ಭಕ್ತಿಯಿಂದ ಕಾಂತಾರಾ ಭೂತಕೋಲ ವೀಕ್ಷಣೆ ಮಾಡಿದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ, ವೈರಲ್ ಆದ ವಿಡಿಯೋ…..!

ಸೌತ್ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಹೆಚ್ಚು ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಕರಾವಳಿ ಮೂಲದ ನಟಿ ಅನುಷ್ಕಾ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ಸೌತ್ ಸಿನಿರಂಗ ಮಾತ್ರವಲ್ಲದೇ ಇಡೀ ದೇಶ ವಿದೇಶದಲ್ಲೂ ಅನುಷ್ಕಾ ಅಭಿಮಾನಿಗಳಿದ್ದಾರೆ. ಅದರಲ್ಲೂ ನಟಿ ಅನುಷ್ಕಾ ಬಾಹುಬಲಿ ಸಿನೆಮಾದ ಬಳಿಕ ಮತಷ್ಟು ಕ್ರೇಜ್ ಪಡೆದುಕೊಂಡರು. ದೊಡ್ಡ ಮಟ್ಟದ ಯಶಸ್ಸು ಸಿಕ್ಕರೂ ಸಹ ಅನುಷ್ಕಾ ಮಾತ್ರ ತಮ್ಮ ಸಂಸ್ಕೃತಿಯನ್ನು ಮರೆತಿಲ್ಲ. ಕನ್ನಡ ಎಂದರೂ, ಕರುನಾಡಿನ ಆಚಾರ ಎಂದರೂ ಅವರಿಗೆ ತುಂಬಾ ಗೌರವ. ಈ ಹಾದಿಯಲ್ಲೇ ಆಕೆ ಇದೀಗ ತಮ್ಮ ಕುಟುಂಬದೊಂದಿಗೆ ಭೂತಕೋಲದಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ತುಳುನಾಡು ಮೂಲದ ಅನುಷ್ಕಾ ಶೆಟ್ಟಿ ಪ್ರತಿ ವರ್ಷ ತಾವು ಹಾಗೂ ಕುಟುಂಬದೊಂದಿಗೆ ತುಳುನಾಡಿನಲ್ಲಿ ಅತ್ಯಂತ ಪವಿತ್ರವಾಗಿ ಆಚರಿಸುವಂತಹ ಭೂತಕೋಲದಲ್ಲಿ ಭಾಗಿಯಾಗುತ್ತಿರುತ್ತಾರೆ. ಈ ಬಾರಿಯೂ ಸಹ ಅನುಷ್ಕಾ ಸಹ ಭೂತಕೋಲದಲ್ಲಿ ಭಾಗಿಯಾಗಿದ್ದಾರೆ. ಅನುಷ್ಕಾ ಶೆಟ್ಟಿ ಭಕ್ತಿಪರವಶದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ. ದೊಡ್ಡ ಮಟ್ಟದ ಫೇಂ ಗಳಿಸಿಕೊಂಡರೂ ಸಹ ಅನುಷ್ಕಾ ಭಕ್ತಿಯಿಂದ ಭೂತಕೋಲ ವೀಕ್ಷಣೆ ಮಾಡಿದ್ದು ಎಲ್ಲರನ್ನೂ ಮೆಚ್ಚಿಸಿದೆ. ಕರಾವಳಿಯ ಜನತೆಗೆ ದೈವಾರಾದಾನೆ, ಭೂತಕೋಲ ಎಂದರೇ ತುಂಬಾನೆ ಶ್ರದ್ದೆ ಹಾಗೂ ಭಕ್ತಿ. ಅದರಂತೆ ಅನುಷ್ಕಾ ಶೆಟ್ಟಿ ಸಹ ಅದೇ ರೀತಿಯ ಭಕ್ತಿಯನ್ನು ಹೊಂದಿದ್ದು, ಭೂತಕೋಲದಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಭೂತಕೋಲದಲ್ಲಿ ಭಾಗಿಯಾಗಿದ್ದ ಅನುಷ್ಕಾ ಶೆಟ್ಟಿ ದೈವ ನರ್ತನವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಸದ್ಯ ಅನುಷ್ಕಾ ಭೂತಕೋಲ ವೀಕ್ಷಣೆ ಮಾಡಿದ ವಿಡಿಯೋ ಒಂದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳಿಂದ ಶುಭಾಷಯಗಳೂ ಸಹ ಹರಿದುಬರುತ್ತಿವೆ.

ಇನ್ನೂ ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನೆಮಾದ ಬಳಿಕ ದೊಡ್ಡ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಆಕೆ ಕೊನೆಯದಾಗಿ ನಿಶ್ಯಬ್ದಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಈ ಸಿನೆಮಾದ ಬಳಿಕ ತುಂಬಾನೆ ಗ್ಯಾಪ್ ತೆಗೆದುಕೊಂಡಿದ್ದರು. ಇದೀಗ ಅನುಷ್ಕಾ ಮತ್ತೊಂದು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ನವೀನ್ ಪೊಲಿಶೆಟ್ಟಿ ನಟಿಸಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಅಂಗವಾಗಿ ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ರಿಲೀಸ್ ಆಗಿತ್ತು. ಈ ಪೋಸ್ಟರ್‍ ನಲ್ಲಿ ಅನುಷ್ಕಾ ಚೆಫ್ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸುಮಾರು ದಿನಗಳಿಂದ ಅನುಷ್ಕಾ ರವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದು, ಶೀಘ್ರದಲ್ಲೇ ಅವರ ಬಯಕೆ ಈಡೇರಲಿದೆ.

Previous articleಅಂತೂ ಇಂತೂ ಮದುವೆ ಬಗ್ಗೆ ಬಾಯ್ಬಿಟ್ಟ ಪ್ರಭಾಸ್, ಆತನ ಉತ್ತರಕ್ಕೆ ಶಾಕ್ ಆದ ಫ್ಯಾನ್ಸ್….!
Next articleಶೈನಿಂಗ್ ಡ್ರೆಸ್ ನಲ್ಲಿ ಶೈನಿಂಗ್ ಥೈಸ್ ಶೋ ಮಾಡಿದ ಈಷಾ ರೆಬ್ಬಾ, ಇಷ್ಟು ದಿನ ಭದ್ರಪಡಿಸಿದ ಸೌಂದರ್ಯ ಹೊರಹಾಕಿದ ಬ್ಯೂಟಿ…!