ಯಶ್ ಪುತ್ರಿ ಹಾಡಿದ್ಳು ಸಲಾಂ ರಾಕಿ ಭಾಯ್ ಸಾಂಗ್.. ವಿಡಿಯೋ ಭರ್ಜರಿಯಾಗಿ ವೈರಲ್

ಸ್ಯಾಂಡಲ್ ವುಡ್ ಸಿನೆಮಾ ಒಂದು ವಿಶ್ವದಲ್ಲೇ ಬಾಕ್ಸ್ ಆಫೀಸ್ ಉಡೀಸ್ ಮಾಡುತ್ತಿದೆ ಎಂದರೇ ಅದು ಕೆಜಿಎಫ್ ಸಿನೆಮಾದಿಂದ. ಸಿನೆಮಾ ರಿಲೀಸ್ ಆಗಿ ಮೂರು ವಾರಗಳು ಕಳೆದರೂ ಕಲೆಕ್ಷನ್ ನಲ್ಲಿ ಟಾಪ್ ಆಗಿದ್ದು, ಸಿನೆಮಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇಂದಿಗೆ ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲೇ ಸ್ಪಷ್ಟ ಉತ್ತರ ದೊರೆಯಲಿದೆ.

ಇನ್ನೂ ಕೆಜಿಎಫ್-2 ಯಶಸ್ಸಿನ ಬಳಿಕ ನಟ ಯಶ್ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದು, ಯಶ್ ಶೇರ್‍ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಅವರು ಶೇರ್‍ ಮಾಡಿರುವ ವಿಡಿಯೋ ಕೆಜಿಎಫ್ ಸಿನೆಮಾದ ಸಲಾಂ ರಾಕಿ ಭಾಯ್ ಹಾಡು. ಅದೇನೂ ಆ ಹಾಡು ಅಷ್ಟೊಂದು ವೈರಲ್ ಆಗುತ್ತೆ ಅಂದುಕೊಂಡ್ರೆ. ಈ ಬಾರಿ ನಟ ಯಶ್ ಪುತ್ರಿ ಐರಾ ಈ ಹಾಡನ್ನು ಹಾಡಿದ್ದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಯಶ್ ಹಂಚಿಕೊಂಡಿದ್ದಾರೆ.

ಇನ್ನೂ ಈ ವಿಡಿಯೋ ಅಪ್ ಲೋಡ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಶ್ ಪುತ್ರಿ ಐರಾ ಕೆಜಿಎಫ್-1 ರಲ್ಲಿ ಬರುವ ಸಲಾಂ ರಾಕಿ ಭಾಯ್ ಸಾಂಗ್ ಹಾಡಿದ್ದು. ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇದರ ಜೊತೆಗೆ ಪ್ರತಿದಿನ ಎದ್ದ ಕೂಡಲೇ ರಾಕಿ ಬಗ್ಗೆ ತಮಾಷೆ ಮಾಡಲೇಬೇಕು ಎಂದು ಬರೆದುಕೊಂಡು ವಿಡಿಯೋ ಶೇರ್‍ ಮಾಡಿದ್ದಾರೆ. ಇನ್ನೂ ಈ ಮುದ್ದಾದ ಪುಟಾಣಿ ವಿಡಿಯೋ ಕಂಡು ನೆಟ್ಟಿಗರು ಖುಷಿ ಪಡುವುದರ ಜೊತೆಗೆ ವೈರಲ್ ಮಾಡುತ್ತಿದ್ದಾರೆ.

Previous articleಹ್ಯಾಟ್ರಿಕ್ ಸೋಲು ಕಂಡ ಬಹುಬೇಡಿಕೆ ನಟಿ ಪೂಜಾ ಹೆಗ್ಡೆ..
Next articleಮೆಗಾಸ್ಟಾರ್ – ಬಾಬಿ ಕಾಂಬಿನೇಷನ್ ನ 154 ಸಿನೆಮಾ ಹೆಸರು ಪುನಃ ಚರ್ಚೆಗೆ !