ಗಿಲ್ಲಿತೇ, ಗಿಲ್ಲಿಂಚುಕೊವಾಲಿ ಎಂದು ಪೋಕಿರಿ ಡೈಲಾಗ್ ಹೊಡೆದ ನಟಿ ಅನಸೂಯ, ಯಾಕೆ ಗೊತ್ತಾ?

ಸಿನಿರಂಗದಲ್ಲಿ ಸ್ಟಾರ್‍ ಆಂಕರ್‍ ಆಗಿ ಅನೇಕ ಶೋಗಳನ್ನು ಹೋಸ್ಟ್ ಮಾಡಿದ್ದ ಅನಸೂಯ ಇದೀಗ ಸಿನೆಮಾಗಳಲ್ಲೂ ಸಹ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡು ಯಶಸ್ವಿ ಕಲಾವಿದೆಯಾಗಿ ಮುನ್ನುಗ್ಗುತ್ತಿದ್ದಾರೆ. ರಂಗಸ್ಥಳಂ, ಪುಷ್ಪಾ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ದಕ್ಕಿಸಿಕೊಂಡ ಈಕೆ ಇತ್ತೀಚಿಗಷ್ಟೆ ಜಬರ್ದಸ್ತ್ ಶೋ ನಿಂದ ಹೊರಹೋಗಿ ಸುದ್ದಿಯಾಗಿದ್ದರು. ಜೊತೆಗೆ ಆಖೆ ಶೋ ನಿಂದ ಹೊರ ಬರಲು ಕಾರಣಗಳನ್ನು ತಿಳಿಸಿ ಸುದ್ದಿಯಾಗಿದ್ದರು. ಇದೀಗ ಆಕೆ ಸಿನಿರಂಗದಲ್ಲಿ ಪುರುಷ ಪ್ರಾಧಾನ್ಯತೆಯ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.

ನಟಿ ಅನಸೂಯ ಜಬರ್ದಸ್ತ್ ಶೋ ಮೂಲಕ ದೊಡ್ಡ ಮಟ್ಟದಲ್ಲಿ ಫೇಮ್ ಗಳಿಸಿಕೊಂಡರು. ನಟನೆಗೆ ಪ್ರಾಧಾನ್ಯತೆಯಿರುವಂತಹ ಪಾತ್ರಗಳನ್ನು ಮಾಡುತ್ತಾ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ದಕ್ಕಿಸಿಕೊಳ್ಳುತ್ತಿದ್ದಾರೆ. ಜಬರ್ದಸ್ತ್ ಶೋ ನಿಂದ ಹೊರಹೋದ ಬಳಿಕ ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಒಂದು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತನ್ನ ಮೇಲೆ ಹಾಕುವ ಪಂಚ್ ಗಳಿಗೆ ಹಾಗೂ ಬಾಡಿ ಶೇಮಿಂಗ್ ನಿಂದಲೇ ಆಕೆ ಕಾಮಿಡಿ ಶೋ ನಿಂದ ಹೊರಹೋಗಿದ್ದಾಗಿ ಸಹ ಹೇಳಿದ್ದಾರೆ. ಇದೀಗ ಸಿನಿರಂಗದಲ್ಲಿ ಮಹಿಳೆಯರನ್ನು ಯಾವ ರೀತಿ ನೋಡುತ್ತಾರೆ ಎಂದು ಹೇಳುತ್ತಾ ಆವೇದನೆಯನ್ನು ಹೊರಹಾಕಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಟಾಪಿಕ್ ಆಗಿದೆ.

ಸಿನಿರಂಗದಲ್ಲಿ ಹೆಣ್ಣು ಕಲಾವಿದರಿಗೆ ಕೊಡುವ ಪ್ರಾಧಾನ್ಯತೆ ತುಂಬಾನೆ ಕಡಿಮೆ. ಹಿರೋಯಿನ್ ಅಂದರೇ ಕ್ಯಾಮೆರಾ ಮುಂದೆ ಕಾಪಾಡಿ ಅಥವಾ ನಾಚಿಕೆ ಪಡುತ್ತಾ ನಗಬೇಕು, ಅಷ್ಟೇ ನಟಿಯರ ಕೆಲಸವಾಗಿದೆ. ಯಾವುದೇ ವಿಚಾರವನ್ನು ಸಹ ಮಾತನಾಡಬಾರದು ಎಂದು ಹೇಳಿದ ಆಕೆ ತೆಲುಗು ಸೂಪರ್‍ ಹಿಟ್ ಸಿನೆಮಾ ಪೋಕಿರಿಯಲ್ಲಿ ಬರುವ ಡೈಲಾಗ್ ಸಹ ಹೇಳಿದ್ದಾರೆ. ಅದರಲ್ಲಿ ಪ್ರಕಾಶ್ ರೈ ಗಿಲ್ಲಿತೆ ಗಿಲ್ಲಿಂಚುಕೋವಾಲಿ ಎಂಬ ಡೈಲಾಗ್ ಹೇಳಿದ್ದಾರೆ. ಸಿನಿರಂಗದಲ್ಲೂ ಸಹ ಅದೇ ರೀತಿಯಲ್ಲಿ ನಡೆಯುತ್ತಿದೆ. ನಟಿಯರ ಹಕ್ಕುಗಳಿಗಾಗಿ ನಾವು ಮಾತನಾಡಿದರೇ ನಮ್ಮನ್ನು ತುಳಿದು ಬಿಡುತ್ತಾರೆ. ಸಿನಿರಂಗದಲ್ಲಿ ದೇವದಾಸಿಯಂತೆ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಇನ್ನೂ ಸಿನಿರಂಗ ಎಂದ ಕೂಡಲೇ ಎಲ್ಲರಿಗೂ ತುಂಬಾನೆ ಆಸಕ್ತಿಯಿರುತ್ತದೆ. ಆದರೆ ನಾವು ಇಲ್ಲಿ ಎಲ್ಲರಂತೆ ಕೆಲಸ ಮಾಡುತ್ತೇವೆ. ಆದರೆ ಈ ಬಣ್ಣದ ಲೋಕವೇ ಬೇರೆ, ಹೊರಗೆ ಕಾಣಿಸುವಂತಿರುವುದಿಲ್ಲ. ಸಿನಿರಂಗದ ಆಳವನ್ನು ಏತಕ್ಕೆ ತಿಳಿದುಕೊಳ್ಳಬೇಕು ಎಂದುಕೊಳ್ಳುತ್ತಾರೆ. ಸಿನಿಮಾ ಸೆಲೆಬ್ರೆಟಿಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಸಿನೆಮಾಗಳನ್ನು ನೋಡುವ ಆಸಕ್ತಿ ಮೂಡುತ್ತದೆ. ನಿಮಗೆ ನಮ್ಮ ಸಿನೆಮಾಗಳನ್ನು ನೋಡುವ ಅರ್ಹತೆ ಇದೆಯೇ ಎಂದುಕೊಂಡರೇ ಸಿನೆಮಾ ಥಿಯೇಟರ್‍ ಗಳ ಬಳಿ ಯಾರೂ ಬರುವುದೇ ಇಲ್ಲ ಎಂದಿದ್ದಾರೆ.  ಸದ್ಯ ಅನಸೂಯ ಹೇಳಿಕೆ ಗಳು ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಗೆ ಕಾರಣವಾಗಿದೆ.

Previous articleಡೇಟಿಂಗ್ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಯಂಗ್ ಬ್ಯೂಟಿ ಜಾನ್ವಿ ಕಪೂರ್…!
Next articleತಮ್ಮ ರಿಲೇಷನ್ ರೂಮರ್ ಬಗ್ಗೆ ಕ್ಲಾರಿಟಿ ಕೊಟ್ಟ ಪೂರಿ ಅಂಡ್ ಚಾರ್ಮಿ…!