Film News

ಚರ್ಚೆಗೆ ಕಾರಣವಾಯ್ತು ನಟಿ ಅನುಪಮ ಪರಮೇಶ್ವರನ್ ಪೊಟೋ!

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ಅನುಪಮ ಪರಮೇಶ್ವರನ್ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಪೊಟೋವೊಂದನ್ನು ಶೇರ್ ಮಾಡಿದ್ದು, ಈ ಪೊಟೋ ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ನಟಿ ಅನುಪಮ ಪರೇಶ್ವರನ್ ಪೊಟೋವೊಂದನ್ನು ಶೇರ್ ಮಾಡಿದ್ದಾರೆ. ಆ ಪೊಟೋದಲ್ಲಿ ನಟಿಯ ಕೈ ಬೆರಳಿಗೆ ಉಂಗುರ ಸಹ ಇದ್ದು, ಎಂಗೇಜ್ಡ್ ಎಂದು ಬರೆದುಕೊಂಡಿದ್ದಾರೆ. ಈ ಪೊಟೋ ಕಂಡ ಅಭಿಮಾನಿಗಳು ಅನುಪಮ ಪರಮೇಶ್ವರನ್ ರವರಿಗೆ ಮ್ಯಾರೆಜ್ ಫಿಕ್ಸ್ ಆಗಿದೆ ಎಂಬ ಚರ್ಚೆಗಳು ಪ್ರಾರಂಭವಾದವು. ಆದರೆ ಅನುಪಮ ಪಕ್ಕದಲ್ಲೇ ಪುಟಾಣಿ ಹುಡುಗಿಯೊಬ್ಬರಿದ್ದು, ಆ ಹುಡುಗಿಗೆ ಉಂಗುರ ತೊಡಿಸುವುದು ಸಹ ಕಂಡಿದ್ದು, ಅದನ್ನು ಗಮನಿಸಿದರೇ ಇಬ್ಬರೂ ರಿಂಗ್ ಆಟ ಆಡುತ್ತಿದ್ದಾರೆ ಎಂದು ಅನಿಸಿದರೂ ಕೂಡ ಎಂಗೇಜ್ಡ್ ಎಂದು ಪೊಟೋಗೆ ಕ್ಯಾಪ್ಷನ್ ಇಟ್ಟು ತಮ್ಮ ಅಭಿಮಾನಿಗಳಿಗೆ ಟೆನ್ಷನ್ ನೀಡಿದ್ದಂತೂ ನಿಜ.

ಇನ್ನೂ ನಟಿ ಅನುಪಮ ಓರ್ವ ಕ್ರಿಯೇಟರ್ ಜೊತೆಗೆ ಪ್ರೀತಿಯಲ್ಲಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ನಟಿ ಅನುಪಮ ಮಾತ್ರ ಇನ್ನೂ ನಾನು ಮದುವೆಯಾಗುವುದಿಲ್ಲ ಎಂದು ಕಡಾಖಂಡಿತವಾಗಿ ತಿಳಿಸಿದ್ದಾರೆ. ಇನ್ನೂ ೨೪ ವರ್ಷ ವಯಸ್ಸುಳ್ಳ ಅನುಪಮಾ ಸದ್ಯ ತನ್ನ ಸಿನಿಮಾ ಕೆರಿಯರ್ ಮೇಲೆ ಇದ್ದು, ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದಿದ್ದರು.

ನಟಿ ಅನುಪಮಾ ಕಳೆದ ೨೦೧೯ ರಲ್ಲಿ ರಾಕ್ಷಸುಡು ಚಿತ್ರದಲ್ಲಿ ನಟಿಸಿದ್ದು, ನಂತರ ಯಾವುದೇ ಸಿನೆಮಾದಲ್ಲಿ ಪ್ರೇಕ್ಷಕರ ಮುಂದೆ ಬಂದಿಲ್ಲ. ಇನ್ನೂ ನಿಖಿಲ್ ನಾಯಕನಾಗಿ ಅಭಿನಯಿಸಲಿರುವ ಚಿತ್ರವೊಂದರಲ್ಲಿ ಅನುಪಮ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಜೊತೆಗೆ ನಿರ್ದೇಶನ ಮಾಡುವತ್ತ ಸಹ ನಟಿ ಅನುಪಮ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Trending

To Top