ನನ್ನದು ಒನ್ ಸೈಡ್ ಲವ್ ಎಂದ ನಟಿ ಅನುಪಮಾ ಪರಮೇಶ್ವರನ್…!

ಮಾಲಿವುಡ್ ಖ್ಯಾತ ನಟಿ ಮೊದಲನೇ ಸಿನೆಮಾದ ಮೂಲಕವೇ ಸಕ್ಸಸ್ ಆದ ಅನುಪಮ ಪರಮೇಶ್ವರನ್ ತಾವು ಪ್ರೀತಿಯಲ್ಲಿರುವುದಾಗಿ ಅದು ಒನ್ ಸೈಡ್ ಲವ್ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ.  ನಾನು ಲವ್ ನಲ್ಲಿರುವುದು ನಿಜ ಆದರೆ ಅದು ಒನ್ ಸೈಡ್ ಲವ್ ಆಗಿದ್ದು ನನಗೆ ಸರಿಯಾದ ಕ್ಲಾರಿಟಿ ಇಲ್ಲ ಎಂದು ಹೇಳುವ ಮೂಲಕ ಎಲ್ಲರ ತಲೆಗೆ ಹುಳು ಬಿಟ್ಟಿದ್ದಾರೆ.

ಮಲಯಾಳಂ ಮೂಲದ ನಟಿಯಾದರೂ ಅನುಪಮಾ ಟಾಲಿವುಡ್ ನಲ್ಲಿ ಹೆಚ್ಚು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಅನೇಕ ಹಿಟ್ ಸಿನೆಮಾಗಳನ್ನು ನೀಡಿರುವ ಈಕೆ ಸೋಲು-ಗೆಲುವು ಎರಡಕ್ಕೂ ಸಂಬಂಧವಿಲ್ಲದೇ ಸಾಲು ಸಾಲು ಸಿನೆಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ದೊಡ್ಡ ಸ್ಟಾರ್‍ ನಟರೊಂದಿಗೆ ಅನೇಕ ಸಿನೆಮಾಗಳನ್ನು ಮಾಡುತ್ತಾ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಅನುಪಮಾ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಅದು ತಮ್ಮ ಪ್ರೀತಿಯ ವಿಚಾರವನ್ನು ಕೇಳಿ ಎಲ್ಲರೂ ದಂಗಾಗಿದ್ದಾರೆ. ಆಕೆ ಪ್ರೀತಿಯಲ್ಲಿರುವುದಾಗಿ ಅದರ ಬಗ್ಗೆ ನನಗೆ ಕ್ಲಾರಿಟಿ ಇಲ್ಲ ಎಂತಲೂ ಒನ್ ಸೈಡ್ ಲವ್ ಎಂತಲೂ ಹೇಳಿಕೆಗಳನ್ನು ನೀಡಿ ಎಲ್ಲರ ಮೆದುಳಿಗೆ ಹುಳು ಬಿಟ್ಟಿದ್ದಾರೆ.

ನಟಿ ಅನುಪಮಾ ರಿಲೇಷನ್ ಶಿಪ್ ವಿಚಾರವಾಗಿ ಮಾತನಾಡುತ್ತಾ, ನಾನು ಪ್ರೀತಿಯಲ್ಲಿದ್ದೇನೆ, ಆದರೆ ಈ ಬಗ್ಗೆ ನನಗೆ ಸರಿಯಾದ ಕ್ಲಾರಿಟಿ ಇಲ್ಲ. ಒಂದು ರೀತಿಯಲ್ಲಿ ಹೇಳಬೇಕಾದರೇ ನಂದು ಒಂದು ಮಾದರಿಯಲ್ಲಿ ಒನ್ ಸೈಡ್ ಲವ್ ಆಗಿದ್ದು, ಅವರು ಏನು ಅಂದುಕೊಳ್ಳುತ್ತಿದ್ದಾರೋ ನನಗೆ ತಿಳಿಯದು ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ವರ್ಯವಾಗುವಂತೆ ಮಾಡಿದ್ದಾರೆ. ಅನುಪಮಾ ರವರ ಈ ಶಾಕಿಂಗ್ ಹೇಳಿಕೆಗಳನ್ನು ಕೇಳಿ ಎಲ್ಲರೂ ಅನುಪಮಾ ಹೃದಯ ಕದ್ದ ಚೋರ ಯಾರು ಎಂಬುದರ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಸದ್ಯ ಈ ಸಂಬಂಧ ಅನುಪಮಾ ರವರೇ ಸರಿಯಾದ ಕ್ಲಾರಿಟಿ ನೀಡಬೇಕಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಅನುಪಮಾ ಲವರ್‍ ಯಾರು ಎಂಬುದರ ಬಗ್ಗೆ ಜೋರಾದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

ಇನ್ನೂ ನಟಿ ಅನುಪಮಾ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಸ್ಟಾರ್‍ ಗಿರಿಯನ್ನು ಸಂಪರ್ಕಿಸಿಕೊಂಡರು. ಪ್ರೇಮಂ ಸಿನೆಮಾ ಮೂಲಕ ದಕ್ಷಿಣ ಭಾರತದ ಸಿನಿರಂಗದಲ್ಲಿ ಖ್ಯಾತಿ ಗಳಿಸಿಕೊಂಡ ಈಕೆ ಟಾಲಿವುಡ್ ನಲ್ಲಿ ಸಾಲು ಸಾಲು ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಟಾಲಿವುಡ್ ನ ಶತಮಾನಂಭವತಿ, ಅಆ ಮೊದಲಾದ ಸಿನೆಮಾಗಳಿಂದ ಅನುಪಮಾ ಮತಷ್ಟು ಖ್ಯಾತಿ ಗಳಿಸಿಕೊಂಡರು. ಇತ್ತೀಚಿಗೆ ರೌಡಿ ಬಾಯ್ಸ್ ಎಂಬ ಸಿನೆಮಾ ಮೂಲಕವೂ ಸಹ ಹೆಚ್ಚು ಪಾಪ್ಯುಲರ್‍ ಆದರು. ಈ ಸಿನೆಮಾದಲ್ಲಿ ಅನುಪಮಾ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಅನೇಕ ರೊಮ್ಯಾಂಟಿಕ್ ದೃಶ್ಯಗಳನ್ನು ಕಾಣಿಸಿಕೊಂಡಿದ್ದು. ಈ ಹಿಂದೆ ಯಾವುದೇ ಸಿನೆಮಾದಲ್ಲೂ ನಟಿಸದ ಅನುಪಮಾ ರವರನ್ನು ಕಾಣಬಹುದಾಗಿದೆ. ಇನ್ನೂ ಅನುಪಮಾ ಕೈಯಲ್ಲಿ ಸಾಲು ಸಾಲು ಸಿನೆಮಾಗಳು ಇದ್ದು, ಬ್ಯುಸಿಯಾಗಿದ್ದಾರೆ.

Previous articleಅನುಷ್ಕಾಶೆಟ್ಟಿಯನ್ನು ತೆರೆ ಮೇಲೆ ಕಾಣಲು ಮತಷ್ಟು ದಿನ ಕಾಯಬೇಕಿದೆ…..
Next articleಸೋನಂ ಕಪೂರ್ ಬೇಬಿ ಬಂಪ್ ಸೆಲ್ಫಿ ಪೋಟೊಸ್ ವೈರಲ್….