ಗರ್ಭಿಣಿಯಾದ ಬೆನ್ನಲ್ಲೇ ಅಪ್ ಸೆಟ್ ಆದ ಆಲಿಯಾ, ಆಲಿಯಾ ಕೋಪಕ್ಕೆ ಕಾರಣವಾದರೂ ಏನು?

ಬಾಲಿವುಡ್ ನ ಕ್ಯೂಟ್ ಕಪಲ್ಸ್ ಆಲಿಯಾ ಹಾಗೂ ರಣಬೀರ್‍ ಇತ್ತೀಚಿಗಷ್ಟೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ತಾವು ತಂದೆ ತಾಯಿಯಾಗುತ್ತಿರುವ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಗುಡ್ ನ್ಯೂಸ್ ನೀಡಿದ್ದರು. ಇನ್ನೂ ಈ ಸುದ್ದಿಯನ್ನು ಕೇಳಿದ ಬಾಲಿವುಡ್ ಸೆಲೆಬ್ರೆಟಿಗಳೂ ಸೇರಿದಂತೆ ಅನೇಕರು ಅವರಿಗೆ ಶುಭಾಷಯಗಳನ್ನು ಕೋರಿದ್ದರು. ಆದರೆ ಆಲಿಯಾ ಸಂತೋಷದಲ್ಲಿರುವಾಗ ಆಕೆ ಅಪ್ ಸೆಟ್ ಆಗಿದ್ದಾರೆ. ಆಕೆ ಅಪ್ ಸೆಟ್ ಆಗಲೂ ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಗರ್ಭಿಣಿಯಾದ ಸಂತೋಷದಲ್ಲಿ ಆಲಿಯಾ ಭಟ್ ತಮ್ಮ ಖುಷಿಯನ್ನು ತುಂಬಾನೆ ಸಂಭ್ರಮಿಸಿದ್ದಾರೆ. ಮದುವೆಯಾದ ಎರಡು ತಿಂಗಳು ಮುಗಿಯುವುದರೊಳಗೆ ಆಲಿಯಾ ತಾಯಿಯಾಗುತ್ತಿರುವ ವಿಚಾರ ರಣಬೀರ್‍ ಹಾಗೂ ಅವರ ಕುಟುಂಬಕ್ಕೂ ತುಂಬಾನೆ ಸಂತಸ ತಂದಿದೆ. ಅವರ ಕುಟುಂಬಸ್ಥರೆಲ್ಲರೂ ತುಂಬಾ ಸಂತೋಷದಿಂದ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಅದೇ ರೀತಿ ಆಲಿಯಾ ಸಹ ಸಂತೋಷದಿಂದ ಇರುವ ವೇಳೆ ಆಕೆಗೆ ಒಂದು ವಿಚಾರದಿಂದ ತುಂಬಾನೆ ಕೋಪ ತರಿಸಿದೆ. ಹ್ಯಾಪಿ ಮೂಡ್ ನಲ್ಲಿರುವ ಆಲಿಯಾ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಇದರಿಂದ ಬೇಸರಗೊಂಡು ಕೂಡಲೇ ಸೋಷಿಯಲ್ ಮಿಡಿಯಾದಲ್ಲಿ ಫೈರ್‍ ಆಗಿದ್ದಾರೆ. ತಮ್ಮ ವಿರುದ್ದ ಮಾತನಾಡಿದ ಹಾಗೂ ಟ್ರೋಲ್ ಮಾಡಿದವರಿಗೆ ಸೈಲೈಂಟ್ ಆಗಿಯೇ ಟಾಂಗ್ ನೀಡಿದ್ದಾರೆ.

ನಟಿ ಆಲಿಯಾ ಗರ್ಭಿಣಿಯಾಗಿದ್ದರಿಂದ ಆಕೆ ಒಪ್ಪಿಕೊಂಡ ಸಿನೆಮಾಗಳು ಹಾಗೂ ನಟಿಸುತ್ತಿರುವ ಸಿನೆಮಾಗಳು ನಿಂತುಹೋಗುವ ಅವಕಾಶಗಳು ತುಂಬಾನೆ ಇವೆ. ಗರ್ಭಿಣಿಯಾದ ಕಾರಣಕ್ಕೆ ಆಕೆ ಆ ಸಿನೆಮಾಗಳಲ್ಲಿ ನಟಿಸುತ್ತಿಲ್ಲ. ಅದರಿಂದ ಆಕೆ ಒಪ್ಪಿಕೊಂಡ ಸಿನೆಮಾಗಳು ನಿಂತುಹೋಗಬೇಕಿದೆ ಎಂತಲೂ ಹಾಗೂ ಶೂಟಿಂಗ್ ನಿಮಿತ್ತ ಆಲಿಯಾ ಲಂಡನ್ ನಲ್ಲಿದ್ದು ರಣಬೀರ್‍ ಕಪೂರ್‍ ಲಂಡನ್ ಗೆ ತೆರಳಿ ಅಲ್ಲಿಂದ ಸೇಫ್ ಆಗಿ ಆಲಿಯಾರನ್ನು ಭಾರತಕ್ಕೆ ಕರೆತರಲಿದ್ದಾರೆ ಎಂದೂ ಅನೇಕ ರೂಮರ್‍ ಗಳು ಹರಿದಾಡಿದ್ದವು. ಜೊತೆಗೆ ಕೆಲವೊಂದು ಟ್ರೋಲ್ ಗಳೂ ಸಹ ಜೋರಾಗಿಯೇ ಹರಿದಾಡಿದವು. ಇದಕ್ಕೆ ಆಲಿಯಾ ಸಿಕ್ಕಾಪಟ್ಟೆ ಫೈರ್‍ ಆಗಿದ್ದಾರೆ. ಈ ರೂಮರ್‍ ಗಳಿಂದಾಗಿ ಆಕೆ ತುಂಭಾನೆ ಆವೇದನೆಯನ್ನು ಅನುಭವಿಸಿದ್ದಾರೆ. ಈ ವಿಚಾರಕ್ಕೆ ಸೋಷಿಯಲ್ ಮಿಡಿಯಾ ಮೂಲಕವೇ ಸೈಲೆಂಟ್ ಆಗಿ ಉತ್ತರಿಸಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಈ ರೂಮರ್‍ ಹಾಗೂ ಟ್ರೋಲ್ ಗಳಿಗೆ ಉತ್ತರಿಸಿದ ಆಲಿಯಾ, ನಿಮ್ಮ ರೇಟಿಂಗ್ಸ್ ಹೆಚ್ಚಿಸಿಕೊಳ್ಳಲು ಏನು ಬೇಕಾದರೂ ಬರೆದುಬಿಡುತ್ತೀರಾ, ಯಾರು ಯಾರನ್ನು ಪಿಕಪ್ ಮಾಡುವ ಅವಶ್ಯಕತೆಯಿಲ್ಲ, ನಾನು ಮಹಿಳೆ, ಅದರಲ್ಲೂ ಮನುಷ್ಯಳು, ಪಾರ್ಸಲ್ ಅಲ್ಲ ಯಾರು ನನ್ನನ್ನು ಜಾಗ್ರತೆಯಿಂದ ಎತ್ತುಕೊಂಡು ಹೋಗಲು ಎಂದಿದ್ದಾರೆ. ನನಗೆ ವಿಶ್ರಾಂತಿ ಅವಸರವಿಲ್ಲ. ಡಾಕ್ಟರ್‍ ಗಳ ಸರ್ಟಿಫಿಕೇಟ್ ಇದೆ ಎಂಬುದನ್ನು ನೀವೆಲ್ಲರೂ ತಿಳಿದುಕೊಂಡರೇ ಒಳಿತು. ಶೂಟಿಂಗ್ಸ್ ವಿಚಾರದಲ್ಲಿ ನನಗೆ ಯಾವುದೇ ತೊಂದರೆಯಿಲ್ಲ. ನನ್ನ ಕೆರಿಯರ್‍ ಮುಗಿದುಹೋಗಿದೆ ಎಂದು ಊಹಿಸಬೇಡಿ. ಇದು 2022ನೇ ವರ್ಷ, ಈಗಲಾದರೂ ಹಳೇಯ ರೀತಿ ಆಲೋಚನೆ ಮಾಡುವುದನ್ನು ಬಿಟ್ಟು ಹೊರಬರಬಹುದಾ? ನನ್ನ ಶೂಟಿಂಗ್, ನನ್ನ ಶಾಟ್ಸ್ ಎಲ್ಲಾ ರೆಡಿಯಾಗಿದೆ. ನನ್ನು ಶೂಟಿಂಗ್ ನಲ್ಲಿ ಜಾಯಿನ್ ಆಗುವದೇ ಎಂದು ಇನ್ಸ್ಟಾ ಸ್ಟೋರಿಸ್ ನಲ್ಲಿ ಬರೆದುಕೊಂಡಿದ್ದಾರೆ. ಹೀಗೆ ತಮ್ಮ ವಿರುದ್ದ ಟ್ರೋಲ್ ಮಾಡಿದವರಿಗೆ ಸೈಲೆಂಟ್ ಆಗಿಯೇ ಟಾಂಗ್ ನೀಡಿದ್ದಾರೆ ಆಲಿಯಾ.

Previous articleಮತ್ತೆ ಫಾರಿನ್ ಟ್ರಿಪ್ ಗೆ ಹೊರಟ ಅಲ್ಲು ಅರ್ಜುನ್ ಕುಟುಂಬ…! ಪುಷ್ಪಾ-2 ಶೂಟಿಂಗ್ ಇನ್ನೂ ಲೇಟ್ ಆಗುತ್ತಾ?
Next articleನ್ಯಾಷನಲ್ ಕ್ರಷ್ ಎಂಬ ಬಿರುದನ್ನು ಹಣ ಕೊಟ್ಟು ಪಡೆದುಕೊಂಡ್ರಂತೆ ರಶ್ಮಿಕಾ…! ಸಂಯುಕ್ತಾ ಹೆಗಡೆ ಶಾಕಿಂಗ್ ಹೇಳಿಕೆ..!