Film News

ಕೆಜಿಎಫ್-2 ಬಿಡುಗಡೆ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಲು ಮನವಿ!

ಬೆಂಗಳೂರು: ಕೆಜಿಎಫ್-2 ಚಿತ್ರದ ಪೋಸ್ಟರ್, ಟೀಸರ್ ಮೂಲಕವೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದು, ಇದೀಗ ಅಭಿಮಾನಿಯೋಬ್ಬರು ಕೆಜಿಎಫ್-2 ಚಿತ್ರದ ಬಿಡುಗಡೆ ದಿನದಂದು ರಾಷ್ಟ್ರೀಯ ದಿನವನ್ನಾಗಿ ಘೋಷಣೆ ಮಾಡಿ ಎಂದು ಪ್ರಧಾನಿಯವರ ಬಳಿ ಪತ್ರ ಕಳಿಸಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ದೇಶದ ಸಿನಿರಂಗದಲ್ಲಿ ಇಲ್ಲಿಯವರೆಗೂ ಯಾವುದೇ ಚಿತ್ರ ಕ್ರಿಯೇಟ್ ಮಾಡದಂತಹ ಕ್ರೇಜ್ ಕೆಜಿಎಫ್ ಚಿತ್ರ ನಿರ್ಮಿಸಿದೆ ಎನ್ನಬಹುದು. ಇದರ ಭಾಗವಾಗಿಯೇ ಕೆಜಿಎಫ್-೨ ಬಿಡುಗಡೆಯಾಗಲಿರುವ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಬರೆದಿದ್ದಾರಂತೆ.

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ಕೆಜಿಎಫ್-೨ ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರ ತಾರಾಬಳಗವೇ ಇದೆ. ಇನ್ನೂ ಖಳನಾಯಕನ ಪಾತ್ರದಲ್ಲಿ ಬಾಲಿವುಡ್ ಮೇರು ನಟ ಸಂಜಯ್ ದತ್, ರಾವು ರಮೇಶ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತಷ್ಟು ಹೆಚ್ಚಿಸಿದೆ.

ಇನ್ನೂ ಬಹುನಿರೀಕ್ಷಿತ ಕೆಜಿಎಫ್-೨ ಚಿತ್ರ ಜುಲೈ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಅಂದಿನ ದಿನದಂದು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಬೇಕೆಂದು ಪ್ರಧಾನಿಗಳಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ ಅಭಿಮಾನಿಗಳು.

Trending

To Top