ಮುಂಬೈ: ಪೌರಾಣಿಕ ಕಥೆಯನ್ನು ಆಧರಿಸಿ ನಿರ್ಮಾಣವಾಗಲಿರುವ ಬಹುನಿರೀಕ್ಷೆಯ ಆದಿಪುರುಷ್ ಸಿನೆಮಾದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಭಾಸ್ ರವರ ತಾಯಿಯ ಪಾತ್ರದಲ್ಲಿ ಖ್ಯಾತ ನಟಿ ಹೇಮಾಮಾಲಿನಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.
ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಚಿತ್ರಕ್ಕಾಗಿ ಕಲಾವಿದರ ಆಯ್ಕೆ ನಡೆಯುತ್ತಿದೆ. ಇದರ ನಡುವೆಯೇ ಪ್ರಭಾಸ್ ರವರೊಂದಿಗೆ ಯಾರು ಯಾರು ನಟಿಸಲಿದ್ದಾರೆ ಎಂಬ ಚರ್ಚೆಗಳೂ ಸಹ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇನ್ನೂ ಪ್ರಭಾಸ್ ರವರಿಗೆ ನಾಯಕಿಯಾಗಿ ಬಾಲಿವುಡ್ನ ನಟಿ ಕೃತಿ ಸನೂನ್ ಬಣ್ಣ ಹಚ್ಚಲಿದ್ದು, ಸೀತೆ ಪಾತ್ರವನ್ನು ಪೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಚಿತ್ರತಂಡ ಮಾತ್ರ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಇನ್ನೂ ಇದೀಗ ಮತ್ತೊರ್ವ ಖ್ಯಾತ ನಟಿ ಪ್ರಭಾಸ್ ಜೊತೆ ನಟಿಸಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಆ ನಟಿ ಬೇರ್ಯಾರು ಅಲ್ಲ ಹೇಮಾ ಮಾಲಿನಿ. ಆದಿಪುರುಷ್ ಚಿತ್ರದಲ್ಲಿ ರಾಮನಿಗೆ ತಾಯಿಯಾಗಿ ಹೇಮಾ ಮಾಲಿನಿ ಕೌಸಲ್ಯ ಪಾತ್ರವನ್ನು ಪೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ ಇನ್ನೂ ಹೇಮಾಮಾಲಿನಿ ಯವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಸಹ ಹೇಳಲಾಗುತ್ತಿದೆ.
ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ, ಮತ್ತೋರ್ವ ನಟ ಅಂಗದ್ ಬೇಡಿ ರಾವಣನ ಮಗನ ಪಾತ್ರದಲ್ಲಿ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸುತ್ತಿದ್ದು, ವಿಶ್ವದಲ್ಲೇ ಪ್ರಸಿದ್ದಿ ಪಡೆದ ಗ್ರಾಫಿಕ್ಸ್ ಡಿಸೈನರ್ ರವರ ಬಳಿ ಈ ಚಿತ್ರವನ್ನು ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
