ಹೈದರಾಬಾದ್: ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿದ್ದ ಇಲಿಯಾನ ಕಡಿಮೆ ಸಮಯದಲ್ಲೇ ಅನೇಕ ಅಭಿಮಾನಿಗಳ ಮನಗೆದಿದ್ದಾರೆ. ಇದೀಗ ಈ ನಟಿಯ ಕೆಲವೊಂದು ಲೇಟೆಸ್ಟ್ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ 2006 ರಲ್ಲಿ ದೇವದಾಸು ಚಿತ್ರದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟಿರುವ ಇಲಿಯಾನ ಪೊಕರಿ ಸಿನೆಮಾ ಮೂಲಕ ಸ್ಟಾರ್ ಹಿರೋಯಿನ್ ಪಟ್ಟಕ್ಕೇರಿದರು. ನಂತರ ಸ್ಟಾರ್ ಹಿರೋಗಳಾದ ಪವನ್ ಕಲ್ಯಾಣ್, ಎನ್.ಟಿ.ಆರ್, ಅಲ್ಲುಅರ್ಜುನ್, ರವಿತೇಜ, ರಾಣ ಮೊದಲಾದವರ ಜೊತೆ ನಟಿಸುವ ಅವಕಾಶ ಸಹ ಗಿಟ್ಟಿಸಿಕೊಂಡರು. ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಆ ಸಿನೆಮಾಗಳು ಹಿಟ್ ಆದರೂ ಕೂಡ ಇಲಿಯಾನ ಗೆ ಸರಿಯಾದ ರೀತಿಯಲ್ಲಿ ಮನ್ನಣೆ ದೊರೆಯಲಿಲ್ಲ.
ಇನ್ನೂ ನಟಿ ಇಲಿಯಾನ ಈ ಹಿಂದೆ ವಿದೇಶಿ ಪೊಟೋಗ್ರಾಫರ್ ನಿಬೋನ್ ಎಂಬುವವರ ಜೊತೆ ಡೇಟಿಂಗ್ ನಲ್ಲಿದ್ದರು. ಮದುವೆ ಮಾಡಿಕೊಳ್ಳುವ ಸಿದ್ದತೆಯಲ್ಲೂ ಸಹ ಇದ್ದರು ಎನ್ನಲಾಗಿದೆ. ಆದರೆ ಕೆಲವೊಂದು ಕಾರಣಗಳಿಂದ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದು, ನಿರಂತರವಾಗಿ ಹಾಟ್ ಪೊಟೋ ಶೂಟ್ಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಇದರ ಭಾಗವಾಗಿಯೇ ಇಲಿಯಾನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಶೇರ್ ಮಾಡಿದ್ದು, ಅವು ಸಖತ್ ವೈರಲ್ ಆಗುತ್ತಿದೆ.
