಡಲೇ ಅನೇಕರು ಆಕೆಯ ಈ ಕೆಲಸಕ್ಕೆ ಕಿಡಿಕಾರಿದ್ದಾರೆ. ಮಗನ ಮುಂದೆ ಈ ರೀತಿಯ ಕೆಲಸ ಮಾಡಿದ್ದು ಸರಿಯಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಹಬ್ಬದ ಸಮಯದಲ್ಲಿ ಇಂತಹ ವೈಯುಕ್ತಿಕ ಪೊಟೋಗಳು ಶೇರ್‍ ಮಾಡಿದ್ದಕ್ಕೆ ನೆಟ್ಟಿಗರು ಕಾಜಲ್ ವಿರುದ್ದ ಆಕ್ರೋಷ ಗೊಂಡಿದ್ದಾರೆ. ಇನ್ನು ಮುಂದೆ ವೈಯುಕ್ತಿಕ ವಿಚಾರಗಳನ್ನು ವೈಯುಕ್ತಿಕವಾಗಿಯೇ ಇಡಿ ಎಂದು ಮನವಿಯ ಜೊತೆಗೆ ಆಕ್ರೋಷ ಸಹ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮತ್ತೆ ಕೆಲವರು ಕಾಜಲ್ ಗೆ ಸಪೋರ್ಟ್ ಸಹ ಮಾಡಿದ್ದಾರೆ. ಕ್ರಿಸ್ ಮಸ್ ಹಬ್ಬದಂದು ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ ಎಂದೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Trending

To Top