ನಿರ್ಮಾಪಕರ ವಿರುದ್ದ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಅರ್ಚನಾ, ಆಕೆ ಹೇಳಿದ್ದಾದರೂ ಏನು?

ಟಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿ ಅರ್ಚನಾ. ನೇನು ಎಂಬ ತೆಲುಗು ಸಿನೆಮಾದ ಮೂಲಕ ಒಳ್ಳೆಯ ಪಾಪ್ಯುಲಾರಿಟಿ ದಕ್ಕಿಸಿಕೊಂಡರು. ಇದೀಗ ಸಿನಿರಂಗದಲ್ಲಿ ನಟಿಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಗಟ್ಟಿಯಾಗಿಯೇ ಮಾತನಾಡಿದ್ದಾರೆ.  ಜೊತೆಗೆ ಈ ವಿಚಾರವನ್ನು ತುಂಬಾ ಆಲೋಚನೆ ಮಾಡುವ ಅವಶ್ಯಕತೆ ಸಹ ತುಂಬಾ ಇದೆ ಎಂದು ಹೇಳಿದ್ದಾರೆ. ಅದರಲ್ಲೂ ಮದುವೆಯಾದ ಬಳಿಕ ನಟಿಯರ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದಿದ್ದಾರೆ. ಜೊತೆಗೆ ನಿರ್ಮಾಪಕರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಸಹ ಮಾಡಿದ್ದಾರೆ.

ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ನಟಿ ಅರ್ಚನಾ ಮದುವೆಯಾದರು. ಮದುವೆಯಾದ ಬಳಿಕ ಕುಟುಂಬದೊಂದಿಗೆ ಬ್ಯುಸಿಯಾದರು. ಇದೀಗ ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ದವಾಗುತ್ತಿದ್ದಾರೆ. ಆದರೆ ಇತ್ತೀಚಿಗೆ ಸಿನಿರಂಗದಲ್ಲಿ ನಡೆಯುತ್ತಿರುವ ಪುರುಷರ ಡಾಮಿನೇಷನ್ ಬಗ್ಗೆ ಆಕೆ ಮಾತನಾಡಿದ್ದಾರೆ. ಸಿನಿರಂಗದಲ್ಲಿ ನಡೆಯುತ್ತಿರುವ ಪುರುಷರ ಡಾಮಿನೇಷನ್ ಬಗ್ಗೆ ಕಾರವಾಗಿ ಮಾತನಾಡಿದ್ದಾರೆ. ಬೇರೆ ಸಿನಿರಂಗದಲ್ಲಿ ನಟ ಹಾಗೂ ನಟಿಯರಿಬ್ಬರಿಗೂ ಸಮಾನವಾದ ಗೌರವ ಇರುತ್ತದೆ. ಆದರೆ ಟಾಲಿವುಡ್ ನಲ್ಲಿ ಈ ರೀತಿಯಿಲ್ಲ. ಇಲ್ಲಿ ಪುರುಷರ ಡಾಮಿನೇಷನ್ ತುಂಬಾನೆ ಇರು‌ತ್ತದೆ ಎಂದಿದ್ದಾರೆ.

ಅಷ್ಟೇಅಲ್ಲದೇ ಟಾಲಿವುಡ್ ನಲ್ಲಿ ಮದುವೆಯಾದ ಬಳಿಕ ನಟಿಸಲು ಬಂದರೇ ಅನೇಕ ಅಡ್ಡಿಗಳು ಎದುರಾಗುತ್ತವೆ. ಜೊತೆಗೆ ನಿರ್ಮಾಪಕರೂ ಸಹ ಮದುವೆಯಾಗಿದೆ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಿ ಎನ್ನುತ್ತಾರೆ. ಆದರೆ ನಟರಿಗೆ ಮದುವೆಯಾಗಿ, ಎರಡು ಮೂರು ಮಕ್ಕಳಿದ್ದರೂ ಸಹ ಅವರಿಗೆ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಿ ಎಂದು ಹೇಳಬಲ್ಲಿರಾ ಎಂದು ನಿರ್ಮಾಪಕರಿಗೆ ಕಾರವಾದ ಪ್ರಶ್ನೆಯನ್ನು ಸಹ ಹಾಕಿದ್ದಾರೆ. ಟಾಲಿವುಡ್ ನಲ್ಲಿ ಇಷ್ಟೊಂದು ಮಟ್ಟಿಗೆ ತಾರತಮ್ಯ ಯಾಕೆ ಮಾಡುತ್ತಿದ್ದಾರೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ ಎಂದು ನೋವು ತೋಡಿಕೊಂಡ ಅವರು, ಮುಂದಿನ ದಿನಗಳಲ್ಲಾದರೂ ಈ ತಾರತಮ್ಯ ನಮ್ಮ ಟಾಲಿವುಡ್ ಸಿನಿರಂಗದಿಂದ ತೊಲಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ನಟಿ ಅರ್ಚನಾ ಕೊಂಚಂ ಟಚ್ ಲೋ ಉಂಟೆ ಚೆಬುತಾನು, ಸೂರ್ಯ, ನುವ್ವೊಸ್ತಾನಂಟೆ ನೆನು ಒಂದಂಟಾನ, ಶ್ರೀರಾಮದಾಸು, ಪೌರ್ಣಮಿ, ಯಮದೊಂಗ, ಖಲೆಜಾ, ಬಲುಪು ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ತುಂಬಾ ಕ್ರೇಜ್ ದಕ್ಕಿಸಿಕೊಂಡ ಈಕೆ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ತೆಲುಗು ಸಿನೆಮಾಗಳ ಜೊತೆಗೆ ತಮಿಳು, ಕನ್ನಡ, ಮಲಯಾಳಂ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ವಿಫಲರಾದರು. ಇದೀಗ ಆಕೆ ತೆಲುಗು ಸಿನಿರಂಗದ ಬಗ್ಗೆ ಮಾತನಾಡಿರುವುದು ಎಲ್ಲಾ ಕಡೆ ವೈರಲ್ ಆಗುತ್ತಿದೆ.

Previous articleತಾಯಿಯಾದ ಬಳಿಕ ಹಾಟೆಸ್ಟ್ ಪೊಟೋಸ್ ಹಂಚಿಕೊಂಡ ಬ್ಯೂಟಿ ಪ್ರಣಿತಾ, ಕ್ಲೀವೇಜ್ ದರ್ಶನದೊಂದಿಗೆ ಕಿಲ್ಲಿಂಗ್ ಪೋಸ್ ಕೊಟ್ಟ ನಟಿ.!
Next articleಬೇಬಿ ಬಂಪ್ ನಲ್ಲೂ ವೈರಲ್ ಆಗುವಂತಹ ಪೊಟೋಸ್ ಹಂಚಿಕೊಂಡ ಅಲಿಯಾ ಭಟ್..!