ಅನುಷ್ಕಾ ಶರ್ಮಾರವರ ಆ ನಿರ್ಣಯದಿಂದ ಶಾಕ್ ಆದ ಅಭಿಮಾನಿಗಳು……

ಬಾಲಿವುಡ್ ಸ್ಟಾರ್‍ ಹಿರೋಯಿನ್ ಅನುಷ್ಕಾ ಶರ್ಮಾ ಅನೇಕ ಸಿನೆಮಾಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅನುಷ್ಕಾ ತೆಗೆದುಕೊಂಡ ನಿರ್ಣಯ ಒಂದರಿಂದ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ ಜೊತೆಗೆ ಅವರ ನಿರ್ಣಯದಿಂದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಅಷ್ಟಕ್ಕೂ ಅನುಷ್ಕಾ ತೆಗೆದುಕೊಂಡ ಆ ನಿರ್ಣಯ ಏನು ಗೊತ್ತಾ.

ನಟಿ ಅನುಷ್ಕಾ ಕೊಹ್ಲಿ ಮದುವೆಯಾದ ಬಳಿಕ ಸಿನೆಮಾಗಳಿಂದ ತುಸು ಅಂತರ ಕಾಯ್ದುಕೊಂಡು ಬರು‌ತ್ತಿದ್ದರು. ಇದೀಗ ಕುಟುಂಬ ಜವಾಬ್ದಾರಿ ನಿಮಿತ್ತ ಸಿನೆಮಾ ಕೆಲಸಗಳಿಂದ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಅನುಷ್ಕಾ ನಿರ್ಮಾಣ ಸಂಸ್ಥೆಯಿಂದಲೂ ಸಹ ದೂರವಾಗುವುದಾಗಿ ಪ್ರಕಟನೆ ಮಾಡಿದ್ದರು. ಈ ಹಿಂದೆ ಅನುಷ್ಕಾರವರ ನಿರ್ಮಾಣ ಸಂಸ್ಥೆಯಿಂದ ಅನೇಕ ಸಿನೆಮಾಗಳ ಬಂದಿದ್ದವು. ಆದರೆ ನಿರ್ಮಾಣ ಸಂಸ್ಥೆಯಿಂದ ದೂರ ಆಗುತ್ತಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಇದೀಗ ಅನುಷ್ಕಾರವರ ಮತ್ತೊಂದು ನಿರ್ಧಾರ ಸಹ ಅಭಿಮಾನಿಗಳು ನಿರಾಸೆಯಾಗಿದ್ದಾರೆ.

ಇತ್ತೀಚಿಗೆ ನಟಿ ಅನುಷ್ಕಾ ವೈವಾಹಿಕ ಜೀವನ ಕುಟುಂಬ ಜೀವನವನ್ನು ಅನುಭವಿಸಲು ಖಚಿತವಾಗಿ ಈಗಿನ ಜಗತ್ತಿನಲ್ಲಿ ಸಾಧ್ಯವಿಲ್ಲ. ಸಿನೆಮಾ ಇಂಡಸ್ಟ್ರಿ ಎಂಬುದು ಪೈಪೋಟಿಯಿರುವಂತಹ ರಂಗವಾಗಿದೆ. ಇಂತಹ ಜಗತ್ತಿನಲ್ಲಿ ಮುನ್ನುಗ್ಗಲು ಕುಟುಂಬ ಜೀವನಕ್ಕೆ ಹೆಚ್ಚಿನ ಸಮಯ ನೀಡಲು ವಿಫಲವಾಗುತ್ತಿದ್ದೇವೆ. ಆದ್ದರಿಂದ ಈ ಪೈಪೋಟಿ ಜಗತ್ತಿನಿಂದ ದೂರ ಆಗಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಈ ನಿರ್ಣಯಕ್ಕೆ ಬರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.  ಇನ್ನೂ ಅನುಷ್ಕಾರವರ ಈ ನಿರ್ಣಯದಿಂದ ಅಭಿಮಾನಿಗಳು ಶಾಕ್ ಆಗಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ನಿರ್ಣಯದಿಂದ ಹಿಂದೆ ಸರಿಯುವಂತೆಯೂ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮಿಡಿಯಾ ಮೂಲಕ ಅನುಷ್ಕಾ ಅಭಿಮಾನಿಗಳು ವಿಮರ್ಶೆಗಳನ್ನು ಸಹ ಮಾಡುತ್ತಿದ್ದಾರೆ. ಮದುವೆ ಆದ ಬಳಿಕ ಅನೇಕ ನಟಿಯರು ಇಂಡಸ್ಟ್ರಿ ಬಿಟ್ಟು ಹೋಗಿಲ್ಲ. ಜೊತೆಗೆ ಮದುವೆ ಆದ ಬಳಿಕವೂ ಸಹ ಅನೇಕ ನಟಿಯರು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದಾರೆ. ಸಿನಿರಂಗದಲ್ಲಿ ಇದ್ದ ಮಾತ್ರಕ್ಕೆ ಕುಟುಂಬದಿಂದ ದೂರ ಇದ್ದಂತೆ ಅಲ್ಲ. ಸರಿಯಾಗ ಪ್ಲಾನ್ ಮೂಲಕ  ನಡೆದುಕೊಂಡರೇ ಎರಡನ್ನೂ ಸರಿದೂಗಿಸಬಹುದು ಎಂದು ಕೆಲವರು ವಿಮರ್ಶೆ ಮಾಡುತ್ತಿದ್ದರೇ, ಮತ್ತೆ ಕೆಲವರು ಅನುಷ್ಕಾರವರ ಈ ನಿರ್ಣಯದ ಹಿಂದೆ ಯಾರಾದಾದರೂ ಕೈವಾಡ ಇದೆಯೇ ಎಂಬ ಅನುಮಾನವನ್ನ ವ್ಯಕ್ತಪಡಿಸಿದ್ದಾರೆ. ಅದೇನೆ ಇರಲಿ ಅನುಷ್ಕಾ ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ ನಟಿಯನ್ನು ಸಿನೆಮಾಗಳಲ್ಲಿ ಮುಂದುವರೆಯುವಂತೆ ಕೋರಿದ್ದಾರೆ.

Previous articleಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ
Next articleಸಂಜನಾ ಗಲ್ರಾನಿಗೆ ಡಬಲ್ ಖುಷಿ, ತಂಗಿಯ ಮದುವೆ ಒಂದು ಕಡೆ, ಮತ್ತೊಂದು ಕಡೆ ಗಂಡು ಮಗುವಿಗೆ ಜನ್ಮ…