ನಂದಮೂರಿ ಬಾಲಕೃಷ್ಣ ಸಿನೆಮಾದಲ್ಲಿ ಖ್ಯಾತ ತೆಲುಗು ನಟಿ ವಿಲನ್ …. !

ಟಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರಾದ ನಂದಮೂರಿ ಬಾಲಕೃಷ್ಣರವರ ಮುಂದಿನ ಸಿನೆಮಾದಲ್ಲಿ ನಟಿಯೊಬ್ಬರು ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಬಾಲಕೃಷ್ಣರವರ NBK108 ಸಿನೆಮಾದಲ್ಲಿ ತೆಲುಗು ನಟಿಯೊಬ್ಬರು ಬಾಲಕೃಷ್ಣರವರನ್ನು ಎದುರು ಹಾಕಿಕೊಳ್ಳಲಿದ್ದಾರೆ. ನಟ ಬಾಲಕೃಷ್ಣ ಅಭಿನಯದ ಅಖಂಡ ಸಿನೆಮಾ ಈಗಾಗಲೇ ದೊಡ್ಡ ಸಕ್ಸಸ್ ಕಂಡಿದ್ದು, NBK108 ಸಿನೆಮಾ ಸಹ ಅಖಂಡ ಸಿನೆಮಾದಂತೆ ದೊಡ್ಡ ರೇಂಜ್ ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ NBK108 ಸಿನೆಮಾದಲ್ಲಿ ವಿಲನ್ ರೋಲ್ ನಲ್ಲಿ ತೆಲುಗು ಸಿನಿರಂಗದ ಖ್ಯಾತ ನಟಿಯೊಬ್ಬರು ಬಣ್ಣಹಚ್ಚಲಿದ್ದಾರಂತೆ. ತೆಲುಗು ಸಿನಿರಂಗದ ಕ್ಯೂಟ್ ನಟಿ ಎಂದೇ ಕರೆಯಲಾಗುವ ಅಂಜಲಿ ಬಾಲಕೃಷ್ಣ ರವರನ್ನು NBK108 ಸಿನೆಮಾದಲ್ಲಿ ಎದುರು ಹಾಕಿಕೊಳ್ಳಲಿದ್ದಾರಂತೆ. ನಟಿ ಅಂಜಲಿ ವಿದ್ಯಾಬ್ಯಾಸದ ಸಮಯದಲ್ಲೇ ಶಾರ್ಟ್ ಮೂವಿಸ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಫೊಟೋ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅಂಜಲಿ ಕಡಿಮೆ ಸಮಯದಲ್ಲೇ ದೊಡ್ಡ ಖ್ಯಾತಿ ಗಳಿಸಿಕೊಂಡರು. ಬಳಿಕ ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಜರ್ನಿ ಮೊದಲಾದ ಸಿನೆಮಾಗಳ ಮೂಲಕ ಕ್ರೇಜ್ ಹೆಚ್ಚಿಸಿಕೊಂಡರು.

ಸದ್ಯ NBK107 ಸಿನೆಮಾ ಶೂಟಿಂಗ್ ಕೆಲಸಗಳೂ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೇ NBK108 ಸಿನೆಮಾಕೆಲಸಗಳೂ ಸಹ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಈ ಸಿನೆಮಾ ಬಳಿಕ ನಟ ಬಾಲಯ್ಯ ನಿರ್ದೇಶಕ ಅನಿಲ್ ರಾವಿಪೂಡಿ ಜೊತೆ ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಕೆಲಸಗಳು ಅಕ್ಟೋಬರ್‍ ಮಾಹೆಯಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಸಿನೆಮಾ ಪೂರ್ಣ ಆಕ್ಷನ್ ಸಿನೆಮಾ ಆಗಲಿದೆ ಎನ್ನಲಾಗುತ್ತಿದ್ದು. ತಂದೆ ಮಗಳ ಕಥೆಯನ್ನು ಆಧರಿಸಿದ ಸಿನೆಮಾ ಆಗರಲಿದೆಯಂತೆ. ಇನ್ನೂ ಈ ಸಿನೆಮಾದಲ್ಲಿ ಬಾಲಕೃಷ್ಣ ಮಗಳ ಪಾತ್ರದಲ್ಲಿ ಕನ್ನಡದ ನಟಿ ಶ್ರಿಲೀಲ ಕಾಣಸಿಕೊಳ್ಳಲಿದ್ದಾರಂತೆ. ಜೊತೆಗೆ ಬಾಲಯ್ಯ ಜೊತೆ ಪ್ರಿಯಮಣಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇನ್ನೂ NBK108 ಸಿನೆಮಾದಲ್ಲಿ ಟಾಲಿವುಡ್ ನಟಿ ಅಂಜಲಿ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಈ ಪಾತ್ರದಲ್ಲಿ ನಟಿಸಲು ಈಗಾಗಲೇ ಸಿನಿತಂಡ ಆಕೆಯನ್ನು ಸಂಪರ್ಕ ಮಾಡಿದ್ದು. ನಟಿ ಅಂಜಲಿ ಸಹ ಒಪ್ಪಿಗೆ ನೀಡಿದ್ದಾರಂತೆ. ಈ ಸಿನೆಮಾದಲ್ಲಿ ನಟಿ ಅಂಜಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಬಾಲಕೃಷ್ಣ ಜೊತೆ ಇದ್ದುಕೊಂಡೆ ಆತನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಕುರಿತು ಶೀಘ್ರದಲ್ಲೇ ಸ್ಪಷ್ಟ ಮಾಹಿತಿ ದೊರೆಯಲಿದೆ.

Previous articleಗರ್ಭಿಣಿಯಾದರೂ ಹಾಟ್ ಸೆಲ್ಫಿ ಮೂಲಕ ಹೈಪ್ ಹೆಚ್ಚಿಸಿದ ಬಾಲಿವುಡ್ ನಟಿ …..!
Next articleಮತ್ತೊಮ್ಮೆ ರಜನಿಕಾಂತ್ ಐಶ್ವರ್ಯ ಕಾಂಬಿನೇಷನ್ ನಲ್ಲಿ ಸಿನೆಮಾ….!