Home Film News ರುದ್ರಾಕ್ಷಿ ಧರಿಸಿ ಶಾಕಿಂಗ್ ಪೊಟೋಸ್ ಹಂಚಿಕೊಂಡ ಕುಮಾರ್ 21F ನಟಿ..!

ರುದ್ರಾಕ್ಷಿ ಧರಿಸಿ ಶಾಕಿಂಗ್ ಪೊಟೋಸ್ ಹಂಚಿಕೊಂಡ ಕುಮಾರ್ 21F ನಟಿ..!

ಸಿನಿರಂಗದಲ್ಲಿ ಕೆಲವು ನಟಿಯರು ಸ್ಟಾರ್‍ ಡಮ್ ದಕ್ಕಿಸಿಕೊಳ್ಳದೇ ಇದ್ದರು, ಯುವಜನತೆಯಲ್ಲಿ ದೊಡ್ಡ ಕ್ರೇಜ್ ಹೊಂದಿರುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಹೊಂದಿರುತ್ತಾರೆ. ಈ ಸಾಲಿಗೆ ಕುಮಾರಿ 21ಎಫ್ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಹೆಬ್ಬಾ ಪಟೇಲ್ ಸಹ ಒಬ್ಬರಾಗಿದ್ದಾರೆ. ಮೊದಲನೇ ಸಿನೆಮಾದ ಮೂಲಕವೇ ಬೋಲ್ಡ್ ಆಗಿ ಕಾಣಿಸಿಕೊಂಡ ಈಕೆ ಯುವಜನತೆಯ ಹೃದಯದಲ್ಲಿ ಬಲವಾಗಿ ನೆಲೆಯೂರಿದರು. ಜೊತೆಗೆ ಈಕೆ ಕಾಣಿಸಿಕೊಂಡಿದ್ದು, ಕಡಿಮೆ ಸಿನೆಮಾಗಳಲ್ಲಾದರೂ ದೊಡ್ಡ ಕ್ರೇಜ್ ಅನ್ನು ದಕ್ಕಿಸಿಕೊಂಡರು.

ನಟಿ ಹೆಬ್ಬಾ ಪಟೇಲ್ ಗೆ ಟಾಲಿವುಡ್ ನಲ್ಲಿ ದೊಡ್ಡ ಕ್ರೇಜ್ ಇದೆ. ಮೊದಲನೇ ಸಿನೆಮಾದ ಮೂಲಕವೇ ಯುವಜನತೆಯ ಕ್ರಷ್ ಆಗಿದ್ದಾರೆ.  ಕುಮಾರಿ 21ಎಫ್ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಗ್ಲಾಮರ್‍ ಪ್ರದರ್ಶನ ಮಾಡಿ ಪುಲ್ ಫೇಮ್ ದಕ್ಕಿಸಿಕೊಂಡರು. ಇನ್ನೂ ಹೆಬ್ಬಾ ಪಟೇಲ್ ಈಡೋರಕಂ, ಆಡೋರಕಂ, ಎಕ್ಕರಿಡಿಕಿ ಪೊತಾವು ಚಿನ್ನವಾಡ ಮೊದಲಾದ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಈಕೆಯ ಗ್ಲಾಮರ್‍ ಗೆ ಅನೇಕ ಯುವಜನತೆಯ ಕನಸಿನ ರಾಣಿಯಾಗಿಬಿಟ್ಟಿದ್ದಾರೆ. ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದರೂ ಕೂಡ ಆಕೆ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಇದರಿಂದಾಗಿ ಆಕೆ ಲೀಡ್ ನಟಿಯಾಗಿ ಸಕ್ಸಸ್ ದಕ್ಕಿಸಿಕೊಳ್ಳಲು ವಿಫಲರಾದರು. ಸದ್ಯ ಆಕೆ ಕೆಲವೊಂದು ಸಣ್ಣಪುಟ್ಟ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕೆಲವು ತಿಂಗಳು ಹಿಂದೆಯಷ್ಟೆ ಬಿಡುಗಡೆಯಾದ ರಾಮ್ ಪೋತುನೇನಿ ಅಭಿನಯದ ರೆಡ್ ಸಿನೆಮಾದಲ್ಲಿ ಐಟಂ ಸಾಂಗ್ ವೊಂದರಲ್ಲಿ ಕಾಣಿಸಿಕೊಂಡಿದ್ದರು. ಮಿಸ್ಟರ್‍ ಅಂದಗಾಡು ಎಂಬ ಸಿನೆಮಾದ ಮೂಲಕ ತೆರೆಗೆ ಬಂದಿದ್ದರು. ಆದರೆ ಈ ಸಿನೆಮಾ ಸಹ ಆಕೆಗೆ ದೊಡ್ಡ ನಿರಾಸೆ ತಂದುಕೊಟ್ಟಿತ್ತು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸಹ ಹೆಬ್ಬಾ ಪುಲ್ ಆಕ್ಟೀವ್ ಆಗಿರುತ್ತಾರೆ. ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಯುವಜನತೆಯ ಹೃದಯ ಕದಿಯುವಂತಹ ಕೆಲಸ ಮಾಡುತ್ತಿರುತ್ತಾರೆ. ದಿನೇ ದಿನೇ ಆಕೆಯ ಗ್ಲಾಮರ್‍ ಹೆಚ್ಚಿಸಿಕೊಂಡು ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಆಕೆ ಇತ್ತೀಚಿಗೆ ಹಂಚಿಕೊಂಡ ಕೆಲವೊಂದು ಪೊಟೋಗಳು ಎಲ್ಲರನ್ನೂ ಶಾಕ್ ಗೆ ಗುರಿಯಾಗುವಂತೆ ಮಾಡಿದೆ. ಈ ರೀತಿಯ ಪೊಟೋ ಹಂಚಿಕೊಂಡಿದ್ದಾದರೂ ಏಕೆ ಎಂಬ ಕಾಮೆಂಟ್ ಗಳು ಹರಿದಾಡುತ್ತಿವೆ.

ನಟಿ ಹೆಬ್ಬಾ ಪಟೇಲ್ ಸೋಷಿಯಲ್ ಮಿಡಿಯಾದಲ್ಲಿ ರುದ್ರಾಕ್ಷಿಯನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ. ರುದ್ರಾಕ್ಷಿ ಧರಿಸಿ ಕಾಷಾಯ ಬಟ್ಟೆ ಧರಿಸಿ ದೀಕ್ಷೆ ತೆಗೆದುಕೊಂಡಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಂದಿದ್ದೇ ತಡ ಅಭಿಮಾನಿಗಳು ಶಾಕ್ ಗೆ ಗುರಿಯಾಗಿದ್ದಾರೆ. ನಟಿ ಹೆಬ್ಬಾ ಸಿನೆಮಾದಲ್ಲಿನ ರೋಲ್ ಗಾಗಿ ಈ ಡ್ರೆಸ್ ನಲ್ಲಿ ಕಾಣಿಸಿಕೊಂಡರಾ ಅಥವಾ ನಿಜಕ್ಕೂ ದೀಕ್ಷೆ ತೆಗೆದುಕೊಂಡಿದ್ದಾರಾ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಈ ಡ್ರೆಸ್ ನಲ್ಲೂ ಸಹ ಹೆಬ್ಬಾ ಪಟೇಲ್ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ಆಕೆಯ ಪೊಟೋಗಳನ್ನು ಎಲ್ಲೆಡೆ ವೈರಲ್ ಮಾಡಿಬಿಟ್ಟಿದ್ದಾರೆ.

Exit mobile version