ಕಟ್ಟಪ್ಪನ ಅವತಾರವೆತ್ತಿದ ಕಾಜಲ್ ಅಗರ್ವಾಲ್, ಪೋಸ್ಟ್ ಅನ್ನು ರಾಜಮೌಳಿಗೆ ಅಂಕಿತ ಕೊಟ್ಟ ಕಾಜಲ್…!

ಟಾಲಿವುಡ್ ನಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿದ ಸಿನೆಮಾ ಅದರಲ್ಲೂ ಪ್ಯಾನ್ ಇಂಡಿಯಾ ಸಿನೆಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಸಿನೆಮಾ ಬಾಹುಬಲಿ. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾ ವಿಶ್ವ ಮಟ್ಟದಲ್ಲಿ ಕ್ರೇಜ್ ದಕ್ಕಿಸಿಕೊಂಡು ಬಾಕ್ಸ್ ಆಫೀಸ್ ಲೂಟಿ ಮಾಡಿತ್ತು. ಅದರಲ್ಲೂ ಬಾಹುಬಲಿ ಸಿನೆಮಾದಲ್ಲಿ ಕಟ್ಟಪ್ಪ ಪಾತ್ರ ಇಂದಿಗೂ ಸಹ ಎಲ್ಲರ ಮನಸ್ಸಿನಲ್ಲಿ ಇದೆ. ಕಟ್ಟಪ್ಪ ಕಾಣಿಸಿಕೊಳ್ಳುವ ದೃಶ್ಯಗಳು, ಡೈಲಾಗ್ ಗಳು ಪ್ರಚಲಿತದಲ್ಲಿದೆ. ಇದೀಗ ಸೌತ್ ನ ಚಂದಮಾಮ ಎಂದೇ ಕರೆಯಲಾಗುವ ಕಾಜಲ್ ಅಗರ್ವಾಲ್ ಕಟ್ಟಪ್ಪನ ಅವತಾರವೆತ್ತಿದ್ದಾರೆ. ಅದೇನು ಎಂಬ ವಿವರಗಳಿಗೆ ಬಂದರೇ,

ನಟಿ ಕಾಜಲ್ ಅಗರ್ವಾಲ್ ಮದುವೆ ಹಾಗೂ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಸಿನೆಮಾಗಳಿಂದ ದೂರವುಳಿದಿದ್ದಾರೆ. ಇತ್ತೀಚಿಗಷ್ಟೆ ಕಾಜಲ್ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯ ತಾಯ್ತನದ ಸಂತೋಷವನ್ನು ಆಸ್ವಾದಿಸುತ್ತಿದ್ದಾರೆ ಕಾಜಲ್ ಅಗರ್ವಾಲ್. ಕಾಜಲ್ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಿನೆಮಾಗಳಿಂದ ದೂರವುಳಿದಿದ್ದರು. ಗಂಡು ಮಗುವಿಗೆ ಜನ್ಮ ಕೊಟ್ಟ ಈಕೆ ತನ್ನ ಮಗನ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೂ ಸಹ ಸಂತಸ ನೀಡುತ್ತಿರುತ್ತಾರೆ. ಇದೀಗ ಕಾಜಲ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತನ್ನ ಮಗ ನೀಲ್ ಕಿಚ್ಲು ಪೊಟೋ ಒಂದನ್ನು ಶೇರ್‍ ಮಾಡಿದ್ದು, ಇದು ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಹಂಚಿಕೊಂಡ ಪೊಟೋಗಳಿಗಿಂತ ಇದು ತುಂಬಾನೆ ವಿಶೇಷವಾದ ಪೊಟೋ ಎನ್ನಲಾಗುತ್ತಿದೆ.

ನಟಿ ಕಾಜಲ್ ಹಾಗೂ ಮಗನ ಪಿಕ್ ವೈರಲ್ ಆಗಲು ಬಲವಾದ ಕಾರಣವಿದೆ. ಬಾಹುಬಲಿ ಸಿನೆಮಾ ಎಲ್ಲರಿಗೂ ನೆನಪಿದೆ. ಬಾಹುಬಲಿ ಸಿನೆಮಾದಲ್ಲಿ ಬಾಹುಬಲಿ ಕಾಲನ್ನು ತನ್ನ ಹಣೆಯ ಮೇಲೆ ಕಟ್ಟಪ್ಪ ಇಟ್ಟುಕೊಳ್ಳುತ್ತಾನೆ. ಈ ದೃಶ್ಯ ಸಿನೆಮಾದಲ್ಲಿ ಸಖತ್ ಹೈಲೈಟ್ ಆಗಿತ್ತು. ಇದೀಗ ಕಾಜಲ್ ಸಹ ಅದೇ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಕಾಜಲ್ ತನ್ನ ಮಗನ ಪಾದವನ್ನು ತನ್ನ ಹಣೆಯ ಮೇಲಿಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ಜೊತೆಗೆ ನಾನು ಈ ಪೊಟೋವನ್ನು ರಾಜಮೌಳಿ ರವರಿಗೆ ಅಂಕಿತ ಮಾಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಕಾಜಲ್ ಈ ಪೋಸ್ಟ್ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಆಕೆಯ ಅಭಿಮಾನಿಗಳೂ ಸೇರಿದಂತೆ ಬಾಹುಬಲಿ ಅಭಿಮಾನಿಗಳನ್ನು ಸಹ ಆಕರ್ಷಣೆ ಮಾಡಿದೆ. ಜೊತೆಗೆ ವಿಭಿನ್ನ ಮಾದರಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

ಇನ್ನೂ ಕಾಜಲ್ ಅಗರ್ವಾಲ್ ರಾಜಮೌಳಿಯವರ ಮಗಧೀರಾ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿತ್ತು. ಇನ್ನೂ ಮದುವೆಯಾದರೂ ಸಹ ಕಾಜಲ್ ಜೋರು ಕಡಿಮೆಯಾಗಿಲ್ಲ. ಇತ್ತೀಚಿಗೆ ಇಂಡಿಯನ್-2 ಸಿನೆಮಾದಲ್ಲಿ ನಟಿಸುವ ಬಗ್ಗೆ ಅಪ್ಡೇಟ್ ನೀಡಿದ್ದರು. ಇನ್ನೂ ಆಕೆ ಸಿನೆಮಾಗಳಲ್ಲಿ ರೀ ಎಂಟ್ರಿ ಮಾಡುತ್ತಿರುವುದಕ್ಕೆ ಆಕೆಯ ಅಭಿಮಾನಿಗಳೂ ಸಹ ಪುಲ್ ಖುಷಿಯಾಗಿದ್ದರು.

Previous articleರೀಲೀಫ್ ಗಾಗಿ ರೊಮ್ಯಾಂಟಿಕ್ ಸಿನೆಮಾಗಳಲ್ಲಿ ನಟಿಸುತ್ತೇನೆ ಎಂದ ಹಾಟ್ ಬ್ಯೂಟಿ ಅಮಲಾಪಾಲ್….!
Next articleಪ್ರಭಾಸ್ ಸಲಾರ್ ಸಿನೆಮಾದಲ್ಲೂ ರಾಖಿ ಭಾಯ್ ಅಬ್ಬರ ಇದೆಯಂತೆ…!