Film News

ಹಾಟ್ ಪೊಟೋಗಳ ಮೂಲಕ ಹೈಪ್ ಹೆಚ್ಚಿಸುತ್ತಿರುವ ಜೂನಿಯರ್ ಶ್ರೀದೇವಿ

ಮುಂಬೈ: ದಶಕಗಳ ಹಿಂದಿನ ಸ್ಟಾರ್ ಹಿರೋಯಿನ್ ಎಂದೇ ಕರೆಯಲಾಗುತ್ತಿದ್ದ ನಟಿ ದಿವಂಗತ ಶ್ರೀದೇವಿ. ಅನೇಕ ಸಿನೆಮಾಗಳ ಮೂಲಕ ಕಡಿಮೆ ಸಮಯದಲ್ಲೇ ಹಿಟ್ ಆದ ನಟ ಶ್ರೀದೇವಿ. ಶ್ರೀದೇವಿ ಹಾಗೂ ಬೋನಿ ಕಪೂರ್ ದಂಪತಿಯ ಮಗಳಾದ ಜಾನ್ವಿ ಕಪೂರ್ ಇದೀಗ ಹಾಟ್ ಹಾಟ್ ಪೋಟೊಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರ ಮನ ಕದಿಯುತ್ತಿದ್ದಾಳೆ.

ನಟಿ ಶ್ರೀದೇವಿಯ ಮಗಳಾದರೂ ಜಾನ್ವಿಕಪೂರ್ ರವರಿಗೆ ಅಷ್ಟೊಂದು ಇಮೇಜ್ ದೊರೆಯಲಿಲ್ಲ. ಇನ್ನೂ ತಂದೆ ಬೋನಿಕಪೂರ್ ಸಹ ಆಕೆಯ ಹಿಟ್ ಸಿನೆಮಾ ನೀಡಲು ವಿಫಲರಾಗಿದ್ದಾರೆ ಎನ್ನಲಾಗಿದೆ. ದಡಕ್ ಚಿತ್ರದ ಮೂಲಕ ಎಂಟ್ರಿಕೊಟ್ಟ ಜಾನ್ವಿ ಯಾವುದೇ ಸಿನೆಮಾಗಳಲ್ಲಿ ಖ್ಯಾತಿ ಗಳಿಸಲು ಸಾಧ್ಯವಾಗಲಿಲ್ಲ. ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಬೇಕಾದ ಸಿನೆಮಾಗಳನ್ನು ಸಹ ಒಟಿಟಿ ಗಳಲ್ಲಿ ರಿಲೀಸ್ ಮಾಡಿದ್ದರಿಂದ ಆಕೆಯ ಕೆರಿಯರ್‌ಗೆ ಮೈನಸ್ ಪಾಯಿಂಟ್ ಆಗಿದೆ.

ಇದೀಗ ರೂಹಿ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ಜಾನ್ವಿ ಸಿದ್ದವಾಗಿದ್ದು, ಸುಮಾರು ತಿಂಗಳುಗಳ ಬಳಿಕ ಥಿಯೇಟರ್‌ನಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಜಾನ್ವಿ ಕೆಲವೊಂದು ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆಯ ಫಿಜಿಕ್ ಕೂಡ ಕಾಣುವಂತೆ ಎಕ್ಸ್‌ಪೋಸ್ ಮಾಡಿದ್ದಾರೆ.

ಇನ್ನೂ ಕಷ್ಟಕರವಾದ ಎಕ್ಸ್‌ಪೋಸಿಂಗ್ ತೋರದೇ, ನಾನು ಸಹ ಹಾಗೆ ಮಾಡಬಲ್ಲ ಶಕ್ತಿ ಹೊಂದಿದ್ದೇನೆ ಎಂದು ಹೇಳುವ ಹಾಗಿದೆ. ಅಷ್ಟೇ ಅಲ್ಲದೇ ಜಾನ್ವಿ ಸೊಂಟದ ಬಳಕಿಗೆ ಯುವಕರು ಫಿಧಾ ಆಗಿದ್ದಾರೆ. ಇನ್ನೂ ರೂಹಿ ಚಿತ್ರದ ಬಳಿಕವಾದರೂ ಜಾನ್ವಿ ಖ್ಯಾತಿ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಶ್ರೀದೇವಿಯ ಕೊನೆಯ ಆಸೆಯಂತೆ ಟಾಲಿವುಡ್ ರಂಗಕ್ಕೆ ಯಾವಾಗ ಎಂಟ್ರಿ ಕೊಡುತ್ತಾರೋ ಎಂಬುದನ್ನು ಸಹ ಕಾದು ನೋಡಬೇಕಿದೆ.

Trending

To Top