Film News

ಮದುವೆ ಬಗ್ಗೆ ಏನು ಕೇಳಬೇಡಿ ಅಂದ ನಟಿ ಅನುಪಮಾ!

ಬೆಂಗಳೂರು: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಅನುಪಮಾ ಪರಮೇಶ್ವರ್ ರವರಿಗೆ ಮದುವೆ ಕುರಿತು ಪ್ರಶ್ನೆ ಬಂದಿದ್ದು, ಅದಕ್ಕೆ ಖಡಕ್ ಆಗಿ ಉತ್ತರ ನೀಡಿದ್ದಾರೆ ಅನುಪಮ.

ಇತ್ತೀಚಿಗೆ ಹೈದರಾಬಾದ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಮಾದ್ಯಮಗಳು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿದ ಅನುಪಮಾ ನನ್ನ ಮದುವೆ ವಿಚಾರ ನಿಮಗೇಕೆ? ಅದರ ಬಗ್ಗೆ ಕೇಳಬೇಡಿ. ನಾನಿನ್ನು ಚಿಕ್ಕವಳು, ನನಗೆ ಇನ್ನೂ 25 ವರ್ಷ, ಈಗಾಗಲೇ ನಾನು ಮದುವೆ ಆಗುವುದಿಲ್ಲ. ಇನ್ನೂ ಸಮಯವಿದೆ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

ದಕ್ಷಿಣ ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿರುವ ಅನುಪಮಾ, ಚಿತ್ರರಂಗಕ್ಕೆ ಕಾಲಿಟ್ಟು ೫ ವರ್ಷಗಳಾಗಿವೆ. ಕಡಿಮೆ ಸಮಯದಲ್ಲಿಯೇ ಅತ್ಯಧಿಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಅನುಪಮಾ. ಇತ್ತೀಚಿಗೆ ಅನುಪಮಾ ಕ್ರಿಕೆಟಿಗ ಬುಮ್ರಾ ರವರ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿ ಕೂಡ ಬಂದಿತ್ತು. ಆದರೆ ಇದೆಲ್ಲ ವಂದತಿ, ಬೂಮ್ರ ಓರ್ವ ಕ್ರಿಕೆಟಿಗ ಎಂದು ಮಾತ್ರ ಗೊತ್ತು, ಅವರ ಬಗ್ಗೆ ಬೇರೆ ವಿಚಾರವೇ ನನಗೆ ಗೊತ್ತಿಲ್ಲ ಎಂದು ಅನುಪಮಾ ಹೇಳಿದ್ದು, ಸರಿಯಾದ ಮಾಹಿತಿ ಇಲ್ಲದೇ ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬುತ್ತಿದ್ದಾರೆ ಎನ್ನಲಾಗುತ್ತಿದೆ.

ಮಲಯಾಳಂ ಭಾಷೆಯ ಪ್ರೇಮಂ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅನುಪಮ ಅ ಆ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಜೊತೆಗೆ ಧನುಷ್ ಅಭಿನಯದ ಕೋಡಿ ಚಿತ್ರದಲ್ಲೂ ನಟಿಸುವ ಮೂಲಕ ತಮಿಳು ಸಿನಿರಂಗಕ್ಕೆ ಹಾಗೂ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೂ ಕಾಲಿಟ್ಟರು.

Trending

To Top