ಮಗಳ ಹುಟ್ಟುಹಬ್ಬಕ್ಕೆ ಲಿಪ್ ಕಿಸ್ ಮಾಡಿ ಶುಭ ಕೋರಿದ ಐಶ್ವರ್ಯಾ, ಈ ಪೊಟೋ ಸಖತ್ ಟ್ರೋಲ್…!

ಬಾಲಿವುಡ್ ಸ್ಟಾರ್‍ ನಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚನ್ ಇತ್ತಿಚಿಗೆ ತುಂಬಾನೇ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಮಗಳ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭ ಕೊರಿದ್ದು, ಇದಕ್ಕೆ ಆಕೆಯನ್ನು ಟ್ರೋಲ್ ಮಾಡಲಾಗಿದೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ರವರ ಮುದ್ದಿನ ಪುತ್ರಿ ಆರಾಧ್ಯಾಗೆ ಇಂದು (ನ.16) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ತನ್ನ ಪ್ರೀತಿಯ ಮಗಳಿಗೆ ಐಶ್ವರ್ಯಾ ತುಟಿಗೆ ಮುತ್ತಿಡುವ ಪೊಟೋ ಒಂದನ್ನು ಹಂಚಿಕೊಂಡು ಶುಭ ಕೋರಿದ್ದಾರೆ.  ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಜೊತೆಗೆ ಟ್ರೋಲ್ ಸಹ ಆಗುತ್ತಿದೆ.

ಇತ್ತೀಚಿಗಷ್ಟೆ ತೆರೆಕಂಡ ಪೊನ್ನಿಯನ್ ಸೆಲ್ವನ್ ಸಿನೆಮಾದ ಬಳಿಕ ಐಶ್ವರ್ಯ ಮತ್ತೆ ಸಿನೆಮಾಗಳಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ರವರ ಪುತ್ರಿ ಆರಾಧ್ಯಾ ಇಂದು 11ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ಆರಾಧ್ಯಾಗೆ ಐಶ್ವರ್ಯ ಪ್ರೀತಿಯಿಂದ ತುಟಿಗೆ ಮುತ್ತಿಟ್ಟು ಶುಭಾಷಯ ಕೋರಿದ್ದಾರೆ. ಐಶ್ವರ್ಯಾರವರ ಈ ಕೆಲಸಕ್ಕೆ ನೆಟ್ಟಿಗರಿಂದ ತೀವ್ರ ವಿರೋಧ ಸಹ ವ್ಯಕ್ತವಾಗಿದೆ. ಇನ್ನೂ ಐಶ್ವರ್ಯಾ ಆರಾಧ್ಯಾಳ ತುಟಿಗೆ ಮುತ್ತಿಟ್ಟು ನನ್ನ ಪ್ರೀತಿ, ನನ್ನ ಜೀವ, ತುಂಬಾ ಪ್ರೀತಸುತ್ತೀನಿ, ನನ್ನ ಪ್ರೀತಿಯ ಆರಾಧ್ಯಾ ಎಂದು ಕ್ಯಾಪಷ್ಟನ್ ಕೊಟ್ಟು ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಈ ಪೊಟೋ ಹೊರಬಂದಿದ್ದೆ ತಡ ಆಕೆಯ ಅಭಿಮಾನಿಗಳು ಲೈಕ್ ಹಾಗೂ ಕಾಮೆಂಟ್ ಗಳ ಮೂಲಕ ಆರಾಧ್ಯಳಿಗೆ ಶುಭಾಷಯ ಕೋರುತ್ತಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರೆಟಿಗಳು ಏನೆ ಮಾಡಿದರೂ ಟ್ರೋಲ್ ಆಗುವುದು, ವಿವಾದಕ್ಕೆ ಗುರಿಯಾಗುವುದು ಸಾಮಾನ್ಯವಾಗಿರುತ್ತದೆ. ಈ ಹಾದಿಯಲ್ಲೇ ಐಶ್ವರ್ಯ ಹಂಚಿಕೊಂಡ ಪೊಟೋ ಇದೀಗ ಟ್ರೋಲ್ ಆಗುವುದರ ಜೊತೆಗೆ ನೆಟ್ಟಿಗರ ಆಕ್ರೋಷಕ್ಕೂ ಸಹ ಕಾರಣವಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಕೆಲವರು ಐಶ್ವರ್ಯ ಪೊಟೋಗೆ ಮೆಚ್ಚುಗೆ ಸೂಚಿಸುತ್ತಿದ್ದರೇ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತುಟಿಗೆ ಕಿಸ್ ಮಾಡುವ ಕೆಲಸ ಸರಿಯಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಐಶ್ವರ್ಯಾ ಅಭಿಮಾನಿಗಳು ಹ್ಯಾಪಿ ಬರ್ತ್‌ಡೇ ಮಿನಿ ಐಶ್ ಎಂದು ಕಾಮೆಂಠ್ ಮಾಡಿದ್ದಾರೆ. ಮತ್ತೆ ಕೆಲವರು ಇದೊಂದು ಸುಂದರವಾದ ಕ್ಲಿಕ್ ಎಂದಿದ್ದಾರೆ. ಆದರೆ ಕೆಲವರಂತೂ ಇದು ತುಂಬಾ ಅತಿಯಾಯಿತು ಎಂದಿದ್ದಾರೆ.

ಇನ್ನೂ ಐಶ್ವರ್ಯಾ ಎಲ್ಲಿಗೇ ಹೋದರು ಮಗಳ ಜೊತೆಗೆ ಹೋಗುತ್ತಿರುತ್ತಾರೆ. ಮಗಳ ಕೈ ಹಿಡಿದುಕೊಂಡೆ ಹೋಗುತ್ತಿರುತ್ತಿರುತ್ತಾರೆ. ಇದಕ್ಕೂ ಸಹ ಐಶ್ವರ್ಯಾ ಟ್ರೋಲ್ ಆಗಿದ್ದರು. ಇದೀಗ ಮಗಳ ಹುಟ್ಟುಹಬ್ಬಕ್ಕೆ ಆರಾಧ್ಯಳ ತುಟಿಗೆ ಮುತ್ತಿಟ್ಟು ಶುಭ ಕೋರಿದ್ದು, ಟ್ರೊಲರ್‍ ಗಳಿಗೆ ಆಹಾರವಾಗಿದೆ. ಅದು ಏನೇ ಇದ್ದರೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Previous articleನಟರಿಗೂ ತಪ್ಪಿಲ್ಲವೇ ಕಾಸ್ಟಿಂಗ್ ಕೌಚ್, ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ಬಾಲಿವುಡ್ ಸ್ಟಾರ್ ನಟ…!
Next articleಶ್ವೇತವರ್ಣದ ಸೀರೆಯಲ್ಲಿ ದೇವಲೋಕದ ಅಪ್ಸರೆಯರನ್ನೂ ನಾಚಿಸುವಂತಹ ಲುಕ್ಸ್ ಕೊಟ್ಟ ರಕುಲ್…!