ಹೈದರಾಬಾದ್: ಟಾಲಿವುಡ್ ನ ಬಹುಬೇಡಿಕೆಯುಳ್ಳ ಯಂಗ್ ನಟಿ ಈಷಾರೆಬ್ಬಾ ಗುಣಶೇಖರ್ ನಿರ್ದೇಶನದಲ್ಲಿ ಮೂಡಿಬರಲಿರುವ ಶಾಕುಂತಲಂ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಟಿ ಈಷಾರೆಬ್ಬಾ ಅಂತಕುಮುಂದು ಆ ತರುವಾತ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟಿದ್ದು, ಅತೀ ಕಡಿಮೆ ಸಮಯದಲ್ಲಿಯೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಮೂಲತಃ ತೆಲುಗು ನಟಿಯಾಗಿರುವ ಈಷಾರೆಬ್ಬಾ ನಾಯಕಿ ಪಾತ್ರದಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಮೂಡಿಬರಲಿರುವ ಶಾಕುಂತಲಂ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ ಎನ್ನಲಾಗಿದೆ.
ಅಂದಹಾಗೆ ಶಾಕುಂತಲಂ ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ಅಂದರೇ ನಾಯಕಿಯಾಗಿ ಖ್ಯಾತ ನಟಿ ಸಮಂತಾ ಅಕ್ಕಿನೇನಿ ನಟಿಸುತ್ತಿದ್ದು, ಸಮಂತಾ ಸ್ನೇಹಿತೆಯ ಪಾತ್ರದಲ್ಲಿ ಈಷಾರೆಬ್ಬಾ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಈ ಪಾತ್ರ ಸಿನೆಮಾದಲ್ಲಿ ಬಹುಮುಖ್ಯವಾದುದು ಎಂದು ಹೇಳಲಾಗುತ್ತಿದೆ. ನಿರ್ದೇಶಕ ಗುಣಶೇಖರ್ ಈ ಪಾತ್ರಕ್ಕಾಗಿ ಅನೇಕ ನಟಿಯರನ್ನು ಭೇಟಿಯಾಗಿದ್ದು, ಅಂತಿಮವಾಗಿ ಈಷಾರೆಬ್ಬಾ ರವರನ್ನು ಆಯ್ಕೆ ಮಾಡಿದ್ದಾರೆ.
ಮುಖ್ಯವಾಗಿ ನಿರ್ದೇಶಕ ಗುಣಶೇಖರ್ ಈ ಸಿನೆಮಾದಲ್ಲಿ ಪ್ರತೀ ವಿಷಯದಲ್ಲೂ ಹೆಚ್ಚು ಜಾಗ್ರತೆಯನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಅದರ ಭಾಗವಾಗಿಯೇ ಶಾಕುಂತಲಂ ಚಿತ್ರದಲ್ಲಿ ಸಮಂತಾ ಲೀಡ್ ರೋಲ್ ಪೋಷಣೆ ಮಾಡುತ್ತಿದ್ದು, ಈ ಪಾತ್ರಕ್ಕಾಗಿ ವಿಶೇಷ ಸೀರೆಯನ್ನು ರೆಡಿ ಮಾಡಿಸುತ್ತಿದ್ದಾರಂತೆ. ಮಹಾಭಾರತ ಕಾಲದಲ್ಲಿ ಮಹಿಳೆಯರು ಉಡುತ್ತಿರುವ ಸೀರೆಗಳಂತೆಯೇ ಸಮಂತಾ ಪಾತ್ರಕ್ಕೂ ಸಿದ್ದ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.