ಹಾಟ್ ಡ್ರೆಸ್ ನೊಂದಿಗೆ ಹಾಟ್ ಲುಕ್ ಕೊಟ್ಟ ಬ್ಯೂಟಿ ದಿಶಾ ಪಟಾನಿ…..

ಇಂಡಿಯಾದ ಮೋಸ್ಟ್ ಹಾಟೆಸ್ಟ್ ನಟಿಯಾಗಿ ಖ್ಯಾತಿ ಪಡೆದಿರುವ ದಿಶಾ ಪಟಾನಿ ತಮ್ಮ ಹಾಟ್ ಪೋಸ್ ಗಳೊಂದಿಗೆ ಎಲ್ಲರನ್ನೂ ಬೆರಗುಗೊಳಿಸುವಂತಹ ಸೌದರ್ಯವನ್ನು ಹೊಂದಿರುವ ನಟಿಯಾಗಿದ್ದಾರೆ. ಸಾಮಾನ್ಯ ರೀತಿಯಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಅತ್ಯಂತ ಕಡಿಮೆ ಸಮಯದಲ್ಲೇ ತಮ್ಮದೇ ಆದ ಸ್ಟಾರ್‍ ಡಮ್ ಸ್ವಂತ ಮಾಡಿಕೊಂಡಿದ್ದಾರೆ. ಜೊತೆಗೆ ಸದಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ನಿದ್ದೆಗೆಡಿಸುವಂತೆ ಮಾಡುತ್ತಾರೆ ದಿಶಾ.

ಮೂಲತಃ ಮಾಡೆಲ್ ಆಗಿದ್ದ ದಿಶಾ ಪಟಾನಿ ದೇಶದಾದ್ಯಂತ ಫೇಮ್ ಪಡೆದುಕೊಂಡಿದ್ದರು. ಟಾಲಿವುಡ್ ನ ಪೂರಿ ಜಗನ್ನಾಥ್ ನಿರ್ದೇಶನದ ಲೋಫರ್‍ ಎಂಬ ಸಿನೆಮಾ ಮೂಲಕ ಎಂಟ್ರಿ ಕೊಟ್ಟರು. ಆದರೆ ಸಿನೆಮಾ ಅಷ್ಟೊಂದು ಸಕ್ಸಸ್ ಆಗಲಿಲ್ಲ. ಆದರೂ ಸಹ ದಿಶಾ ಪಟಾನಿ ಕ್ರೇಜ್ ಕಡಿಮೆಯಾಗಿರಲಿಲ್ಲ. ಬಳಿಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ದಿಶಾ ಎಂ.ಎಸ್.ಧೋನಿ ಜೀವನ ಕಥೆಯನ್ನು ಆಧರಿಸಿ ನಿರ್ಮಾಣವಾದ ಈ ಸಿನೆಮಾದಲ್ಲಿ ನಟಿಸಿ ಪ್ಯಾಪುಲರ್‍ ಆದರು. ಬಳಿಕ ಸಾಲು ಸಾಲು ಸಿನೆಮಾಗಳ ಮೂಲಕ ತಮ್ಮ ಸ್ಟಾರ್‍ ಡಮ್ ಸ್ವಂತ ಮಾಡಿಕೊಂಡರು. ಎಂ.ಎಸ್.ಧೋನಿ ಸಿನೆಮಾ ಬಳಿಕ ಕುಂಗ್ ಫೂ ಯೋಗಾ, ಭಾಗಿ 2, ಭಾರತ್, ಮಲಾಂಗ್, ವೆಲ್‌ಕಂ ಟು ನ್ಯೂಯಾರ್ಕ್, ಭಾಗಿ 3 ಸೇರಿದಂತೆ ಅನೇಕ ಹಿಟ್ ಸಿನೆಮಾಗಳ ಮೂಲಕ ತಮ್ಮ ಕ್ರೇಜ್ ಮತಷ್ಟು ಹೆಚ್ಚಿಸಿಕೊಂಡರು.

ನಟಿ ದಿಶಾ ಪಟಾನಿ ಬೋಲ್ಡ್ ಲುಕ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇನ್ನೂ ದಿಶಾ ಬಾಲಿವುಡ್ ಸ್ಟಾರ್‍ ಹಿರೋ ಟೈಗರ್‍ ಷೇರಾಫತ್ ಜೊತೆ ಡೇಟಿಂಗ್ ನಲ್ಲಿದ್ದು, ಮೊದಲಿಗೆ ಇವರಿಬ್ಬರ ಸಂಬಂಧ ಗುಟ್ಟಾಗಿತ್ತು. ಬಳಿಕ ಈ ವಿಚಾರ ಹೊರಬಂದ ಕೂಡಲೇ ಓಪೆನ್ ಆಗಿಯೇ ಆತನ ಜೊತೆಗಿನ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಬಳಿಕ ಆತನೊಂದಿಗೆ ಪುಲ್ ಎಂಜಾಯ್ ಮಾಡುತ್ತಿದ್ದು, ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಸಹ ಏರಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ನಟಿ ದಿಶಾ ಪಟಾನಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಒಂದು ಪೋಟೊ ಸಖತ್ ವೈರಲ್ ಆಗಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೊಟೋ ಶೇರ್‍ ಮಾಡಿದ್ದು. ಇದರಲ್ಲಿ ತೆಳುವಾದ ಟ್ರಾನ್ಸಫರೆನ್ಸ್ ಡ್ರೆಸ್ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಈರುಳ್ಳಿ ಸಿಪ್ಪೆಯಂತಿರುವ ಡ್ರೆಸ್ ನಲ್ಲಿ ದಿಶಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಈ ಡ್ರೆಸ್ ನ ಮೂಲಕ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಈ ಪೊಟೋಗೆ ನೆಟ್ಟಿಗರಿಂದ ಸಖತ್ ರೆಸ್ಪಾನ್ಸ್ ಬಂದಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Previous articleಸಲಾರ್ ಸಿನೆಮಾದ ಹೊಸ ಪೋಸ್ಟರ್ ಬಿಡುಗಡೆ… ಪ್ರಭಾಸ್ ಸಹ ವೈಲೆನ್ಸ್ ಆಗಲಿದ್ದಾರೆ….
Next articleಎಫ್-3 ಸಿನೆಮಾದಲ್ಲಿನ ಪೂಜಾ ಹೆಗ್ಡೆ ಸ್ಪೇಷಲ್ ಸಾಂಗ್ ಬಿಡುಗಡೆ, ಭರ್ಜರಿ ಸ್ಟೇಪ್ಸ್ ಹಾಕಿದ ಪೂಜಾ…