Film News

ತನ್ನ ಬಾಯ್ ಫ್ರೆಂಡ್ ಹೆಸರನ್ನು ಹೇಳಿದ ಇಲಿಯಾನಾ!

ಮುಂಬೈ: ಅತೀ ಕಡಿಮೆ ಸಮಯದಲ್ಲೇ ದೊಡ್ಡ ಸ್ಟಾರ್ ನಟಿ ಖ್ಯಾತಿ ಪಡೆದ ಗೋವಾ ಬ್ಯೂಟಿ ಇಲಿಯಾನ ತನ್ನ ಬಾಯ್‌ಫ್ರೆಂಡ್ ಹೆಸರನ್ನು ಬಹಿರಂಗ ಮಾಡಿದ್ದಾರೆ. ಇತ್ತೀಚಿಗಷ್ಟೆ ನೆಟ್ಟಿಗನೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಲಿಯಾನಾ ತನ್ನ ಗೆಳಯನ ಹೆಸರನ್ನು ಹೇಳಿಕೊಂಡಿದ್ದಾರೆ.

ನಟಿ ಇಲಿಯಾನಾ ಇತ್ತೀಚಿಗಷ್ಟೆ ಸೋಷಿಯಲ್ ಮಿಡೀಯಾದಲ್ಲಿ ನೆಟ್ಟಿಗರು ಹಾಗೂ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಟಿ ಇಲಿಯಾನಾಗೆ ಸದ್ಯ ಯಾವುದೇ ಸಿನೆಮಾ ಆಫರ್‌ಗಳು ಇಲ್ಲದೇ ಇದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ, ಬೀಚ್ ಗಳಲ್ಲಿ ಹಾಟ್ ಪೋಟೊಗಳನ್ನು ಶೇರ್ ಮಾಡುತ್ತಾ ಪಡ್ಡೆ ಹುಡುಗರನ್ನು ಫಿದಾ ಮಾಡುತ್ತಿರುತ್ತಾರೆ. ಇದೀಗ ಇಲಿಯಾನಾ ಗೆ ನೆಟ್ಟಿಗರು ಅನೇಕ ಪ್ರಶ್ನೆಗಳನ್ನು ಕೇಳಿದ್ದು ಎಲ್ಲದಕ್ಕೂ ಉತ್ತರ ನೀಡಿದ್ದಾರೆ ಈ ಗೋವಾ ಬ್ಯೂಟಿ.

ನಟಿ ಇಲಿಯಾನಾ ರನ್ನು ಎಲ್ಲಿದ್ದೀಯಾ? ಅಡುಗೆ ಮಾಡಲು ಬರುತ್ತದೆಯೇ? ನಿಂಗೆ ಇಷ್ಟವಾದ ವ್ಯಕ್ತಿ ಯಾರು? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪೈಕಿ ಓರ್ವ ನೆಟ್ಟಿಗ ನಿನ್ನ ಭಾಯ್ ಫ್ರೆಂಡ್ ಹೆಸರು ಏನು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ನಟಿ ಇಲಿಯಾನಾ ತನ್ನ ಪೆಟ್ ಪೊಟೋವೊಂದನ್ನು ಶೇರ್ ಮಾಡಿ, ಇದೇ ನನ್ನ ಭಾಯ್ ಪ್ರೆಂಡ್, ಈತನ ಹೆಸರು ಚಾರ್‍ಲಿ ಎಂದು ಹೇಳಿದ್ದು, ಈ ಉತ್ತರ ಎಲ್ಲರನ್ನೂ ಆಕರ್ಷಿಸಿದೆ.

ಈ ಹಿಂದೆ ನಟಿ ಇಲಿಯಾನಾ ಆಸ್ಟ್ರೇಲಿಯನ್ ಮೂಲದ ಆಂಡರೂ ನಿಬೋನ್ ಎಂಬ ಪೋಟೊಗ್ರಾಫರ್ ನೊಂದಿಗೆ ಪ್ರೀತಿಯಲ್ಲಿದ್ದರು. ಆದರೆ ಇವರಿಬ್ಬರ ನಡುವೆ ಬ್ರೇಕ್ ಆಗಿದ್ದು, ಅಲ್ಲಿಂದ ನಟಿ ಇಲಿಯಾನಾ ಸಿಂಗಲ್ ಆಗಿಯೇ ಇದ್ದಾರೆ.

Trending

To Top