Film News

ಕರಣ್ ಶೋ ನಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದಾದರೂ ಏನು?

ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ರವರ ರಿಲೇಷನ್ ಶಿಪ್ ಬಗ್ಗೆ ಇಂದಿಗೂ ಸಹ ಗುಸುಗುಸು ಕೇಳಿಬರುತ್ತಿದೆ. ಬಾಳಿವುಡ್ ನ ವಿವಾದಾತ್ಮಕ ಶೋ ಎಂದೇ ಕರೆಯಲಾಗುವ ಕಾಫಿ ವಿತ್ ಕರಣ್ ಶೋ ನಲ್ಲೂ ಸಹ ಈ ಹಿಂದೆ ಜಾನ್ವಿ ಕಪೂರ್‍ ಹಾಗೂ ಸಾರಾ ಅಲಿಖಾನ್ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ಇದೀಗ ಕರಣ್ ಶೋ ನಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಭಾಗಿಯಾಗಿದ್ದರು. ಇಲ್ಲಿ ಅನೇಕ ವಿಚಾರಗಳ ಬಗ್ಗೆ ವಿಜಯ್ ದೇವರಕೊಂಡ ಬಾಯ್ಬಿಟ್ಟಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣರವರ ಬಗ್ಗೆ ಮಾತನಾಡಿರುವ ವಿಚಾರ ಹಾಟ್ ಟಾಪಿಕ್ ಆಗಿದೆ.

ಸಿನಿರಂಗದಲ್ಲಿ ವಿಜಯ್ ಹಾಗೂ ರಶ್ಮಿಕಾ ನಡುವೆ ಅನೇಕ ಗಾಸಿಪ್ ಗಳು ನಡೆಯುತ್ತಲೇ ಇರುತ್ತದೆ. ಇನ್ನೂ ಈ ಕುರಿತು ವಿಜಯ್ ಆಗಲಿ, ರಶ್ಮಿಕಾ ಆಗಲಿ ತಲೆಗೆಡಿಸಿಕೊಂಡಿಲ್ಲ. ಕೆಲವೊಂದು ಕಾರ್ಯಕ್ರಮಗಳಲ್ಲಿ ಈ ರೂಮರ್‍ ಗಳ ಬಗ್ಗೆ ಕ್ಲಾರಿಟಿಯನ್ನು ಸಹ ಕೊಟ್ಟಿದ್ದಾರೆ. ಅವರು ಎಷ್ಟೇ ಕ್ಲಾರಿಟಿ ಕೊಟ್ಟರೂ ಸಹ ಅವರ ಬಗ್ಗೆ ರೂಮರ್‍ ಗಳು ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಇದೇ ವಿಚಾರವನ್ನು ಕಾಫಿ ವಿತ್ ಕರಣ್ ಶೋ ನಲ್ಲಿ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್‍ ಸಹ ವಿಜಯ್ ರವರನ್ನು ಕೇಳಿದ್ದು, ಅದಕ್ಕೆ ವಿಜಯ್ ನೇರವಾಗಿ ಉತ್ತರವನ್ನು ನೀಡಿದ್ದಾರೆ. ಈಗಾಗಲೇ ಕರಣ್ ಶೋ ಸೀಸನ್ 7 ದೊಡ್ಡದಾಗಿಯೇ ಸದ್ದು ಮಾಡುತ್ತಿದೆ. ಈ ಸೀಸನ್ ನ ನಾಲ್ಕನೇ ಎಪಿಸೋಡ್ ನಲ್ಲಿ ಲೈಗರ್‍ ಸಿನೆಮಾದ ನಟ ವಿಜಯ್ ದೇವರಕೊಂಡ ಅನನ್ಯಾ ಪಾಂಡೆ ಜೊತೆಗೆ ಆಗಮಿಸಿದ್ದರು. ಇದೇ ಶೋ ನಲ್ಲಿ ಅನನ್ಯಾ ಬಗ್ಗೆ ಹಾಗೂ ವಿಜಯ್ ಬಗ್ಗೆ ಅನೇಕ ವಿಚಾರಗಳು ಹೊರಬಂದಿದೆ. ಈ ಹಿಂದೆ ಸೆಕ್ಸ್ ಬಗ್ಗೆ ಕರಣ್ ಕೇಳಿದ ಪ್ರಶ್ನೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಇನ್ನೂ ಕರಣ್ ಜೋಹರ್‍ ವಿಜಯ್ ದೇವರಕೊಂಡಾಗೆ ರಶ್ಮಿಕಾ ಮಂದಣ್ಣಗೂ ನಿಮಗೂ ಇರುವ ಸಂಬಂಧ ಏನು ಎಂದು ನೇರವಾಗಿ ಪ್ರಶ್ನೆ ಕೇಳಿದ್ದರು. ಕೂಡಲೇ ವಿಜಯ್ ಯಾವುದೇ ರೀತಿಯ ಭಾವನೆಯನ್ನು ತೋರ್ಪಡಿಸದೇ ನೇರವಾಗಿ ಎಲ್ಲವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಅದರಲ್ಲೂ ರಶ್ಮಿಕಾ ರವರನ್ನು ವಿಜಯ್ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆದಿದ್ದು ವಿಶೇಷವಾಗಿತ್ತು. ಇನ್ನೂ ವಿಜಯ್ ಮಾತನಾಡುತ್ತಾ, ನನ್ನ ಸಿನಿ ಕೆರಿಯರ್‍ ನಲ್ಲಿ ರಶ್ಮಿಕಾ ಜೊತೆ ಎರಡು ಸಿನೆಮಾಗಳನ್ನು ಮಾತ್ರ ಮಾಡಿದ್ದೇವೆ. ರಶ್ಮಿಕಾ ಡಾರ್ಲಿಂಗ್ ಎಂದರೇ ನನಗೆ ತುಂಬಾ ಇಷ್ಟ. ಆಕೆ ನನಗೆ ಒಳ್ಳೆಯ ಸ್ನೇಹಿತೆ. ಸಿನೆಮಾಗಳಲ್ಲಿ ನಾವು ನಟಿಸಿದರೇ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತೀದ್ದೆವು. ಬೇಗ ಕ್ಲೋಸ್ ಆದೆವು ಎಂದು ರಶ್ಮಿಕಾ ಜೊತೆ ವಿಜಯ್ ಗೆ ಇರುವ ಸಂಬಂಧದ ಬಗ್ಗೆ ಹೇಳಿದ್ದಾರೆ.

ಅಷ್ಟೇಅಲ್ಲದೇ ಒಬ್ಬ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಲು ನನೆ ಹೆಚ್ಚಿನ ಸಮಯ ಬೇಕಾಗುತ್ತದೆ. ನಿರ್ದೇಶಕರು ಏಕಾಏಕಿ ನಟಿಯನ್ನು ಪಕ್ಕ ಕೂರಿಸಿ ಅವಳ ಕೆನ್ನೆಯನ್ನು ಮುಟ್ಟಿ ಎಂದು ಹೇಳುತ್ತಾರೆ, ಅದು ತುಂಬಾ ಕಷ್ಟದ ಕೆಲಸವಾಗಿದೆ ಎಂದಿದ್ದಾರೆ. ಇನ್ನೂ ನನ್ನ ರಿಲೇಷನ್ ಶಿಪ್ ಬಗ್ಗೆ ತಿಳಿಸಲು ನನಗೆ ಇಷ್ಟವಿಲ್ಲ. ನನಗೂ ಸಹ ಮದುವೆಯಾಗಬೇಕು, ಮಕ್ಕಳನ್ನು ಪಡೆದುಕೊಳ್ಳಬೇಕು ಎಂಬೆಲ್ಲಾ ಆಸೆಗಳು ಇದೆ. ನನ್ನ ಮದುವೆ ಫಿಕ್ಸ್ ಆದಾಗ ಅಧಿಕೃತವಾಗಿಯೇ ಘೋಷಣೆ ಮಾಡುತ್ತೇನೆ. ಅಲ್ಲಿಯವರೆಗೂ ನನ್ನ ಮೇಲೆ ಕ್ರಷ್ ಇರುವವರ ಮನಸ್ಸನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ ಎಂದು ಚಾಣಾಕ್ಷತೆಯಿಂದ ಉತ್ತರ ನೀಡಿದ್ದಾರೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಕೀರ್ತಿ ಸುರೇಶ್, ಅವಕಾಶ ಸಿಗದಿದ್ದರೇ ಕೆಲಸ ಮಾಡಿಕೊಳ್ಳುತ್ತೇನೆ ಎಂದ ನಟಿ….!

ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರಾಗಿದ್ದಾರೆ. ಮಹಾನಟಿ ಎಂಬ ಸಿನೆಮಾಗಾಗಿ ಆಕೆ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಮಲಯಾಳಂ…

1 hour ago

ಕಾಂತಾರ ಸಿನೆಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ತೆಲುಗು ನಟಿ ಅನಸೂಯ…!

ಕೆಜಿಎಫ್ ಸಿನೆಮಾದ ಬಳಿಕ ಇಡೀ ದೇಶದಾದ್ಯಂತ ಅನೇಕರ ಮೆಚ್ಚುಗೆಗೆ ಪಾತ್ರವಾದ ಸಿನೆಮಾ ಕಾಂತಾರ ಎಂದೇ ಹೇಳಬಹುದು. ಕನ್ನಡದ ಖ್ಯಾತ ನಿರ್ದೇಶಕ…

2 hours ago

ಮತ್ತೊಮ್ಮೆ ಮದುವೆ ರೂಮರ್ ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ…!

ಸೌತ್ ನಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಸದಾ ಗ್ಲಾಮರ್‍ ಟ್ರೀಟ್ ನೀಡುತ್ತಲೇ ಇರುತ್ತಾರೆ. ಸೋಷಿಯಲ್…

3 hours ago

ವಿಜಯ್ ದೇವರಕೊಂಡ ತಾಯಿಯೊಂದಿಗೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್, ವೈರಲ್ ಆದ ಪೊಟೋ…!

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿಯರಲ್ಲಿ ಜಾನ್ವಿ ಕಪೂರ್‍ ಸಹ ಒಬ್ಬರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನಟಿ ಜಾನ್ವಿಗೆ…

6 hours ago

ಗ್ಲಾಮರ್ ಡೋಸ್ ಏರಿಸಿದ ರಾಶಿ ಖನ್ನಾ, ನೆವರ್ ಬಿಫೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಹುತೇಕ ನಟಿಯರು ಗ್ಲಾಮರ್‍ ಶೋ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಓವರ್‍ ಗ್ಲಾಮರ್‍ ಶೋ ಮಾಡದ…

18 hours ago

ಸೀತಾರಾಮಂ ಬ್ಯೂಟಿ ಶಾಕಿಂಗ್ ಕಾಮೆಂಟ್ಸ್, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದ ಮೃಣಾಲ್…!

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ…

19 hours ago