ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೇ ಐಶ್ವರ್ಯ?

ಇಂದಿಗೂ ಸಹ ನಟಿ ಐಶ್ವರ್ಯ ರಾಯ್ ಅಂದರೇ ಅನೇಕ ಹುಡುಗರ ಕ್ರಶ್. ಅನೇಕ ಸಂದರ್ಭಗಳಲ್ಲಿ ಇಂದಿಗೂ ಸಹ ಐಶ್ವರ್ಯ ತರಹ ಇದಿಯಾ ಎಂಬೆಲ್ಲಾ ಉದಾಹರಣೆಗಳನ್ನು ಕೊಡುತ್ತಿರುತ್ತಾರೆ. ನ್ಯಾಚುರಲ್ ಸೌಂದರ್ಯದೊಂದಿಗೆ ದಶಕಗಳ ಕಾಲದಿಂದ ಪ್ರಚಲಿತದಲ್ಲಿರುವ ನಟಿ ಐಶ್ವರ್ಯ ರಾಯ್ ಇದೀಗ ಈಕೆಯ ಸೌಂದರ್ಯದ ಕುರಿತಂತೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ.

ಮಾಜಿ ವಿಶ್ವ ಸುಂದರಿ ಐಶ್ವರ್ಯ ರಾಯ್ ಕುರಿತಂತೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ. ಜೊತೆಗೆ ಕೆಲವರಂತೂ ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರ ಸೌಂದರ್ಯ. ತಮ್ಮದೇ ಆದ ನ್ಯಾಚುರಲ್ ಸೌಂದರ್ಯವನ್ನು ಹೊಂದಿದ್ದ ಈಕೆ ಏಕೆ ಇಂತಹ ನಿರ್ಣಯ ತೆಗೆದುಕೊಂಡು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಏತಕಾಗಿ ಮುಖಕ್ಕೆ ಶಸ್ತ್ರ ಚಿಕಿತ್ಸೆ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ. ಜೊತೆಗೆ ಟ್ರೋಲ್ ಗಳು ಸಹ ಹೆಚ್ಚಾಗಿಯೇ ಬರುತ್ತಿವೆ. ವಿಶ್ವ ಸುಂದರಿಯಾಗಿ ಅನೇಕರ ಮನಗೆದ್ದ ಈಕೆ ಇಂತಹ ನಿರ್ಧಾರಕ್ಕೆ ಬಂದಿದ್ದರಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಯದ್ವಾತದ್ವಾ ಟ್ರೋಲ್ ಗಳು ಸಹ ಶೇರ್‍ ಆಗುತ್ತಿವೆ.

ಕಳೆದ ಇಪ್ಪತ್ತು ವರ್ಷಗಳಿಂದ ಅಂತರಾಷ್ಟ್ರೀಯ ಕಾಣ್ ಚಿತ್ರೋತ್ಸವದಲ್ಲಿ ನಟಿ ಐಶ್ವರ್ಯ ರಾಯ್ ಪಾಲ್ಗೊಳ್ಳುತ್ತಿದ್ದಾರೆ. ಪ್ರತೀ ವರ್ಷ ಸಹ ವಿವಿಧ ರೀತಿಯಲ್ಲಿ ಪೋಸ್ ಗಳ ಮೂಲಕ ಆಕರ್ಷಣೆ ಮಾಡುತ್ತಿದ್ದರು. ಆದರೆ ಈ ಬಾರಿ ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಿದ ಡ್ರೆಸ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದರು. ಐಶ್ವರ್ಯ ರನ್ನು ನೋಡಿದ ಕೆಲ ಫ್ಯಾನ್ಸ್ ಮೆಚ್ಚಿ ತುಂಬಾ ಚೆನ್ನಾಗಿದೆ, ದೇವತೆ ಎಂಬೆಲ್ಲಾ ಪ್ರಶಂಸೆ ಮಾಡಿದರು. ಆದರೆ ಕೆಲವರು ಮಾತ್ರ ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಐಶ್ವರ್ಯ ಡ್ರೆಸ್ ಗಳಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ. ಆದರೆ ಕಾನ್ ಫೇಸ್ಟಿವಲ್ ನಲ್ಲಿ ಹೊಸ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಬಹುಶಃ ಗರ್ಭಿಣಿಯಾಗಿರಬಹುದೇನೋ ಅಥವಾ ವಯಸ್ಸಾದ ಹಿನ್ನೆಲೆಯಲ್ಲಿ ದಪ್ಪವಾಗಿದ್ದಾರೆ ಎಂಬೆಲ್ಲಾ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇನ್ನೂ ಕೆಲವರು ಅತೀ ಹೆಚ್ಚಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ನ್ಯಾಚುರಲ್ ಬ್ಯೂಟಿಯನ್ನು ಕೆಡಿಸಿಕೊಂಡಿದ್ದೀರಾ, ಮುದುಕಿಯಾಗಿಬಿಟ್ಟಿದ್ದೀರಾ, ನಿಮಗೆ ಇನ್ನೂ ತಾಯಿ ಪಾತ್ರಗಳೇ ಸಿಗುತ್ತವೆ. ಸಡನ್ ಆಗಿ ಈ ರೀತಿ ಏಕೆ ಆಗಿದ್ದೀರಾ ಎಂಬ ಕಾಮೆಂಟ್ ಗಳು ಸಹ ಬಂರುತ್ತಿವೆ. ಸುಮಾರು ದಶಕಗಳ ಕಾಲ ಮಿಂಚಿದ ನಟಿ ಐಶ್ವರ್ಯ ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದಾರೆಯೇ ಎಂಬೆಲ್ಲಾ ಪ್ರಶ್ನೆಗಳು ಸೋಷಿಯಲ್ ಮಿಡಿಯಾದಲ್ಲಿ ಹುಟ್ಟಿಕೊಂಡಿವೆ.

Previous articleಕೊಡವ ಶೈಲಿಯ ಸೀರೆಯಲ್ಲಿ ಮಿಂಚಿದ ರಶ್… ಸೋಷಿಯಲ್ ಮಿಡಿಯಾದಲ್ಲಿ ವೈರಲ್……
Next articleNTR30 ಸಿನೆಮಾದಲ್ಲಿ ಅತಿಲೋಕ ಸುಂದರಿಯ ಮಗಳು ಕಾಣಿಸಿಕೊಳ್ಳಲಿದ್ದಾರಾ?