Film News

ವಿಜಯ್ ಮುಂದಿನ ಸಿನೆಮಾದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟಿ!

ಚೆನೈ: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ರವರ ಮುಂದಿನ ಚಿತ್ರದಲ್ಲಿ ನಾಯಕಿಯಾರಗಾಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು, ದಕ್ಷಿಣ ಭಾರತದ ಬಹುಬೇಡಿಕೆ ನಟಿಯೊಬ್ಬರು ವಿಜಯ್ ರವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ನೆಲ್ಸನ್ ದಿಲೀಪ್ ಕುಮಾರ್ ರವರ ನಿರ್ದೇಶನದಲ್ಲಿ ವಿಜಯ್ ನಟನಾಗಿ ಮೂಡಿಬರಲಿರುವ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹಾಕುತ್ತಿದ್ದು, ಸದ್ಯ ಚಿತ್ರದ ನಾಯಕಿಯ ಕುರಿತಂತೆ ಚರ್ಚೆಗಳು ನಡೆಯುತ್ತಿದೆ. ಮೂಲಗಳ ಪ್ರಕಾರ ವಿಜಯ್ ಮುಂದಿನ ಸಿನೆಮಾದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ರವರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.  ಸದ್ಯ ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದು, ಸತತವಾಗಿ ಹಿಟ್ ಸಿನೆಮಾಗಳನ್ನು ನೀಡುತ್ತಿದ್ದಾರೆ. ನಟ ವಿಜಯ್ ರವರ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸಲಿ ಎಂಬುದು ವಿಜಯ್ ಅಭಿಮಾನಿಗಳ ಆಸೆಯಿದ್ದಂಗಿದ್ದು, ಈ ಕುರಿತು ಟ್ವಿಟರ್ ನಲ್ಲಿ ಪೂಜಾ ಹೆಗ್ಡೆಯವರೇ ವಿಜಯ್ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಇನ್ನೂ ಕೆಲವೊಂದು ಮಾಹಿತಿಗಳ ಪ್ರಕಾರ ವಿಜಯ್ ರವರ ನೂತನ ಚಿತ್ರದ ನಿರ್ಮಾಪಕರೂ ಸಹ ಪೂಜಾ ಹೆಗ್ಡೆರವರೊಂದಿಗೆ ಮಾತುಕತೆ ನಡೆಸಿದ್ದು, ಕಥೆಯನ್ನು ಸಹ ತಿಳಿಸಿದಾರಂತೆ. ಪೂಜಾ ಒಪ್ಪಿಗೆ ನೀಡಿದರೇ ನಟ ವಿಜಯ್ ಜೊತೆ ಬಣ್ಣ ಹಚ್ಚಲಿದ್ದಾರೆ. ಪೂಜಾ ಹೆಗ್ಡೆ ನಟ ವಿಜಯ್ ಜೊತೆ ನಟಿಸುವ ಮೊದಲ ಚಿತ್ರ ಇದಾಗಲಿದೆ. ಅಷ್ಟೇ ಅಲ್ಲದೇ ಫೆಬ್ರವರಿ ೧ ರಂದು ವಿಜಯ್ ರವರ ಮುಂದಿನ ಚಿತ್ರದ ಕುರಿತು ಮಾಹಿತಿ ಬಹಿರಂಗ ಮಾಡಲಿದ್ದು, ಇದೇ ಸಮಯದಲ್ಲಿ ಚಿತ್ರದ ಟೈಟಲ್ ಸೇರಿದಂತೆ ಚಿತ್ರದ ನಾಯಕಿ ಕುರಿತು ಸಹ ಬಹಿರಂಗವಾಗುವ ಸಾಧ್ಯತೆಯಿದೆ.

Trending

To Top