ಬಾಲಕೃಷ್ಣ ರವರ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ರೋಜಾ, ಪ್ಲೂಟು ಬಾಬು ಮುಂದು ಊದು, ಜಗನ್ ಅನ್ನ ಮುಂದು ಕಾದು ಎಂದ್ರು..!

ತೆಲುಗು ರಾಷ್ಟ್ರಗಳಲ್ಲಿ ರಾಜಕೀಯವಾಗಿ ಸಂಚಲನಾತ್ಮಕ ಹೇಳಿಕೆಗಳನ್ನು ನೀಡುತ್ತಾ ಫೈರ್‍ ಬ್ರಾಂಡ್ ಆಗಿ ಮುನ್ನುಗ್ಗುತ್ತಿರುವ ನಟಿ ಕಂ ರಾಜಕಾರಣಿ ರೋಜಾ ನಂದಮೂರಿ ಬಾಲಕೃಷ್ಣ ರವರ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.  ತೆಲುಗಿನ ಸಿನೆಮಾ ಒಂದರ ಡೈಲಾಗ್ ಅನ್ನು ಹೇಳುತ್ತಾ ಬಾಲಕೃಷ್ಣರವರಿಗೆ ಟಾಂಗ್ ನೀಡಿದ್ದಾರೆ. ಆಕೆ ಟ್ವೀಟ್ ಮೂಲಕ ಬಾಲಕೃಷ್ಣ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಆಕೆ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ರಾಜಕೀಯದಲ್ಲಿ ಫೈರ್‍ ಬ್ರಾಂಡ್ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಿ ರೋಜಾ ದೊಡ್ಡ ದೊಡ್ಡ ರಾಜಕಾರಣಿಗಳ ಬಗ್ಗೆ ಫೈರ್‍ ಆಗುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಸಿನೆಮಾ ಡೈಲಾಗ್ ಮೂಲಕವೇ ನಂದಮೂರಿ ಬಾಲಕೃಷ್ಣರವರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇತ್ತಿಚಿಗಷ್ಟೆ ಆಂಧ್ರಪ್ರದೇಶದ ಸರ್ಕಾರ ಸೀನಿಯರ್‍ ನಟ ಹಾಗೂ ಮಾಜಿ ಸಿಎಂ ಎನ್.ಟಿ.ಆರ್‍ ರವರ ಹೆಸರಿನಲ್ಲಿರುವ ಆರೋಗ್ಯ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಿ ಮತ್ತೊಬ್ಬ ಸಿಎಂ ದಿವಂಗತ ವೈ.ಎಸ್.ಆರ್‍ ರವರ ಹೆಸರನ್ನು ಇಟ್ಟಿದ್ದು, ಇದೀಗ ಈ ವಿಚಾರ ರಾಜಕೀಯದಲ್ಲಿ ವಿವಾದ ಸೃಷ್ಟಿ ಮಾಡಿದೆ. ಇನ್ನೂ ನಂದಮೂರಿ ಅಭಿಮಾನಿಗಳೂ ಸೇರಿದಂತೆ ಅನೇಕರು ಈ ನಿರ್ಣಯದ ಕುರಿತು ಆಕ್ರೋಷಗೊಂಡಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ಸಹ ಈ ಕುರಿತು ಆಕ್ರೋಷ ವ್ಯಕ್ತಪಡಿಸಿದ್ದರು.

ಇನ್ನೂ ಜೂನಿಯರ್‍ ಎನ್.ಟಿ.ಆರ್‍, ಕಲ್ಯಾಣ್ ರಾಮ್ ಹಾಗೂ ಬಾಲಕೃಷ್ಣ ಸಹ ಈ ನಿರ್ಣಯದ ಕುರಿಉತ ಅಭ್ಯಂತರವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಬಾಲಕೃಷ್ಣ ಮಾತ್ರ ಸಿನೆಮಾ ಸ್ಟೈಲ್ ನಲ್ಲೆ ಕೌಂಟರ್‍ ನೀಡಿದ್ದಾರೆ. ಎನ್.ಟಿ.ಆರ್‍ ಅಮದ್ರೆ ತೆಲುಗು ಜಾತಿಯ ಬೆನ್ನುಮೂಳೆ, ಎನ್.ಟಿ.ಆರ್‍ ಅಂದ್ರೆ ಹೆಸರಲ್ಲ, ಅದು ಒಂದು ಸಂಸ್ಕೃತಿ, ಒಂದು ನಾಗರೀಕತೆ ಎಂದು ಹೇಳಿದ್ದರು. ತಂದೆ ಸಿಎಂ ಆಗಿ ವಿಮಾನ ನಿಲ್ದಾಣದ ಹೆಸರು ಬದಲಿಸಿದರು, ಮಗ ಸಿಎಂ ಆಗಿ ವಿಶ್ವವಿದ್ಯಾಲಯದ ಹೆಸರು ಬದಲಿಸುತ್ತಿದ್ದಾರೆ. ನಿಮ್ಮನ್ನು ಬದಲಿಸಲು ಜನರು ಸಿದ್ದವಾಗಿದ್ದಾರೆ, ಜೊತೆಗೆ ಪಂಚಭೂತಗಳೂ ಸಹ ಇದೆ ಎಚ್ಚರಿಕೆ ಎಂದು ವಿಶ್ವಾಸ ಇಲ್ಲದ ನಾಯಿಗಳು ಎಂದು ಬಿರುಗಾಳಿಯಂತೆ ಗುಡುಗಿದ್ದರು.

ಇನ್ನೂ ಇದಕ್ಕೆ ನಟಿ ಹಾಗೂ ಮಂತ್ರಿ ರೋಜಾ ಸಹ ಸೋಷಿಯಲ್ ಮಿಡಿಯಾ ಮೂಲಕ ಕೌಂಟರ್‍ ನೀಡಿದ್ದಾರೆ. ಟ್ವೀಟ್ ಮೂಲಕ ರೋಜಾ ಟಾಂಗ್ ನೀಡಿದ್ದು, ಬಾಲಯ್ಯ ಪ್ಲೂಟು ಬಾಬು ಮುಂದು ಊದು, ಜಗನ್ ಅನ್ನ ಮುಂದು ಕಾದು, ಅಕ್ಕಡ ಉಂದಿ ರೀಲ್ ಸಿಂಹಂ ಜಾದು, ಜಗನ್ ಅನೇ ರಿಯಲ್ ಸಿಂಹಂ, ತೆಡಾ ವಸ್ತೆ ದಬಿಡಿ ದಿಬಿಡೆ ಎಂದಿದ್ದಾರೆ. ಇನ್ನೂ ರೋಜಾ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ ವೈ.ಎಸ್.ಆರ್‍ ಕಾಂಗ್ರೇಸ್ ಪಾರ್ಟಿಯ ಅನೇಕರು ಸಹ ಈ ಕುರಿತು ಮಾತನಾಡಿದ್ದಾರೆ. ಆದರೆ ರೋಜಾ ಟ್ವೀಟ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್ ಚಲ್ ಸೃಷ್ಟಿ ಮಾಡಿದೆ.

Previous articleಉರ್ಫಿಯ ಹೊಸ ಅವತಾರಕ್ಕೆ ಬೆಸ್ತು ಬಿದ್ದ ನೆಟ್ಟಿಗರು, ಆ ಭಾಗಗಳನ್ನು ಮಾತ್ರ ಕವರ್ ಮಾಡಿಕೊಂಡು ಪೋಸ್…!
Next articleಸುಡಿಗಾಲಿ ಸುಧೀರ್ ಗೆ ಆರೋಗ್ಯ ಸಮಸ್ಯೆಯಂತೆ, ಆತನ ಆರೋಗ್ಯ ಸಮಸ್ಯೆಯೇನು? ವೈರಲ್ ಆದ ಸುದ್ದಿ…!