Film News

ಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಖ್ಯಾತ ನಟಿ ದೀಪಿಕಾ, ಕಾರಣವಾದರೂ ಏನು?

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಮುನ್ನುಗ್ಗುತ್ತಿರುವ ದೀಪಿಕಾ ಪಡುಕೋಣೆ ಗ್ಲಾಮರಸ್ ಸಿನೆಮಾಗಳೂ ಹಾಗೂ ಮಹಿಳಾ ಪ್ರಧಾನ ಸಿನೆಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ಕ್ರೇಜ್ ತಂದುಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್‍ ನಟರ ಮೊದಲನೇ ಆಯ್ಕೆ ಸಹ ದೀಪಿಕಾ ಆಗಿರುತ್ತಾರೆ. ಹಾಲಿವುಡ್ ಸಿನಿರಂಗಕ್ಕೂ ಎಂಟ್ರಿ ಕೊಟ್ಟ ಈಕೆ ವಿಶ್ವ ಮಟ್ಟದಲ್ಲೂ ಖ್ಯಾತಿ ಪಡೆದುಕೊಂಡಿದ್ದಾರೆ. ಅಷ್ಟೇಅಲ್ಲದೇ ದೀಪಿಕಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇನ್ನೂ ಇತ್ತೀಚಿಗೆ ಆಕೆ ಕೆಲವೊಂದು ಆಸಕ್ತಿಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಆಕೆ ಡಿಪ್ರೆಷನ್ ಕಾರಣದಿಂದಾಗಿ ಆತ್ಮಹತ್ಯೆಗೂ ಸಿದ್ದವಾಗಿದ್ದರಂತೆ. ಸದ್ಯ ಆಕೆಯ ಹೇಳಿಕೆಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ.

ನಟಿ ದೀಪಿಕಾ ಅನೇಕ ಬಾರಿ ಡಿಪ್ರೆಷನ್ ಗೆ ಗುರಿಯಾಗಿದ್ದರಂತೆ. ಅದರೊಂದಿಗೆ ತುಂಬಾನೆ ಹೋರಾಟ ಮಾಡಿದ್ದರಂತೆ. ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಕೆ ಅನುಭವಿಸಿದ ಡಿಪ್ರೆಷನ್ ಬಗ್ಗೆ ಮಾತನಾಡಿದ್ದಾರೆ. ಮಾನಸಿಕ ಆರೋಗ್ಯ ಎಂಬುದು ಒಬ್ಬರ ವೃತ್ತಿಪರವಾದ ಜಯಕ್ಕೆ ಯಾವುದೇ ಸಂಬಂಧವಿಲ್ಲ. ಯಾವುದೇ ಸ್ಪಷ್ಟವಾದ ಕಾರಣವಿಲ್ಲದೆ ನಾನು ತುಂಬಾ ಅಳುತ್ತಿದೆ. ಒತ್ತಡದಿಂದ ತಪ್ಪಿಸಿಕೊಳ್ಳಲು ಸದಾ ನಿದ್ದೆ ಮಾಡಬೇಕೆಂದು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನ್ನಿಸುತ್ತಿತ್ತು. ಈ ಡಿಪ್ರೆಷನ್ ಸಮಯದಲ್ಲಿ ನನ್ನ ತಾಯಿ ಉಜ್ವಲಾ ಪಡುಕೋಣೆ ನನಗೆ ಧೈರ್ಯ ತುಂಬಿದರು. ನಾನು ಆತ್ಮಹತ್ಯೆ ಮಾಡಿಕೊಳ್ಳವ ಲಕ್ಷಣಗಳು ನನ್ನಲ್ಲಿ ಗುರ್ತಿಸಿದ ಕ್ರೆಡಿಟ್ ನಮ್ಮ ಅಮ್ಮನಿಗೆ ಸಲ್ಲುತ್ತದೆ ಎಂದಿದ್ದಾರೆ. ಇನ್ನೂ ನಟಿ ದೀಪಿಕಾ ಡಿಪ್ರೆಷನ್ ನಿಂದ ಹೊರಬಂದು ಅವರಂತೆ ಸಮಸ್ಯೆ ಅನುಭವಿಸುವಂತಹವರಿಗೆ ಸಹಯಾ ಮಾಡುವ ದೃಷ್ಟಿಯಿಂದ ಕಳೆದ 2015 ರಲ್ಲಿ ಯಾವುದೇ ಲಾಭದ ಆಸೆಯಲ್ಲದೆ, ದಿ ಲೈವ್ ಲವ್ ಲಾಫ್ ಫೌಂಡೇಷನ್ ಎಂಬ ಎನ್.ಜಿ.ಒ ಸಹ ಪ್ರಾರಂಭ ಮಾಡಿದ್ದರು. ಈ ಸಂಸ್ಥೆಯ ಮೂಲಕ ಡಿಪ್ರೆಷನ್ ಗೆ ಗುರಿಯಾದ ವರಿಗೆ ಜೀವನ ಬಗ್ಗೆ ಅವಗಾಹನೆಯನ್ನು ಕಲ್ಪಿಸುವ ಕೆಲಸ ಮಾಡುತ್ತಿರುತ್ತಾರೆ.

ನಟಿ ದೀಪಿಕಾ ಪಡುಕೋಣೆ ಐಶ್ವರ್ಯ ಎಂಬ ಕನ್ನಡದ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಓಂ ಶಾಂತಿ ಓಂ ಎಂಬ ಸಿನೆಮಾದ ಮೂಲಕ ಬಹುಬೇಡಿಕೆ ನಟಿಯಾದರು. ಬಳಿಕ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಅನೇಕ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಇನ್ನೂ ದೇಶದಲ್ಲೇ ಆಕೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ 2018 ರಲ್ಲಿ ಬಾಲಿವುಡ್ ನ ಖ್ಯಾತ ನಟ ರಣವೀರ್‍ ಸಿಂಗ್ ರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ಬಳಿಕವೂ ಸಹ ಆಕೆ ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದಾರೆ.

ಸದ್ಯ ನಟಿ ದೀಪಿಕಾ ಶಾರುಕ್ ಖಾನ್ ಜೊತೆಗೆ ಪಠಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಕೆಲಸಗಳು ಭರದಿಂದ ಸಾಗಿದ್ದು, ಮುಂದಿನ ವರ್ಷ ಈ ಸಿನೆಮಾ ತೆರೆಗೆ ಬರಲಿದೆ. ಜೊತೆಗೆ ಬಾಹುಬಲಿ ಖ್ಯಾತಿ ರೆಬೆಲ್ ಸ್ಟಾರ್‍ ಪ್ರಭಾಸ್ ಜೊತೆಗೆ ಪ್ಯಾನ್ ಇಂಡಿಯಾ ಸಿನೆಮಾ ಪ್ರಾಜೆಕ್ಟ್ K ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಸಹ ಮುಂದಿನ ವರ್ಷದ ಕೊನೆಯಲ್ಲಿ ಅಥವಾ 2024 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸಿನೆಮಾಗಳ ಜೊತೆಗೆ ಸರ್ಕಸ್, ಬ್ರಹ್ಮಾಸ್ತ್ರ ಹಾಗೂ ಜವಾನ್ ಸಿನೆಮಾಗಳಲ್ಲಿ  ಸಹ ಕಾಣಿಸಿಕೊಂಡಿದ್ದಾರೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಚಿರು ಇಂಟ್ರಸ್ಟಿಂಗ್ ಕಾಮೆಂಟ್ಸ್, ಸಿನಿರಂಗ ಬಿಟ್ಟು ಬಂದ ಬಳಿಕ ಅದರ ಬೆಲೆ ತಿಳಿಯಿತು ಎಂದ ನಟ…!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟನಾಗಿ ಅನೇಕ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡಿರುವ ಮೆಗಾಸ್ಟಾರ್‍ ಚಿರಂಜೀವಿ ಇಂಡಿಯನ್ ಬೆಸ್ಟ್ ಫಿಲಂ ಪರ್ಸನಾಲಿಟಿ…

3 mins ago

ತಂದೆ ನೋಡಿದ ಹುಡುಗನನ್ನೇ ಮದುವೆಯಾಗಲಿದ್ದಾರಂತೆ ಸ್ಟಾರ್ ನಟಿ ಕೀರ್ತಿ ಸುರೇಶ್…!

ಸಿನಿರಂಗದ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಅವರ ವೈಯುಕ್ತಕ ವಿಚಾರಗಳಂತೂ ಬಿರುಗಾಳಿಯಂತೆ ಹಬ್ಬುತ್ತಿರುತ್ತದೆ. ಆ ಸುದ್ದಿ…

13 hours ago

ಶ್ರುತಿ ಹಾಸನ್ ಸೆಲ್ಫಿ ನೋಡಿ ಶಾಕ್ ಆದ ಅಭಿಮಾನಿಗಳು, ಸ್ಟಾರ್ ನಟಿಯ ಮುಖಕ್ಕೆ ಏನಾಗಿದೆ?

ಸದ್ಯ ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳ ಮೂಲಕ ಮುನ್ನುಗ್ಗುತ್ತಿರುವ ನಟಿಯರಲ್ಲಿ ಶ್ರುತಿ ಹಾಸನ್…

15 hours ago

ಭರ್ಜರಿ ಆಫರ್ ಗಿಟ್ಟಿಸಿಕೊಂಡ ಸ್ಯಾಂಡಲ್ ವುಡ್ ಬ್ಯೂಟಿ ಶ್ರೀಲೀಲಾ, ಸ್ಟಾರ್ ನಟನೊಂದಿಗೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡ ಬ್ಯೂಟಿ….!

ಇತ್ತೀಚಿಗೆ ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಜೋರು ಸಾಗುತ್ತಿದೆ. ಈ ಹಾದಿಯಲ್ಲೇ ಕನ್ನಡದ ನಟಿ ಶ್ರೀಲೀಲಾ ಸಹ ಪೆಳ್ಳಿಸಂದD…

17 hours ago

ಕೆಂಪು ಬಣ್ಣದ ಸೀರೆಯಲ್ಲಿ ರೆಡ್ ಮಿರ್ಚಿಯಂತೆ ಸ್ಪೈಸಿ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೇಯಾ…!

ಸೀನಿಯರ್‍ ಬ್ಯೂಟಿ ಶ್ರೆಯಾ ಶರಣ್ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ಸದ್ದು ಮಾಡುತ್ತಿದ್ದಾರೆ. ನಟಿ ಶ್ರೆಯಾ ಫಸ್ಟ್…

18 hours ago

ಹನ್ಸಿಕಾ ಭರ್ಜರಿಯಾಗಿ ಎಂಜಾಯ್ ಮಾಡುತ್ತಿದ್ದಾರೆ ಬ್ಯಾಚಿಲರ್ ಪಾರ್ಟಿ, ಮದುವೆಗೂ ಮುಂಚೆ ಹಾಟ್ ಟ್ರೀಟ್ ಕೊಟ್ಟ ಆಪಲ್ ಬ್ಯೂಟಿ….!

ಸೌತ್ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡಿರುವ ಹನ್ಸಿಕಾ ಮೊಟ್ವಾನಿ ಮದುವೆಗೆ ದಿನಗಣನೆ ಶುರುವಾಗಿದೆ. ಅಲ್ಲು ಅರ್ಜುನ್ ಜೊತೆಗೆ…

19 hours ago