ಕೊನೆಗೂ ಜಬರ್ದಸ್ತ್ ಶೋ ನಿಂದ ಹೊರಬರಲು ಕಾರಣ ಕೊಟ್ಟ ಅನಸೂಯ, ಶೋ ನಿಂದ ಹೊರಬರಲು 2 ವರ್ಷಗಳು ಕಾದಿದ್ದರಂತೆ…!

ಟಾಲಿವುಡ್ ಕಿರುತೆರೆಯಲ್ಲಿ ದೊಡ್ಡ ಕ್ರೇಜ್ ಸಂಪಾದಿಸಿ ಆಂಕರ್‍ ಗಳಲ್ಲಿ ಅನಸೂಯ ಭಾರದ್ವಾಜ್ ಗಾಗಿ ಅನೇಕ ಅಭಿಮಾನಿಗಳು ಆಕೆಯ ಶೋ ನೋಡಲು ಕಾಯುತ್ತಿರುತ್ತಾರೆ. ಜಬರ್ದಸ್ಥ್ ಕಾಮಿಡಿ ಶೋ ನಲ್ಲಿ ಅನಸೂಯ ಹೋಸ್ಟ್ ಮಾಡುತ್ತಾ, ಗ್ಲಾಮರಸ್ ಟ್ರೀಟ್ ಸಹ ನೀಡುತ್ತಿದ್ದರು. ಈ ಶೋ ನಲ್ಲಿ ಆಕೆ ಧರಿಸಿದ ಶಾರ್ಟ್ ಡ್ರೆಸ್ ಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದರು. ಶೋ ನಲ್ಲಿ ಕಾಮಿಡಿಯನ್ ಗಳು ಹಾಕುವ ಡೈಲಾಗ್ ಗಳಿಗೆ ಆಕೆ ನೀಡುವ ಸ್ಮೈಲ್ ಸಹ ಶೋ ನಲ್ಲಿ ಹೈಲೈಟ್ ಎಂದೇ ಹೇಳಲಾಗುತ್ತಿತ್ತು. ಆದರೆ ಕೆಲವೊಂದು ಕಾರಣಗಳಿಂದ ಆಕೆ ಜಬರ್ದಸ್ತ್ ಶೋ ನಿಂದ ಹೊರಹೋದರು. ಇದೀಗ ಆಕೆ ಶೋ ನಿಂದ ಹೊರಹೋಗಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

ತೆಲುಗು ಕಿರುತೆರೆಯ ಅತಿ ದೊಡ್ಡ ಕಾಮಿಡಿ ಶೋ ಎಂದೇ ಜಬರ್ದಸ್ತ್ ಶೋ ಅನ್ನು ಕರೆಯಲಾಗುತ್ತಿತ್ತು. ಈ ಶೋ ಹೋಸ್ಟ್ ಮಾಡುತ್ತಿದ್ದ ಅನಸೂಯ ಶೋ ನಿಂದ ಹೊರಹೋಗುತ್ತಿರುವುದಾಗಿ ಘೋಷಣೆ ಮಾಡಿ ಸಡನ್ ಶಾಕ್ ನೀಡಿದ್ದರು. ಅನಸೂಯಗೆ ಕ್ರೇಜ್ ತಂದುಕೊಟ್ಟಿದ್ದೇ ಜಬರ್ದಸ್ತ್ ಶೋ. ಆದರೆ ಅನಸೂಯ ಈ ಶೋ ನಿಂದ ಹೊರಹೋಗಿದ್ದು, ಇದರ ಹಿಂದೆ ದೊಡ್ಡ ಕಥೆಯೇ ಇದೆಯಂತೆ. ಸ್ವತಃ ಅನಸೂಯ ರವರೇ ಈ ಕುರಿತು ಸಂದರ್ಶನವೊಂದರಲ್ಲಿ ಮಾಹಿತಿ ಹೊರಹಾಕಿದ್ದು. ಸದ್ಯ ಟಾಲಿವುಡ್ ಅಂಗಳದಲ್ಲಿ ಇದು ಹಾಟ್ ಟಾಪಿಕ್ ಆಗಿದೆ. ಸಂದರ್ಶನದಲ್ಲಿ ಮಾತನಾಡಿದ ಅನಸೂಯ ನಾನು ಸುಮಾರು ಎರಡು ವರ್ಷಗಳಿಂದ ಜಬರ್ದಸ್ತ್ ಶೋ ನಿಂದ ಹೊರಹೋಗಲು ಪ್ರಯತ್ನ ಮಾಡುತ್ತಿದೆ. ಮಲ್ಲೆಮಾಲ ಪ್ರೊಡಕ್ಷನ್ ಸಂಸ್ಥೆ ನನಗೆ ಉತ್ತಮ ಅವಕಾಶ ನೀಡಿದೆ. ಈ ಸಂಸ್ಥೆಯಲ್ಲಿ ಎಲ್ಲರೂ ಒಳ್ಳೆಯವರು. ಆದರೆ ಕೆಲವೊಂದು ವಿವಾದಗಳು ಸಹ ಅನಿರೀಕ್ಷಿತವಾಗಿ ನಡೆಯಿತು. ನನಗೆ ಸಾಲು ಸಾಲು ಸಿನೆಮಾಗಳಲ್ಲಿ ಅವಕಾಶಗಳು ಬರುತ್ತಿವೆ. ಶೂಟಿಂಗ್ ಗಾಗಿ ಟೈಂ ಕೇಳುವುದಕ್ಕೆ ನನಗೆ ಗಿಲ್ಟಿಯಾಗಿ ಅನ್ನಿಸುತ್ತಿತ್ತು. ನನಗಾಗಿ ಶೆಡ್ಯೂಲ್ಡ್ ಬದಲಾವಣೆ ಮಾಡುವುದು ಸರಿಯಲ್ಲ ಎಂಬುದು ನನ್ನ ಉದ್ದೇಶ. ಸುಮಾರು ಒಂಭತ್ತು ವರ್ಷಗಳಿಂದ  ಜಬರ್ದಸ್ತ್ ಶೋ ಮಾಡುತ್ತಿದ್ದೇನೆ, ಎಂದೂ ಸಹ ನನಗೆ ಶೋ ಬೋರ್‍ ಅನ್ನಿಸಿಲ್ಲ. ಇನ್ನೂ ನಾನು ಈ ಶೋ ನಿಂದ ಹೊರಹೋಗಲು ಯಾರನ್ನು ದೂರುವುದಿಲ್ಲ ಎಂದಿದ್ದಾರೆ.

ಆದರೆ ಈ ಶೋ ನಲ್ಲಿ ನನಗೆ ಕೆಲವೊಂದು ಸಂದರ್ಭ ತುಂಬಾ ಇರುಸುಮುರುಸು ಆಗುವಂತೆ ಮಾಡಿತ್ತು. ಕ್ರಿಯೇಟಿವ್ ರಂಗದಲ್ಲಿ ಇಂತಹವೆಲ್ಲ ಕಾಮನ್ ಈ ಸುಳಿಯಲ್ಲಿ ನಾನು ಸಿಲುಕಿಕೊಳ್ಳಲು ಇಷ್ಟಪಟ್ಟಿಲ್ಲ. ಈ ಶೋನಲ್ಲಿ ನನಗೆ ಇಷ್ಟವಾಗದ್ದು ಮಾಡಿದಾಗ ಕೆಲ ಎಕ್ಸಪ್ರೆಷನ್ಸ್ ಹಾಗೂ ರಿಯಾಕ್ಷನ್ ಸಹ ನೀಡುತ್ತೇನೆ. ಆದರೆ ಅದು ಪ್ರೇಕ್ಷರಿಗೆ ಸೇರುತ್ತಿರಲಿಲ್ಲ. ಆದರೆ ಪ್ರೇಕ್ಷಕರು ಮಾತ್ರ ನೋಡುವುದೇ ನಿಜ. ಸಿನಿರಂಗದಲ್ಲಿ ನಾನು ಏನು ಹೇಳಲು ಬಯಸಿದರೂ ಅದು ಪ್ರೇಕ್ಷಕರ ಬಳಿ ಸೇರುತ್ತಿರಲಿಲ್ಲ. ಬಾಡಿ ಶೇಮಿಂಗ್ ನಂತಹ ಚೇಷ್ಟೆಗಳು ನನಗೆ ಇಷ್ಟವಾಗುತ್ತಿರಲಿಲ್ಲ.  ಅಷ್ಟಅಲ್ಲದೇ ಮುಖ್ಯವಾಗಿ ನನ್ನ ಮೇಲೆ ಡಬುಲ್ ಮೀನಿಂಗ್ ಡೈಲಾಗ್ ಹೇಳುವುದು, ಸಟೈರ್‍ ಹಾಕುವುದರಿಂದ ನನಗೆ ತುಂಬಾನೆ ನೋವಾಗುತ್ತಿತ್ತು. ಕೆಲವರು ನನ್ನನ್ನು ಒಳ್ಳೆಯವಳು ಎಂದುಕೊಂಡರೇ. ಕೆಲವರು ನನಗೆ ತುಂಬಾ ಕೊಬ್ಬು ಎಂದುಕೊಳ್ಳುತ್ತಾರೆ.

ಈಗಾಗಲೇ ಶೋ ನಿಂದ ನಾಗಬಾಬು, ರೋಜಾ ರವರು ಸಹ ಹೊರಹೋದರು. ಅವರ ಜೊತೆಗೆ ಅನೇಕರು ಹೋದರು. ಆ ಕಾರಣಕ್ಕಾಗಿಯೇ ನಾನು ಸಹ ಹೊರಹೋಗಿದ್ದೇನೆ ಎಂದು ಕೊಳ್ಳುತ್ತಿದ್ದಾರೆ. ನಾನೇನು ಕುರಿಯ ಮಂದೆಯ ಟೈಪ್ ಅಲ್ಲ ಅವರು ಹೋದರು ಎಂದು ನಾನು ಹೋಗುವುದಿಕ್ಕೆ. ಈ ಹಿಂದೆ ಕುರಿ ಮಂದೆಯೊಂದು ನನ್ನ ಮೇಲೆ ಅಟ್ಯಾಕ್ ಮಾಡಿತ್ತು. ಟಿ.ಆರ್‍.ಪಿ ರೇಟಿಂಗ್ ಲೆಕ್ಕಗಳು ನನಗೆ ತಿಳಿಯದು, ನಾನು ಪ್ರಾರಂಭದಲ್ಲಿ ಶೋ ನಡೆಸಿಕೊಟ್ಟಾಗ ದೊಡ್ಡ ಟಿ.ಆರ್‍.ಪಿ ಬಂತು ಎಂದು ಹೇಳಿದರು. ನನಗೂ ಟಿ.ಆರ್‍.ಪಿ ಗೂ ಯಾವುದೇ ಸಂಬಂಧವಿಲ್ಲ. ನನಗೆ ಕೊಡುವ ಸಂಬಳಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ನಟಿಸುತ್ತೇನೆ ಎಂಬೆಲ್ಲಾ ಮಾತುಗಳು ಹೇಳಿದ್ದಾರೆ.

Previous articleಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ಮಲಯಾಳಂ ಬ್ಯೂಟಿ ಅನುಪಮಾ…!
Next articleಕಮಿಟ್ ಮೆಂಟ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಐಸ್ ಕ್ರೀಮ್ ಬ್ಯೂಟಿ ತೇಜಸ್ವಿ ಮಡಿವಾಡ, ಅಡಲ್ಟ್ ಸಿನೆಮಾ ಮಾಡಿದ್ರೆ ತಪ್ಪೇನು ಎಂದ್ರು…!