ಆಚಾರ್ಯ ಸಿನೆಮಾದ ಮತ್ತೊಂದು ಸರ್ಪೈಸ್, ಸ್ಪೇಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ ಶೆಟ್ಟಿ!

ಟಾಲಿವುಡ್ ನಲ್ಲಿ ಬಹುನಿರೀಕ್ಷೆ ಮೂಡಿಸಿರುವ ಸಿನೆಮಾ ಆಚಾರ್ಯ. ಚಿತ್ರದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಹಾಗೂ ಅವರ ಮಗ ರಾಮ್ ಚರಣ್ ತೇಜ್ ನಟಿಸುತ್ತಿರುವ ಸಿನೆಮಾ ಇದಾಗಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಇದೀಗ ಈ ಸಿನೆಮಾದಲ್ಲಿ ಮತ್ತೊಂದು ಸರ್ಪೈಸ್ ಬಂದಿದ್ದು, ಸಿನೆಮಾದಲ್ಲಿ ಸ್ಪೇಷಲ್ ರೋಲ್ ನಲ್ಲಿ ನಟಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ.

ಇನ್ನೂ ಈಗಾಗಲೇ ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್ ರವರು ಕಾಣಿಸಿಕೊಳ್ಳಬೇಕಿದ್ದು, ಕೆಲವೊಂದು ಕಾರಣಗಳಿಂದ ನಿರ್ದೇಶಕ ಕೊರಟಾಲ ಶಿವ ಸಿನೆಮಾದಿಂದ ಕಾಜಲ್ ಪಾತ್ರವನ್ನು ತೆಗೆದುಹಾಕಿರುವುದಾಗಿಯೂ ಸಹ ತಿಳಿಸಿದ್ದರು. ಇದೀಗ ಸಿನೆಮಾದಲ್ಲಿ ಒಂದು ದೃಶ್ಯದಲ್ಲಿ ಸ್ಟಾರ್‍ ನಟಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಸಿನೆಮಾದಲ್ಲಿ ಸ್ವಲ್ಪ ಗ್ಲಾಮರ್‍ ಟಚ್ ನೀಡುವ ಸಲುವಾಗಿ ಚಿತ್ರತಂಡ ಅತಿಥಿ ಪಾತ್ರವೊಂದರಲ್ಲಿ ಅನುಷ್ಕಾ ಶೆಟ್ಟಿಯವರನ್ನು ಕರೆತಂದಿದ್ದಾರೆ ಎನ್ನಲಾಗುತ್ತಿದೆ. ಸಿನೆಮಾರಂಗದಲ್ಲಿ ಕೇಳಿಬಂದ ಗುಸುಗುಸು ಮಾತುಗಳಂತೆ ಅನುಷ್ಕಾ ಒಂದು ಸಾಂಗ್ ನಲ್ಲಿ ಅಥವಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇನ್ನೂ ಈ ಸುದ್ದಿ ನಿಜವಾದರೇ ಅನುಷ್ಕಾ ಫ್ಯಾನ್ಸ್ ಫುಲ್ ಖುಷ್ ಆಗಲಿದ್ದಾರೆ. ಅನುಷ್ಕಾ ತೆರೆ ಮೇಲೆ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂದು ಅನುಷ್ಕಾ ಫ್ಯಾನ್ಸ್ ಕಾದುಕುಳಿತಿದ್ದಾರೆ. ಸುಮಾರು ವರ್ಷಗಳಿಂದ ಅನುಷ್ಕಾ ಸಿನಿರಂಗದಿಂದ ದೂರವುಳಿದಿದ್ದು, ಇದೀಗ ಈ ವಿಚಾರ ಕೇಳಿದ ಫ್ಯಾನ್ಸ್ ತಮ್ಮ ನಟಿಯನ್ನು ತೆರೆಮೇಲೆ ಕಾಣಲು ಉತ್ಸುಕರಾಗಿದ್ದಾರೆ. ಆದರೆ ಚಿತ್ರತಂಡ ಮಾತ್ರ ಈ ವಿಚಾರವನ್ನು ಗುಟ್ಟಾಗೇ ಇಟ್ಟಿದೆ. ಈ ಎಲ್ಲದಕ್ಕೂ ಸಿನೆಮಾ ಬಿಡುಗಡೆಯಾದ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ.

Previous articleನಿರ್ದೇಶಕ ಕ್ರಿಷ್ ರಿಲೀಸ್ ಮಾಡಿದ ರಣಸ್ಥಲಿ ಫಸ್ಟ್ ಲುಕ್ ಪೋಸ್ಟರ್, ರಗಡ್ ಲುಕ್ ಪೋಸ್ಟರ್‌ಗೆ ಭರ್ಜರಿ ರೆಸ್ಪಾನ್ಸ್
Next articleನಟಿ ಸಮಂತಾ ಪಡೆದ ಮೊದಲ ಸಂಭಾವನೆ ಬಗ್ಗೆ ಕೇಳಿದರೇ ನೀವು ಷಾಕ್ ಆಗ್ತೀರಾ!