Film News

ಚರ್ಚೆಗೆ ಕಾರಣವಾಯ್ತು ದಿವ್ಯ ಅಗರ್ವಾಲ್ ಹಾಟ್ ಪೊಟೋಸ್!

ಮುಂಬೈ: ಇತ್ತೀಚಿಗೆ ಸಿನೆಮಾ ನಟಿಯರಿಗಿಂತ, ಸಹ ನಟಿಯರು, ಕಿರುತೆರೆ ನಟಿಯರು ಹೆಚ್ಚಾಗಿ ಗ್ಲಾಮರ್ ಶೋ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಸಾಕ್ಷಿಯಾಗಿ ಏಸ್ ಆಫ್ ಸ್ಪೇಸ್ ಸೀಸನ್-1 ಎಂಬ ಕಾರ್ಯಕ್ರಮದ ವಿಜೇತೆಯಾದ ದಿವ್ಯ ಅಗರ್ವಾಲ್ ಟಾಪ್‌ಲೆಸ್ ಪೋಟೊ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ನಟಿ ದಿವ್ಯ ಅಗರ್ವಾಲ್ ಏಸ್ ಆಫ್ ಸ್ಪೇಸ್ ಎಂಬ ಕಾರ್ಯಕ್ರಮದ ವಿಜೇತಯಾಗಿ, ಹಲವು ಷೋಗಳು ಜೊತೆಗೆ ಮ್ಯೂಸಿಕ್ ಆಲ್ಬಮ್ ಒಂದರಲ್ಲಿ ಸಹ ನಟಿಸಿದ್ದಾರೆ. ಅಷ್ಟೇ ಅಲ್ಲದೇ 2019 ರ ವರ್ಷದಲ್ಲಿ ಮೋಸ್ಟ್ ಡಿಜೈರಬಲ್ ವುಮೆನ್ ಪಟ್ಟಿಯಲ್ಲಿ ೬ನೇ ಸ್ಥಾನವನ್ನು ಸಹ ವಶಮಾಡಿಕೊಂಡಿದ್ದರು. ಇದೀಗ ಇದೇ ನಟಿಯ ಟಾಪ್‌ಲೆಸ್ ಪೋಟೊ ಒಂದು ಸಖತ್ ವೈರಲ್ ಆಗುತ್ತಿದ್ದು, ದೊಡ್ಡ ಮಟ್ಟದಲ್ಲಿ ಚರ್ಚೆಗೆ ಸಹ ಕಾರಣವಾಗಿದೆ.

ಇನ್ನೂ ಪೊಟೋ ವಿಚಾರಕ್ಕೆ ಬಂದರೇ, ನಟಿ ದಿವ್ಯ ಅಗರ್ವಾಲ್ ಟಾಪ್‌ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಹೂವಿನ ಬೊಕೆಯನ್ನು ಪ್ಯಾಂಟ್ ಒಳಗೆ ಇಟ್ಟುಕೊಂಡಿದ್ದು, ಈ ಪೊಟೋಗೆ ಅನೇಕರು ವಿಮರ್ಶೆ ಮಾಡಿದ್ದಾರೆ. ಈ ವಿಮರ್ಶೆಗೆ ಸ್ಪಂದನೆಯನ್ನು ಸಹ ನೀಡಿದ್ದಾರೆ ದಿವ್ಯ ಅಗರ್ವಾಲ್.

ನಾನು 2020 ನೇ ವರ್ಷದಲ್ಲಿ ಮನೆಯಲ್ಲಿ ಇದ್ದ ಕಾರಣ ತುಂಬಾ ನೊಂದಿದ್ದೆ. ಒಂದು ಹೊಸದಾದ ಪ್ರಯೋಗ ಮಾಡಬೇಕೆಂಬ ಉದ್ದೇಶದಿಂದ ಪೋಟೊ ಶೂಟ್ ಮಾಡಿಸಿದ್ದೆ. ನಾ ಶರೀರವನ್ನು ತೋರಿಸುವುದು ನನ್ನ ಉದ್ದೇಶವಲ್ಲ. ಬದಲಿಗೆ ಆ ಕಾನ್ಸೆಪ್ಟ್ ತುಂಬಾ ಇಷ್ಟವಾಯ್ತು, ಪೋಟೊ ಶೂಟ್ ಮಾಡಿಸಿದ್ದೇನೆ. ಅಷ್ಟು ಬಿಟ್ಟರೇ ಬೇರೆ ಉದ್ದೇಶ ನನಗಿಲ್ಲ. ಆದರೆ ಕೆಲವರು ನನ್ನನ್ನು ಬೇರೆ ರೀತಿಯಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಕೆಲವರಂತೂ ನಾನು ಬ್ಯುಜಿ ಕಲಾವಿದೆಯಲ್ಲ ಎಂದು ಭಾವಿಸಿ, ಈ ಪೊಟೋಶೂಟ್ ಮಾಡಿದ್ದೇನೆ ಎಂಬೆಲ್ಲಾ ಮಾತುಗಳನ್ನು ಆಡಿದ್ದಾರೆ. ಇದರಿಂದ ನಾನು ಪಟ್ಟ ನೋವು ಹೇಳಲು ಆಗುವುದಿಲ್ಲ ಎಂದಿದ್ದಾರೆ.

Trending

To Top