ಬಾಡಿ ಶೇಮಿಂಗ್ ಬಗ್ಗೆ ಬ್ಯೂಟಿಪುಲ್ ನಟಿ ಹನ್ಸಿಕಾ ಸಹ ಸಮಸ್ಯೆಗೆ ಸಿಲುಕಿದ್ದರಂತೆ…!

ಸಿನಿರಂಗದಲ್ಲಿ ಎಂಟ್ರಿ ಕೊಡುವ ಅನೇಕ ನಟಿಯರು ಬಾಡಿ ಶೇಮಿಂಗ್ ಅನುಭವಸಿದ್ದಾರೆ. ದೇಹದಲ್ಲಿ ಕೆಲ ಭಾಗಗಳ ಬಗ್ಗೆ ಬಾಡಿ ಶೇಮಿಂಗ್ ಸಮಸ್ಯೆ ಎದುರಿಸಿದ್ದು, ಇದರಿಂದ ಸಿನೆಮಾಗಳಿಂದ ವಂಚಿತರಾದ ಕೆಲ ಸನ್ನಿವೇಶಗಳೂ ಸಹ ನಡೆದಿದೆ ಎನ್ನಲಾಗಿದೆ. ಇದೀಗ ದಕ್ಷಿಣ ಭಾರತದ ಬ್ಯೂಟಿಪುಲ್ ನಟಿ ಹನ್ಸಿಕಾ ಮೊಟ್ವಾನಿ ಸಹ ಬಾಡಿ ಶೇಮಿಂಗ್ ನಿಂದ ಸಮಸ್ಯೆಯನ್ನು ಎದುರಿಸಿದ್ದರಂತೆ. ಈ ಕುರಿತು ಸಂದರ್ಶನವೊಂದರಲ್ಲಿ ಆಕೆ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಬಾಡಿ ಶೇಮಿಂಗ್ ನಿಂದಾಗಿ ಆಕೆ ಅನೇಕ ಬಾರಿ ಟ್ರೋಲ್ ಆಗಿದ್ದು, ಇದರಿಂದ ತುಂಬಾ ಸಮಸ್ಯೆ ಅನುಭವಿಸಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ.

ನಟಿ ಹನ್ಸಿಕಾ ಮೊಟ್ವಾನಿ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ನಟನಾಗಿ ಕಾಣಿಸಿಕೊಂಡ ದೇಶಮುದುರು ಎಂಬ ಸಿನೆಮಾದ ಮೂಲಕ ತೆರೆಗೆ ಬಂದರು ಮೊದಲನೇ ಸಿನೆಮಾದ ಮೂಲಕವೇ ಆಕೆ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡರು. ಬಳಿಕ ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶಗಳನ್ನು ಸಹ ಗಿಟ್ಟಿಸಿಕೊಂಡರು. ಟಾಲಿವುಡ್ ನಲ್ಲಿ ಸಿನೆಮಾ ಅವಕಾಶಗಳು ಕಡಿಮೆಯಾದರೂ ಸಹ ಕಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ತೆಲುಗು ಸಿನಿರಂಗಕ್ಕೆ ಎಂಟ್ರಿಕೊಟ್ಟು 18 ವರ್ಷಗಳು ಕಳೆದರೂ ಸಹ ಇನ್ನೂ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ದಕ್ಕಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಅಭಿನಯದ ಮಹಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಹನ್ಸಿಕಾ ಮಾಜಿ ಬಾಯ್ ಫ್ರೆಂಡ್ ಶಿಂಬು ಜೊತೆ ನಟಿಸಿದ್ದಾರೆ.

ನಟಿ ಹನ್ಸಿಕಾ ಮಹಾ ಸಿನೆಮಾದಲ್ಲಿ ನೆಗೆಟೀವ್ ಕ್ಯಾರೆಕ್ಟರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದ ಪ್ರಮೋಷನ್ಸ್ ಭಾಗವಾಗಿ ಆಕೆ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನಗಳಲ್ಲಿ ಹನ್ಸಿಕಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಕೆ ತನ್ನ ಬಗ್ಗೆ ನಡೆದ ಬಾಡಿ ಶೇಮಿಂಗ್ ಟ್ರೋಲ್ಸ್ ಬಗ್ಗೆ ಮಾತನಾಡಿದ್ದಾರೆ. ನಟಿ ಹನ್ಸಿಕಾ ಕೆರಿಯರ್‍ ಪ್ರಾರಂಭದಲ್ಲಿ ಅನೇಕ ಟ್ರೋಲ್ಸ್ ಬಗ್ಗೆ ಮಾತನಾಡಿದ್ದಾರೆ. ಬಾಡಿ ಶೇಮಿಂಗ್ ಬಗ್ಗೆ ಆಕೆ ಅನುಭವಿಸಿದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಅದೆಲ್ಲವನ್ನೂ ಪಾಜಿಟೀವ್ ಆಗಿ ತೆಗೆದುಕೊಂಡು ಧೈರ್ಯವಾಗಿ ಎದುರಿಸಿದ್ದಾಗಿ ಹೇಳಿದ್ದಾರೆ. ತನ್ನ ದೇಹ ಯಾವ ರೀತಿ ಇದೆ ಎಂಬುದು ಅವರ ಕೈಯಲ್ಲೇ ಇದೆ. ಬೇರೆಯವರ ಆಲೋಚನೆಗಳಿಗೆ, ಅಭಿಪ್ರಾಯಗಳಿಗೆ ತಕ್ಕಂತೆ ಇರಬೇಕೆಂದು ಪ್ರಯತ್ನಿಸುವುದು ಯಾವುದೇ ಅರ್ಥವಿಲ್ಲ ಎಂಬ ವಿಚಾರವನ್ನು ನಿಧಾನವಾಗಿ ಅರ್ಥ ಮಾಡಿಕೊಂಡೆ ಎಂದು ಹನ್ಸಿಕಾ ಹೇಳಿದ್ದಾರೆ.

ಇನ್ನೂ ಹನ್ಸಿಕಾ ಮಹಾ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಬರೊಬ್ಬರಿ 71 ಸಾವಿರ ಬೆಲೆಬಾಳುವ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸೀರೆಯ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದಲ್ಲೇ ಚರ್ಚೆ ಆಗುತ್ತಿದೆ. ಕಾಫಿ ಹಾಗೂ ಕಪ್ಪು ಬಣ್ಣ ಸ್ಲೀವ್ ಲೆಸ್ ಸೀರೆಯಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ನಟಿ ಹನ್ಸಿಕಾ ಮಿರ ಮಿರ ಮಿಂಚಿದ್ದಾರೆ. ದುಬಾರಿ ಬೆಲೆಯ ಸೀರೆಯಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಸೀರೆ ಸಿಂಪಲ್ ಆಗಿದ್ದರೂ ಸಹ ಬೆಲೆ ಮಾತ್ರ ಬರೊಬ್ಬರಿ 71 ಸಾವಿರ ಎನ್ನಲಾಗಿದೆ.

Previous articleಪಡ್ಡೆಹುಡುಗರು ಬೆವರು ತರಿಸುವ ವರ್ಕೌಟ್ ವಿಡಿಯೋ ಶೇರ್ ಮಾಡಿದ ಬಾಲಿವುಡ್ ಸ್ಟಾರ್ ಕಿಡ್ ಸಾರಾ…!
Next articleಬಾರ್ ನಲ್ಲಿ ಎಂಜಾಯ್ ಮಾಡುತ್ತಾ ಚೀಯರ್ಸ್ ಹೇಳುತ್ತಿರುವ ಬೋಲ್ಡ್ ಬ್ಯೂಟಿ ಪಾಯಲ್…!