Uncategorized

ಸಂಕ್ರಾಂತಿ ಶುಭಾಷಯಗಳನ್ನು ಕನ್ನಡದಲ್ಲಿ ತಿಳಿಸಿ ಮನಗೆದ್ದ ನಟಿ

ಬೆಂಗಳೂರು: ಮೂಲತಃ ಕರ್ನಾಟಕದ ಬೆಡಗಿಯಾದರೂ ತಮಿಳು ಹಾಗೂ ತೆಲುಗು ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿರುವ ನಟಿ ಅನುಷ್ಕಾ ಶೆಟ್ಟಿ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕನ್ನಡ ಭಾಷೆಯಲ್ಲಿ ಕೋರುವ ಮೂಲಕ ಕನ್ನಡ ಪ್ರೇಮವನ್ನು ತೋರಿದ್ದಾರೆ.

ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ನಟಿ ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರಾದರೂ ತೆಲುಗು ಹಾಗೂ ತಮಿಳು ಸಿನಿರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಕನ್ನಡದಲ್ಲಿ ಒಂದು ಚಿತ್ರದಲ್ಲೂ ಸಹ ನಟಿಸಿದೇ ಇದ್ದರೂ ಕೂಡ ನಟಿ ಅನುಷ್ಕಾ ಕನ್ನಡ ಭಾಷೆಯನ್ನು ಮಾತ್ರ ಮರೆತಿಲ್ಲ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಜೊತೆಗೆ ತುಳು ಭಾಷೆಯನ್ನು ಸಹ ಸರಾಗವಾಗಿ ಮಾತನಾಡಬಲ್ಲರು. ಇನ್ನೂ ಅನುಷ್ಕಾ ರವರ ತಂದೆ-ತಾಯಿ ಕರ್ನಾಟಕದಲ್ಲೇ ಇದ್ದು, ಅನೇಕ ಬಾರಿ ಹುಟ್ಟೂರಿಗೆ ಭೇಟಿ ನೀಡುತ್ತಿರುತ್ತಾರೆ ಅನುಷ್ಕಾ.

ತಮ್ಮ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದ ಅನುಷ್ಕಾ ಶೆಟ್ಟಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕನ್ನಡ ಭಾಷೆಯಲ್ಲಿ ಕೋರಿದ್ದಾರೆ. ತಮ್ಮ ಸುಂದರವಾದ ಪೊಟೋವೊಂದನ್ನು ಶೇರ್ ಮಾಡಿ ’ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು ಎಂದು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಹ ಬರೆದು ಶೇರ್ ಮಾಡಿದ್ದಾರೆ.

ಅಂದಹಾಗೆ ನಟಿ ಅನುಷ್ಕಾ ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿಸಿಎ ಮಾಡಿದ್ದರು, ಜೊತೆಗೆ ಬೆಂಗಳೂರಿನಲ್ಲಿಯೇ ಯೋಗ ಶಿಕ್ಷಕಿಯಾಗಿಯೂ ಸಹ ಕೆಲಸ ಮಾಡಿದ್ದಾರೆ. ಪ್ರಸ್ತುತ ನಟಿ ಅನುಷ್ಕಾ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅಭಿನಯದ ಸರ್ಕಾರುವಾರಿ ಪಾಟ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Trending

To Top