Film News

ಸ್ಟಾರ್ ಕ್ರಿಕೆಟಿಗನನ್ನು ವರಿಸಲಿದ್ದಾರೆಯೇ ನಟಿ ಅನುಪಮಾ?

ಚೆನೈ: ದಕ್ಷಿಣ ಭಾರತದ ಬಹುಬೇಡಿಕೆ ನಟಿ ಅನುಪಮಾ ಪರಮೇಶ್ವರನ್ ಮದುವೆ ವಿಚಾರ ಮತ್ತೆ ಹರಿದಾಡುತ್ತಿದ್ದು, ಈ ಹಿಂದೆ ಬಂದ ಸುದ್ದಿಯಂತೆ ಶೀಘ್ರದಲ್ಲೇ ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬೂಮ್ರಾ ರವರನ್ನು ಮದುವೆ ಆಗಲಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೆ ಹೈದರಾಬಾದ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಮಾದ್ಯಮಗಳು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿದ ಅನುಪಮಾ ನನ್ನ ಮದುವೆ ವಿಚಾರ ನಿಮಗೇಕೆ? ಅದರ ಬಗ್ಗೆ ಕೇಳಬೇಡಿ. ನಾನಿನ್ನು ಚಿಕ್ಕವಳು, ನನಗೆ ಇನ್ನೂ ೨೫ ವರ್ಷ, ಈಗಾಗಲೇ ನಾನು ಮದುವೆ ಆಗುವುದಿಲ್ಲ. ಇನ್ನೂ ಸಮಯವಿದೆ ಎಂದು ಖಡಕ್ ಆಗಿ ಉತ್ತರ ನೀಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೂಮ್ರಾ ಹಾಗೂ ಅನುಪಮಾ ಮದುವೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಇದಕ್ಕೆಲ್ಲಾ ಮುಖ್ಯ ಕಾರಣ ಜಸ್ಪ್ರೀತ್ ಬೂಮ್ರ ಟ್ವಿಟಲ್ ಖಾತೆಯಲ್ಲಿ ಅನುಪಮಾ ರವರನ್ನು ಬಿಟ್ಟು ಬೇರೆ ಯಾವ ನಟಿಯನ್ನು ಫಾಲೊ ಮಾಡುತ್ತಿರಲಿಲ್ಲ. ಹಾಗೆಯೇ ಅನುಪಮಾ ಸಹ ಬೂಮ್ರಾ ರವರನ್ನು ಫಾಲೋ ಮಾಡುತ್ತಿದ್ದು, ಅನುಪಮಾ ಪೊಟೋ ಹಾಗೂ ವಿಡೀಯೋಗಳಿಗೆ ಲೈಕ್ ಹಾಗೂ ಕಾಮೆಂಟ್ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೆ ನೆಟ್ಟಿಗರು ಇವರಿಬ್ಬರ ನಡುವೆ ಲವ್ ಇದೆ ಎಂದು ವದಂತಿ ಶುರುವಾಗಿದ್ದು, ಮದುವೆಯವರೆಗೂ ಬಂದಿದೆ.

ಮತ್ತೊಂದು ವಿಚಾರವೆಂದರೇ ಬೂಮ್ರಾ ಭಾರತ-ಇಂಗ್ಲೇಂಡ್ ವಿರುದ್ದ ಟೆಸ್ಟ್ ಸರಣಿಯ ಫೈನಲ್ ಒಂದ್ಯಕ್ಕೂ ಮುನ್ನಾ ವೈಯುಕ್ತಿಕ ಕಾರಣಗಳನ್ನು ಕೊಟ್ಟು ರಜೆ ಪಡೆದಿದ್ದಾರೆ. ಕೆಲವೊಂದು ಮಾಹಿತಿ ಪ್ರಕಾರ ಬೂಮ್ರಾ ಮದುವೆಯಾಗುವ ಹಿನ್ನೆಲೆಯಲ್ಲಿ ರಜೆ ಪಡೆದಿದ್ದಾರೆ. ಬೂಮ್ರಾ ಮದುವೆ ಗೋವಾದಲ್ಲಿ ನಡೆಯಲಿದೆ ಎನ್ನಲಾಗುತ್ತಿದ್ದು, ಮದುವೆಯಾಗುವ ಹುಡುಗಿ ಯಾರೆಂಬುದು ಮಾತ್ರ ಬಹಿರಂಗವಾಗಿಲ್ಲ. ಅಷ್ಟೇ ಅಲ್ಲದೇ ಈ ಕುರಿತು ಅನುಪಮಾ ಸಹ ಸ್ಪಷ್ಟನೆ ನೀಡಿದ್ದು, ಬೂಮ್ರಾ ಯಾರೆಂದು ನನಗೆ ಗೊತ್ತೇ ಇಲ್ಲ. ಆತ ಕ್ರಿಕೆಟಿಕ ಎಂಬುದು ಮಾತ್ರ ಗೊತ್ತು. ಸೂಕ್ತ ಮಾಹಿತಿ ಇಲ್ಲದೇ ಈ ರೀತಿಯ ಮಾಹಿತಿ ಹರಡುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

Trending

To Top