ಮತ್ತೊಮ್ಮೆ ರಜನಿಕಾಂತ್ ಐಶ್ವರ್ಯ ಕಾಂಬಿನೇಷನ್ ನಲ್ಲಿ ಸಿನೆಮಾ….!

ದೇಶದ ಸಿನಿರಂಗದ ಖ್ಯಾತ ನಟ ರಜನಿಕಾಂತ್ ಹಾಗೂ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರಲಿದೆಯಂತೆ. ಈ ಹಿಂದೆ ರೋಬೊ ಸಿನೆಮಾದ ಮೂಲಕ ಎಲ್ಲರನ್ನೂ ರಂಜಿಸಿದ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಅಬ್ಬರಿಸಲಿದೆ ಎಂದು ಹೇಳಲಾಗುತ್ತಿದೆ. ಖ್ಯಾತ ನಿರ್ದೇಶಕ ಶಂಕರ್‍ ನಿರ್ದೇಶನದಲ್ಲಿ ಮೂಡಿಬಂದ ರೋಬೊ ಸಿನೆಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ 2010 ರಲ್ಲಿ ತೆರೆಗೆ ಬಂದ ರೊಬೋ ಸಿನೆಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಸಹ ಈ ಸಿನೆಮಾ ಸಕ್ಸಸ್ ಆಗಿತ್ತು. ರೊಬೋ ಸಿನೆಮಾದಲ್ಲಿ ರಜನಿಕಾಂತ್ ಹಾಗೂ ಐಶ್ವರ್ಯ ರವರ ನಡುವಣ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿತ್ತು. ಇದು ಸಿನಿರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮತ್ತೆ ಈ ಜೋಡಿ ಪುನಃ ತೆರೆಯ ಮೇಲೆ ಒಂದಾಗುತ್ತಾರಾ ಎಂದು ಕಾತುರದಿಂದ ಕಾಯುತ್ತಿದ್ದರು. ಇದೀಗ ರಜನಿ ಹಾಗೂ ಐಶ್ವರ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರೆಯುವ ಮುನ್ಸೂಚನೆ ದೊರೆತಂತಿದೆ. ಈ ಇಬ್ಬರೂ ಸ್ಟಾರ್‍ ಗಳ ಕಾಂಬಿನೇಷನ್ ನಲ್ಲಿ ಸಿನೆಮಾ ಒಂದು ತೆರೆಗೆ ಬರಲಿದೆ ಎಂಬ ಮಾಹಿತಿ ಹೊರಬರುತ್ತಿದೆ. ನಟ ರಜನಿಕಾಂತ್ ನಟನಾಗಿ ಸನ್ ಪಿಕ್ಚರ್ಸ್ ಬ್ಯಾನರ್‍ ನಡಿ ಖ್ಯಾತ ನಿರ್ಮಾಪಕ ಕಳಾನಿಥಿ ಮಾರನ್ ಬಿಗ್ ಬಜೆಟ್ ಸಿನೆಮಾ ನಿರ್ಮಾಣ ಮಾಡುತ್ತಿರುವ ವಿಚಾರ ಈಗಾಗಲೇ ತಿಳಿದಿದೆ. ಇನ್ನೂ ಈ ಸಿನೆಮಾವನ್ನು ನೆಲ್ಸನ್ ದಿಲೀಪ್ ಕುಮಾರ್‍ ನಿರ್ದೇಶನ ಮಾಡಲಿದ್ದಾರೆ.

ನಟ ರಜನಿಕಾಂತ್ ರವರ 169 ನೇ ಸಿನೆಮಾವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಲು ಸಿದ್ದತೆಗಳು ನಡೆಯುತ್ತಿವೆ. ಇದರ ಭಾಗವಾಗಿಯೇ ಸಿನೆಮಾದಲ್ಲಿ ನಟ ರಜನಿಕಾಂತ್ ಜೊತೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರಾಯ್ ಬಣ್ಣ ಹಚ್ಚಲಿದ್ದಾರಂತೆ. ಈ ಕುರಿತು ಇತ್ತಿಚಿಗಷ್ಟೆ ಚಿತ್ರತಂಡ ಸಹ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇನ್ನೂ ಈ ಸಿನೆಮಾದ ಶೂಟಿಂಗ್ ಕೆಲಸಗಳು ಆಗಸ್ಟ್ ಮಾಹೆಯಿಂದ ಶುರುವಾಗಲಿದೆಯಂತೆ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿ ರಮ್ಯಕೃಷ್ಣ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಸಿನೆಮಾದಲ್ಲಿ ಪ್ರಿಯಾಂಕಾ ಅರುಳ್ ಮೋಹನ್ ಸಹ ನಟಿಸಲಿದ್ದಾರೆ.

ಇನ್ನೂ ಸನ್ ಪಿಕ್ಚರ್ಸ್ ಬ್ಯಾನರ್‍ ನಡಿ ನಿರ್ಮಾಣವಾದ ಅಣ್ಣಾಥೆ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ರಜನಿಕಾಂತ್ ರವರಿಗೆ ಬಿಗ್ ಹಿಟ್ ನೀಡುವ ಸಲುವಾಗಿ ಈ ಬಾರಿ ಸನ್ ಪಿಕ್ಚರ್ಸ್ ದೊಡ್ಡ ಪ್ಲಾನ್ ಮಾಡಿದ್ದು, ಭಾರಿ ಯೋಜನೆಯನ್ನು ರೂಪಿಸುತ್ತಿದೆ. ಬೀಸ್ಟ್ ಸಿನೆಮಾ ಸಹ ಇದೇ ಬ್ಯಾನರ್‍ ನಡಿ ರಿಲೀಸ್ ಆಗಿದ್ದು, ಈ ಸಿನೆಮಾ ಸಹ ದೊಡ್ಡ ಮಟ್ಟದಲ್ಲೇ ಸೋಲು ಕಂಡಿತ್ತು. ಇದೀಗ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‍ ನಿರ್ದೇಶನದಲ್ಲಿ ರಜನಿಕಾಂತ್ ರವರ 169ನೇ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನೆಮಾ ಮುಂದಿನ ವರ್ಷ ಏಪ್ರಿಲ್ ಮಾಹೆಯಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ ಎನ್ನಲಾಗುತ್ತಿದೆ.

Previous articleನಂದಮೂರಿ ಬಾಲಕೃಷ್ಣ ಸಿನೆಮಾದಲ್ಲಿ ಖ್ಯಾತ ತೆಲುಗು ನಟಿ ವಿಲನ್ …. !
Next articleನಿರ್ಮಾಪಕರ ವಿರುದ್ದ ಷಾಕಿಂಗ್ ಕಾಮೆಂಟ್ಸ್ ಕೊಟ್ಟ ಬಾಲಿವುಡ್ ನಟಿ ಸಾರಾ…..!