ತನ್ನನ್ನು ಹಿಯಾಳಿಸಿದವರಿಗೆ ಥ್ಯಾಂಕ್ಸ್ ಹೇಳಿದ ನಟಿ ಐಶ್ವರ್ಯ ಮಿನನ್, ವೈರಲ್ ಆದ ಆಕೆಯ ಹಾಟ್ ಕಾಮೆಂಟ್ಸ್….!

ಸಿನಿರಂಗದಲ್ಲಿ ಸೆಲೆಬ್ರೆಟಿಗಳಿಗೆ ಟ್ರೋಲ್ ಗಳು, ಠೀಕೆಗಳು, ವಿಮರ್ಶೆಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಕೆಲವರು ಅವನ್ನು ಸೀರಿಯಸ್ ಆಗಿ ತೆಗೆದುಕೊಂಡ್ರೆ, ಮತ್ತೆ ಕೆಲವರು ಅವುಗಳನ್ನು ಕಿವಿಗೆ ಸಹ ಹಾಕಿಕೊಳ್ಳುವುದಿಲ್ಲ. ಈ ಹಾದಿಯಲ್ಲೇ ಕಾಲಿವುಡ್ ನಟಿ ಐಶ್ವರ್ಯ ಮಿನನ್ ಸಹ ಟ್ರೋಲ್ ಗಳಿಗೆ ಗುರಿಯಾಗಿದ್ದರಂತೆ. ಆಕೆ ಅನುಭವಿಸಿದ ಕಷ್ಟಗಳ ಬಗ್ಗೆ ಹಾಗೂ ತನ್ನ ಆತ್ಮ ವಿಶ್ವಾಸ ಬೆಳೆಯಲು, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕಾರಣಗಳು ಏನು ಎಂಬುದನ್ನು ಹೊರಹಾಕಿದ್ದಾರೆ. ಅದರಲ್ಲೂ ಆಕೆಯನ್ನು ಹಿಯಾಳಿಸಿದವರಿಗೆ ಥ್ಯಾಂಕ್ಸ್ ಸಹ ಹೇಳಿದ್ದಾರೆ.

ತಮಿಳು ಬ್ಯೂಟಿ ಐಶ್ವರ್ಯ ಮಿನನ್ ಚಿಕ್ಕಂದಿನಲ್ಲಿ ತಾನು ಅನುಭವಿಸಿದ ಕೆಲವೊಂದು ಕಹಿ ಘಟನೆಗಳನ್ನು ಹೊರಹಾಕಿದ್ದಾರೆ. ಸದ್ಯ ಆಕೆ ಇಷ್ಟೊಂದು ನಾಜೂಕಾಗಿರಲು ಕಾರಣವೇ ಆಕೆಯನ್ನು ಟೀಕೆ ಮಾಡಿದವರೆಂದು, ಅವರಿಗೆ ಹೃದಯತುಂಬಿದ ಧನ್ಯವಾದಗಳನ್ನು ಹೇಳಬೇಕು ಎಂದಿದ್ದಾರೆ. ಲವ್ ಫೈಲ್ಯೂರ್‍ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಬಳಿಕ ತಮಿಳಿನಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಇದೀಗ ಆಕೆ ತೆಲುಗು ನಟ ನಿಖಿಲ್ ಸಿದ್ದಾರ್ಥ್ ಅಭಿನಯಿಸುತ್ತಿರುವ ಸ್ಪೈ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದೀಗ ಆಕೆ ಸೌಂದರ್ಯಕ್ಕೆ ಕೇರಾಫ್ ಎಂಬಂತೆ ಉತ್ತಮ ಸೌಂದರ್ಯ ಹೊಂದಿದ್ದಾರೆ. ಸೌಂದರ್ಯದ ಮೂಟೆಯನ್ನು ಆಕೆ ಹೊಂದಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಆಕೆ ಇಷ್ಟೊಂದು ಸೌಂದರ್ಯವಾಗಿ ಕಾಣಲು ಆಕೆಯನ್ನು ಟೀಕೆ ಮಾಡಿದವರೇ ಕಾರಣ ಎಂದು ಹೇಳುತ್ತಿದ್ದಾರೆ ಐಶ್ವರ್ಯ ಮೆನನ್.

ನಟಿ ಐಶ್ವರ್ಯ ಮಿನನ್ ರವರ ಸೌಂದರ್ಯಕ್ಕೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ತನ್ನ ದೇಹದ ಮೈಮಾಟದ ಮೂಲಕ ಎಲ್ಲರನ್ನೂ ಕಟ್ಟಿ ಹಾಕುತ್ತಾರೆ. ಆದರೆ ಮೊದಲು ಆಕೆ ಈ ರೀತಿಯಲ್ಲಿ ಇರಲಿಲ್ಲವಂತೆ. ಆಕೆ ಇಷ್ಟರ ಮಟ್ಟಿಗೆ ಸೌಂದರ್ಯವತಿಯಾಗಲು ಕೆಲವರು ಆಕೆಯನ್ನು ಹಿಯಾಳಿಸಿದ್ದೇ ಕಾರಣವಂತೆ. ಕೆಲವರು ಆಕೆಯನ್ನು ಹಿಯಾಳಿಸಿದ ಕಾರಣಕ್ಕೆ ಆಕೆ ಪಟ್ಟು ಹಿಡಿದು ಸೌಂದರ್ಯವತಿಯಾದರಂತೆ. ಚಿಕ್ಕಂದಿಂನಲ್ಲಿ ಐಶ್ವರ್ಯ ತುಂಬಾ ದಪ್ಪವಾಗಿದ್ದರಂತೆ. ಈ ಕಾಣದಿಂದ ಆಕೆಯನ್ನು ಅನೇಕರು ಡುಮ್ಮಿ ಎಂದೆಲ್ಲಾ ಹಿಯಾಳಿಸುತ್ತಿದ್ದರಂತೆ. ಆಕೆ ದಪ್ಪವಾಗಿದ್ದ ಕಾರಣದಿಂದ ಆಕೆಯನ್ನು ಮೈದಾ ಬಾಲ್ ಎಂತಲೂ ಟೀಸ್ ಮಾಡುತ್ತಿದ್ದರಂತೆ. ಈ ವಿಚಾರವನ್ನು ಐಶ್ವರ್ಯ ಹೊರಹಾಕಿದ್ದಾರೆ.

ಅನೇಕರು ಆಕೆಯನ್ನು ಇದೇ ರೀತಿ ಹಿಯಾಳಿಸುತ್ತಿದ್ದ ಕಾರಣ ಆಕೆ ದೃಢ ನಿರ್ಣಯ ತೆಗೆದುಕೊಂಡು ಆಕೆಯ 16 ನೇ ವಯಸ್ಸಿನಿಂದಲೇ ವರ್ಕೌಟ್ ಶುರು ಮಾಡಿದರಂತೆ. ಈ ಮೂಲಕ ತನ್ನ ದೇಹವನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ಇದೀಗ ನಾಜೂಕಾದ ದೇಹದ ಸೌಂದರ್ಯವನ್ನು ಹೊಂದಿ ಅನೇಕ ಯುವಕರ ಕ್ರಷ್ ಆಗಿದ್ದಾರೆ. ನನ್ನನ್ನು ಅಂದು ಹಿಯಾಳಿಸಿದವರಿಂದಲೇ ನಾನು ಈ ರೀತಿ ಸುಂದರವಾಗಲು ಕಾರಣ. ಆದ್ದರಿಂದ ಅವರಿಗೆ ನಾನು ಹೃದಯ ಪೂರ್ವಕವಾಗಿ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತಿದ್ದೇನೆ ಎಂದಿದ್ದಾರೆ.

Previous articleವಿಷ್ಣು ಪ್ರಿಯಾ ಫೇಸ್ ಬುಕ್ ಖಾತೆ ಹ್ಯಾಕ್, ಅಶ್ಲೀಲ ಪೋಟೊ ವಿಡಿಯೋಸ್ ಶೇರ್…!
Next articleಮತ್ತೊರ್ವ ನಟಿಯೊಂದಿಗೆ ಶಿಂಬು ಅಫೈರ್ ಶುರು ಮಾಡಲಿದ್ದಾರಂತೆ, ಕಾಲಿವುಡ್ ನಟ ಶಿಂಬು ಕುರಿತಂತೆ ಮತ್ತೊಂದು ರೂಮರ್…!