ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲಾದ ಸ್ಟಾರ್ ನಟಿ ದೀಪಿಕಾ ಪಡುಕೊಣೆ…!

ಸೌತ್ ಅಂಡ್ ನಾರ್ತ್ ಸಿನಿರಂಗದ ಖ್ಯಾತ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರಾದ ಕಾರಣದಿಂದ ಅವರು ಮುಂಬೈನ ಆಸ್ಪತ್ರೆಗೆ ದಾಖಲಾಗಿ ಕೆಲವೊಂದು ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಕಳೆದ ಸೆ.26 ರ ರಾತ್ರಿ ಸಮಯದಲ್ಲಿ ದೀಪಿಕಾ ಆರೋಗ್ಯದಲ್ಲಿ ಏರುಪೇರಾಗಿದ್ದು ಕೂಡಲೇ ಆಕೆಯನ್ನು ಮುಂಬೈನ ಬ್ರೀಚ್ ಕ್ಯಾಂಡಿ ಎಂಬ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆಯಂತೆ. ಆದರೆ ಈ ಕುರಿತು ಅಧಿಕೃತ ಹೇಳಿಕೆ ಯಾವುದೂ ಸಹ ಹೊರಬಂದಿಲ್ಲ.

ಬಾಲಿವುಡ್ ಸ್ಟಾರ್‍ ನಟ ರಣವೀರ್‍ ಹಾಗೂ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಜೋಡಿಯ ಮದುವೆ ಇತ್ತೀಚಿಗಷ್ಟೆ ನಡೆಯಿತು. ಮದುವೆಯಾದ ಬಳಿಕವೂ ಸಹ ದೀಪಿಕಾ ಸಿನೆಮಾಗಳ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಬಿಗ್ ಬಜೆಟ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಆಸ್ಪತ್ರೆ ಪಾಲಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆ ಸಹ ಹೈದರಾಬಾದ್ ನಲ್ಲಿ ದೀಪಿಕಾ ಪಡುಕೋಣೆ ಪ್ರಾಜೆಕ್ಟ್ ಕೆ ಸಿನೆಮಾದ ಶೂಟಿಂಗ್ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಸುದ್ದಿ ಸಹ ಹರಿದಾಡಿತ್ತು. ಅಂದೂ ಸಹ ಈ ವಿಚಾರದ ಬಗ್ಗೆ ಯಾರೂ ಸ್ಪಷ್ಟತೆ ಕೊಟ್ಟಿರಲಿಲ್ಲ. ಇದೀಗ ದೀಪಿಕಾ ಆಸ್ಪತ್ರೆಗೆ ದಾಖಲಾದ ಕುರಿತು ಸಹ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇನ್ನೂ ದೀಪಿಕಾ ಹಾಗೂ ರಣವೀರ್‍ ಮುಂಬೈನಲ್ಲಿ ಸೆಟೆಲ್ ಆಗಿದ್ದು, ಇಬ್ಬರೂ ಸಹ ಸಿನಿರಂಗದಲ್ಲಿ ಸ್ಟಾರ್‍ ನಟ-ನಟಿಯರಾಗಿ ಸಕ್ಸಸ್ ಪುಲ್ ಜರ್ನಿ ಸಾಗಿಸುತ್ತಿದ್ದಾರೆ. ಇಬ್ಬರೂ ಸಹ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಕೆಲವೊಂದು ಜಾಹಿರಾತುಗಳಲ್ಲೂ ಸಹ ಈ ಜೋಡಿ ನಟಿಸುತ್ತಿದ್ದು, ಒಳ್ಳೆಯ ಆಸ್ತಿಯನ್ನು ಸಹ ಮಾಡಿದ್ದಾರಂತೆ. ಇನ್ನೂ ಮುಂಬೈನಲ್ಲಿ ಈ ಜೋಡಿಗೆ ಹಲವು ಮನೆಗಳೂ ಸಹ ಇದೆಯಂತೆ. ಮೂಲಗಳ ಪ್ರಕಾರ ಈ ಜೋಡಿ ಇತ್ತೀಚಿಗಷ್ಟೆ ಬರೊಬ್ಬರಿ 119 ಕೋಟಿ ಕೊಟ್ಟು ಸಮುದ್ರದ ಬಳಿಯಲ್ಲೇ ದೊಡ್ಡ ಐಶಾರಾಮಿ ಮನೆಯನ್ನು ಸಹ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಇದೀಗ ದೀಪಿಕಾ ಆರೋಗ್ಯದ ಕುರಿತಂತೆ ಆಕೆಯ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಕೆಲವೊಂದು ಮಾಹಿತಿ ಪ್ರಕಾರ ದೀಪಿಕಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆಯಂತೆ. ಇನ್ನೂ ದೀಪಿಕಾ ಆರೋಗ್ಯದ ಕುರಿತಂತೆ ದೀಪಿಕಾ ಅವರಿಂದ ಅಧಿಕೃತ ಸ್ಪಷ್ಟತೆ ಸಹ ಸಿಗಲಿ ಎಂದು ಅಭಿಮಾನಿಗಳ ಆಶಯವಾಗಿದೆ. ಇನ್ನೂ ದೀಪಿಕಾ ಶಾರುಖ್ ಖಾನ್ ಅಭಿನಯದ ಪಠಾನ್ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಬಿಗ್ ಬಜೆಟ್ ಸಿನೆಮಾ ಪ್ರಾಜೆಕ್ಟ್ ಕೆ ನಲ್ಲೂ ಸಹ ಆಕೆ ಅಭಿನಯಿಸಿದ್ದಾರೆ.  ಜೊತೆಗೆ ಮತಷ್ಟು ಸಿನೆಮಾಗಳು ಆಕೆಯ ಕೈಯಲ್ಲಿವೆ.

Previous articleಮದುವೆ ಪೊಟೋಗಳನ್ನು ಶೇರ್ ಮಾಡಿ ಶ್ರಿಯಾ, ಎಮೋಷನಲ್ ಪೊಟೋಸ್ ಶೇರ್ ಮಾಡಿದ್ದು ಯಾಕೆ ಗೊತ್ತಾ?
Next articleಅಜ್ಜಿಯ ಮರಣದಿಂದ ಬಿಕ್ಕಿ ಬಿಕ್ಕಿ ಅತ್ತ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ, ಸಾಂತ್ವನ ಹೇಳುವ ಮಹೇಶ್ ಬಾಬು ವಿಡಿಯೋ ವೈರಲ್…!