Film News

ವಿಲನ್ ರೋಲ್ ನಲ್ಲಿ ನಟಿ ದೀಪಿಕಾ ಪಡುಕೋಣೆ!

ಮುಂಬೈ: ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ನಾಯಕಿಯಾಗಿ ರಂಜಿಸುತ್ತಿದ್ದ ದೀಪಿಕಾ ಪಡುಕೋಣೆ ಇದೀಗ ೪ನೇ ಬಾರಿಗೆ ವಿಲನ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ.

ಅಂದಹಾಗೆ ನಟಿ ದೀಪಿಕಾ ನಟಿಸುತ್ತಿರುವುದು ಧೂಮ್ ಸೀರಿಸ್ ಸಿನೆಮಾದಲ್ಲಿ. ಈಗಾಗಲೇ ದೇಶ ಸೇರಿದಂತೆ ವಿದೇಶದಲ್ಲೂ ಸಹ ಧೂಮ್ ಚಿತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಚಿತ್ರದಲ್ಲಿ ಕಳ್ಳರನ್ನು ನಾಯಕರಂತೆ ತೋರುವ ಬಿಗ್ ಆಕ್ಷನ್ ಚಿತ್ರವಾಗಿದೆ. ಇದೀಗ ದೀಪಿಕಾ ಈ ಚಿತ್ರದಲ್ಲಿ ಖಳನಾಯಕಿಯಾಗಿ ನಟಿಸಲಿದ್ದಾರೆ.

ಧೂಮ್ ಚಿತ್ರ ಅಂದ ಕೂಡಲೇ ರೇಸ್ ಬೈಕ್‌ಗಳು, ದೊಡ್ಡ ದೊಡ್ಡ ಐಶಾರಾಮಿ ಲೊಕೇಷನ್‌ಗಳು, ಬೈಕ್‌ಗಳ ಚೇಸಿಂಗ್ ದೃಶ್ಯಗಳು ಜೊತೆಗೆ ಥ್ರಿಲ್ಲರ್ ಈ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಧೂಮ್ ಸರಣಿಗಳಲ್ಲಿ ಜಾನ್ ಅಬ್ರಹಾಂ, ಐಶ್ವರ್ಯ ರೈ, ಹೃತಿಕ್ ರೋಷನ್, ಅಮೀರ ಖಾನ್, ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಬಿಪಾಷಾ ಬಸು ಬಣ್ಣ ಹಚ್ಚಿದ್ದರು. ಇದೀಗ ದೀಪಿಕಾ ಹಾಗೂ ದೊಡ್ಡ ಸ್ಟಾರ್ ನಟರೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ.

ಇನ್ನೂ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಧೂಮ್ ಸರಣಿಯಲ್ಲಿ ಶಾರುಖ್ ಜೊತೆ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಶಾರುಕ್ ಖಾನ್ ಜೊತೆ ದೀಪಿಕಾ ಪಡುಕೋಣೆ ಖಳನಟರಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ಬಾಲಿವುಡ್‌ನ ಪಠಾಣ್, ಫೈಟರ್ ಎಂಬ ಚಿತ್ರಗಳಲ್ಲಿ ದೀಪಿಕಾ ನಟಿಸಲಿದ್ದು, ಇದಾದ ಬಳಿಕ ಬಾಹುಬಲಿ ಪ್ರಭಾಸ್ ಚಿತ್ರವೊಂದರಲ್ಲೂ ಸಹ ನಟಿಸಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

Trending

To Top