ಶೂಟಿಂಗ್ ವೇಳೆ ಅಪಘಾತಕ್ಕೆ ಗುರಿಯಾದ ನಟ ವಿಶಾಲ್, ಸ್ಥಗಿತಗೊಂಡ ಶೂಟಿಂಗ್…!

ಕಾಲಿವುಡ್ ನಲ್ಲಿ ದೊಡ್ಡ ಸ್ಟಾರ್‍ ಡಮ್ ದಕ್ಕಿಸಿಕೊಂಡ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದಾರೆ. ಆತ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿಗ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಸಿನೆಮಾ ಒಂದರ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾಗ ಅಪಘಾತ ಒಂದು ಸಂಭವಿಸಿದ್ದು, ಆತನಿಗೆ ತೀವ್ರವಾದ ಗಾಯಗಳಾಗಿದ್ದು, ಶೂಟಿಂಗ್ ಅನ್ನು ಸಹ ಸ್ಥಗಿತಗೊಳಿಸಲಾಗಿದಯಂತೆ. ಸದ್ಯ ಗಾಯಗೊಂಡ ವಿಶಾಲ್ ರವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ನಟ ವಿಶಾಲ್ ಸಿನೆಮಾಗಳಲ್ಲಿ ಸಾಕಷ್ಟು ಆಕ್ಷನ್ ಸೀನ್ ಗಳಿರುತ್ತವೆ. ಸ್ವತಃ ಅವರೇ ಸ್ಟಂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇತ್ತೀಚಿಗೆ ಸದಾ ಆತ ಗಾಯಗೊಳ್ಳುತ್ತಿದ್ದಾರೆ.. ಅತ್ಯಂತ ಪ್ರಮಾದವಾದಂತಹ ಸ್ಟಂಟ್ಸ್ ಗಳಲ್ಲಿ ಅವರೇ ಪಾಲ್ಗೊಳ್ಳುವ ಕಾರಣದಿಂದ ಸದಾ ಪ್ರಮಾದಕ್ಕೆ ಗುರಿಯಾಗುತ್ತಿದ್ದಾರೆ. ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪ್ರಮಾದದಿಂದ ಕೂಡಿದ ಸ್ಟಂಟ್ಸ್ ಗಳನ್ನು ಡೂಪ್ಸ್ ಗಳನ್ನು ಬಳಸಿ ಶೂಟ್ ಮಾಡುತ್ತಿರುತ್ತಾರೆ. ಆದರೆ ವಿಶಾಲ್ ಮಾತ್ರ ಎಂತಹುದೇ ಸ್ಟಂಟ್ಸ್ ಇದ್ದರೂ ಸಹ ಸ್ವತಃ ಅವರೇ ಮಾಡಲು ಮುಂದಾಗುತ್ತಿರುತ್ತಾರೆ. ಇದರಿಂದಾಗಿ ವಿಶಾಲ್ ರವರು ಆಗಾಗ ಗಾಯಗಳಿಗೆ ತುತ್ತಾಗುತ್ತಿರುತ್ತಾರೆ. ಇತ್ತೀಚಿಗೆ ಅವರ ಕೈ ಬೆರಳುಗಳಿಗೆ ಗಾಯಗೊಂಡಿದ್ದು, ಕೇರಳದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಬಳಿಕ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.  ಇದೀಗ ಮತ್ತೆ ಅಪಘಾತಕ್ಕೆ ತುತ್ತಾಗಿದ್ದಾರೆ.

ನಟಿ ವಿಶಾಲ್ ಮತ್ತೊಮ್ಮೆ ಅಪಘಾತಕ್ಕೆ ತುತ್ತಾಗಿದ್ದಾರೆ. ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದು, ಈ ಸಮಯದಲ್ಲಿ ಆತ ಅಪಘಾತಕ್ಕೆ ತುತ್ತಾಗಿದ್ದಾರೆ. ವಿಶಾಲ್ ಅಭಿನಯದ ಲಾಠಿ ಎಂಬ ಸಿನೆಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈ ಶೂಟಿಂಗ್  ನಿಮಿತ್ತ ವಿಶಾಲ್ ಒಂದು ಪ್ರಮಾದಕರವಾದ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಟಂಟ್ ಮಾಡುವಾಗ ವಿಶಾಲ್ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಈ ಪ್ರಮಾದದಲ್ಲಿ ವಿಶಾಲ್ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಆತನನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಇನ್ನೂ ವಿಶಾಲ್ ಗಾಯಗೊಂಡ ಹಿನ್ನೆಲೆಯಲ್ಲಿ ಶೂಟಿಂಗ್ ಸಹ ನಿಲ್ಲಿಸಲಾಗಿದೆ. ಆತ ಗುಣಮುಖರಾದ ಬಳಿಕ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ವಿಶಾಲ್ ತಮಿಳು ಸೇರಿದಂತೆ ತೆಲುಗು ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ನಟರಾಗಿದ್ದಾರೆ. ಸದ್ಯ ಎ.ವಿನೋದ್ ಕುಮಾರ್‍ ಎಂಬ ನಿರ್ದೇಶಕನ ಸಾರಥ್ಯದಲ್ಲಿ ಮೂಡಿಬರುತ್ತಿರುವ ಲಾಠಿ ಸಿನೆಮಾದಲ್ಲಿ ನಟ ವಿಶಾಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಸುನೈನಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ವಿಶಾಲ್ ಪವರ್‍ ಪುಲ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಪಕ್ಕಾ ಆಕ್ಷನ್ ನಿಂದ ಕೂಡಿದ ಸಿನೆಮಾ ಆಗರಲಿದೆ ಎಂದು ಹೇಳಲಾಗುತ್ತಿದೆ.

Previous articleರುದ್ರಾಕ್ಷಿ ಧರಿಸಿ ಶಾಕಿಂಗ್ ಪೊಟೋಸ್ ಹಂಚಿಕೊಂಡ ಕುಮಾರ್ 21F ನಟಿ..!
Next articleಕುಡಿದು ಫ್ರೆಂಡ್ ಜೊತೆ ಒಂದು ರಾತ್ರಿ ಶಾರೀರಿಕ ಸಂಬಂಧ ಬೆಳೆಸಿದ್ದೆ, ಅದರಲ್ಲಿ ತಪ್ಪೇನಿಲ್ಲ ಎಂದ ನಟಿ..!